ಅಳದಂಗಡಿಯಲ್ಲಿ ಕರೋಕೆ ಕಾರ್ಯಕ್ರಮಗಳಿಗೆ ಚಾಲನೆ: ಆಮಂತ್ರಣ ವೇದಿಕೆಯಿಂದ ಟ್ಯಾಬ್ ಹಸ್ತಾಂತರ

0
35

ಅಳದಂಗಡಿ: ಮಂಗಳೂರು ಆಮಂತ್ರಣ ವೇದಿಕೆಯ ವತಿಯಿಂದ ಅಳದಂಗಡಿಯಲ್ಲಿ ಕರೋಕೆ ಹಾಡುಗಾರಿಕೆಗೆ ಅನುಕೂಲವಾಗುವಂತೆ ಟ್ಯಾಬ್ ಹಸ್ತಾಂತರ ಹಾಗೂ ಕರೋಕೆ ಕಾರ್ಯಕ್ರಮಗಳ ಅಧಿಕೃತ ಪ್ರಾರಂಭೋತ್ಸವ ನವೆಂಬರ್ 22ರ ಭಾನುವಾರ ಸಂಜೆ 5.30ಕ್ಕೆ ಅಳದಂಗಡಿಯ ಆಮಂತ್ರಣ ಕಚೇರಿಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಆಮಂತ್ರಣ ವೇದಿಕೆ ಮಂಗಳೂರು ಅಧ್ಯಕ್ಷ ಲತೇಶ್ ಪುತ್ರನ್, ಅಳದಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲ್, ಶಿರ್ಲಾಲು ಸಿ.ಎ. ಬ್ಯಾಂಕ್‌ನ ಮಾಜಿ ಅಧ್ಯಕ್ಷ ನವೀನ್ ಸಾಮಾನಿ ಹಾಗೂ ಅಳದಂಗಡಿ ಮೂಡುಬಿದಿರೆಯ SKY LIGHT ಸಂಸ್ಥೆಯ ಪ್ರಸನ್ನ ಹೆಗ್ಡೆ ಕರಂಬಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಕರೋಕೆ ಹಾಡುಗಾರಿಕೆಗೆ ಅಗತ್ಯವಾದ ತಾಂತ್ರಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಟ್ಯಾಬ್ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರೊಂದಿಗೆ ಆಮಂತ್ರಣ ವೇದಿಕೆಯ ಕರೋಕೆ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.

AMANTRANA TEAM – GAANA YAANA ತಂಡದ ಸರ್ವಸದಸ್ಯರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಆದರದಿಂದ ಸ್ವಾಗತಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಆಹ್ವಾನಿಸಿದ್ದಾರೆ.