Saturday, June 14, 2025
HomeUncategorizedಕರಾಡ ಬ್ರಾಹ್ಮಣ ಸುಧಾರಕ ಸಂಘ ಶ್ರೀನಿವಾಸಪುರ ಗುಂಡ್ಯಡ್ಕ ವತಿಯಿಂದ" ಕರಾಡ ಸಮ್ಮಿಲನ- 2025"

ಕರಾಡ ಬ್ರಾಹ್ಮಣ ಸುಧಾರಕ ಸಂಘ ಶ್ರೀನಿವಾಸಪುರ ಗುಂಡ್ಯಡ್ಕ ವತಿಯಿಂದ” ಕರಾಡ ಸಮ್ಮಿಲನ- 2025″

ದಕ್ಷಿಣ ಕನ್ನಡ : ಕರಾಡ ಬ್ರಾಹ್ಮಣ ಸುಧಾರಕ ಸಂಘ ಶ್ರೀನಿವಾಸಪುರ ಗುಂಡ್ಯಡ್ಕ ವತಿಯಿಂದ” ಕರಾಡ ಸಮ್ಮಿಲನ- 2025″ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮ ರುಕ್ಮಿಣಿ ಪಾಂಡುರಂಗ ಸಭಾಭವನ, ವಿಠೋಬಾ ರುಕುಮಾಯಿ ದೇವಸ್ಥಾನದ ಆವರಣ, ಶ್ರೀನಿವಾಸಪುರ ಗುಂಡ್ಯಡ್ಕ ಇಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಗಣಪತಿ ಹವನ ದೊಂದಿಗೆ ಆರಂಭವಾದ ಕಾರ್ಯಕ್ರಮ ನಂತರ ಸಮಾಜದ ಬಂಧುಬಗಿನಿಯರು, ಮಕ್ಕಳು, ಸಹಿತ ಹಲವರಿಂದ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ದಯಾನಂದ ಪಂಡಿತ್ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಸಮಾರಂಭವನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ನೀಡಿದ ವಿದ್ವಾನ್ ಡಾಕ್ಟರ್ ಸತ್ಯ ಕೃಷ್ಣ ಭಟ್ ಮಂಗಳೂರು ಇವರು ಮಾತನಾಡಿ ಉದಾಹರಣೆ ಸಹಿತ ಬ್ರಾಹ್ಮಣ್ಯ ಎಂದರೇನು, ಬ್ರಾಹ್ಮಣ್ಯದ ಆಚರಣೆಗಳೇನು, ಬ್ರಾಹ್ಮಣನ ಕರ್ತವ್ಯಗಳೇನು, ಬ್ರಾಹ್ಮಣ್ಯದ ಉಳಿವಿಗಾಗಿ ಏನು ಮಾಡಬೇಕಿದೆ, ಆಧುನಿಕ ಜೀವನದಲ್ಲಿ ಬ್ರಾಹ್ಮಣನ ನಿತ್ಯ ಅನುಷ್ಠಾನಗಳು, ವೇದಗಳ ಉಪಮೆಗಳ ಸನ್ನಿವೇಶಗಳ ಸಹಿತ ಮನಮುಟ್ಟುವಂತೆ ವಿವರಿಸಿದರು.
ಸಮಾರಂಭದಲ್ಲಿ ಕರಾಡ ಬ್ರಾಹ್ಮಣ ಸಮಾಜದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ವೇದಮೂರ್ತಿ ಗಿರಿಧರ ಭಟ್ ಪರಾಡ್ಕರ್, ಕರಾಡ ಬ್ರಾಹ್ಮಣ ಸಮಾಜದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಸಮಾಜ ಬಂಧುಗಳ ಸಹಕಾರ ಮತ್ತು ಮಾರ್ಗದರ್ಶನ ಪಡೆದು ಅತೀ ಶೀಘ್ರವಾಗಿ ಆರಂಭಿಸುವುದಾಗಿ ಸಮಾಜ ಬಂಧುಗಳಿಗೆ ತಿಳಿಸಿದರು.
ಗೌರವ ಉಪಸ್ಥಿತರಿದ್ದ ಮಂದಾರ ರಾಜೇಶ್ ಭಟ್ಟರು ಮಾತನಾಡಿ ಕರಾಡ ಸಮಾಜ ಸಂಘಟನಾತ್ಮಕವಾಗಿದೆ, ಇನ್ನಷ್ಟು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ, ಕರಾಡ ಯುವ ಸಮಾಜ ಮುಂದೆ ನಿಂತು, ಹಿರಿಯರ ಮಾರ್ಗದರ್ಶನ ಪಡೆದು, ಸಮಾಜದ ಸಮಸ್ಯೆಗೆ ಸ್ಪಂದಿಸಿ, ಅಸಹಾಯಕರಿಗೆ ನೆರವಾಗಬೇಕಿದೆ ಎಂದರು ಸಭಾ ಕಾರ್ಯಕ್ರಮದಲ್ಲಿ ಪಾಂಡುರಂಗ ಭಟ್ ಕಟೀಲು, ಶ್ರೀರಾಮ ಭಟ್ ಗುರ್ಜರ್ ಕೊಪ್ಪ, ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಕರಾಡ ಬ್ರಾಹ್ಮಣ ಸುಧಾರಕ ಸಂಘ ಇದರ ಅಧ್ಯಕ್ಷರಾದ ರಾಮಚಂದ್ರ ಭಟ್ ವೇದಿಕೆಯಲ್ಲಿದ್ದ ಗಣ್ಯರನ್ನು ಪ್ರೀತಿಯಿಂದ ಸ್ವಾಗತಿಸಿದರು.
ರಾಮಚಂದ್ರ ಪಂಡಿತ್ ಪ್ರಸ್ತಾವನೆ ಮಾತುಗಳನ್ನಾಡಿದರು, ಚಂದ್ರಶೇಖರ ಭಟ್, ವಿದ್ಯಾಶ್ರೀ ಪಂಡಿತ್, ಲಕ್ಷ್ಮೀಶ ಭಟ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಸುನೀತಾ ಚಿಂಚಲ್ಕರ್ ವಂದನಾರ್ಪಣೆಗೈದರು.

RELATED ARTICLES
- Advertisment -
Google search engine

Most Popular