ಅಳದಂಗಡಿ : ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ಅಳದಂಗಡಿ ಇದರ ಉದ್ಘಾಟನಾ ಸಮಾರಂಭ ಹಾಗೂ ನೂತನ ಯಕ್ಷಗಾನ ಕಥಾ ಪ್ರಸಂಗ ‘ಸಿಂಧೂರ’ ಬಿಡುಗಡೆ ಸಮಾರಂಭ ನವೆಂಬರ್ 23ರಂದು ನಡೆಯಲಿದೆ.
ಅಂದು ಸಂಜೆ 6 ಗಂಟೆಗೆ ಅಳದಂಗಡಿ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮ ಜರುಗಲಿದ್ದು, ಶ್ರೀ ಆದಿ ಧೂಮಾವತಿ ಮತ್ತು ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮೂಲಸ್ಥಾನ ಗೆಜ್ಜೆಗಿರಿ, ಬಡಗನ್ನೂರು, ಪುತ್ತೂರು ಇವರ ವತಿಯಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಶ್ರೀ ನಿತಿನ್ ಕುಮಾರ್ ತೆಂಕಕಾರಂದೂರು ವಿರಚಿತ ‘ಸಿಂಧೂರ’ ನೂತನ ಕಥಾ ಪ್ರಸಂಗವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ಯಕ್ಷಗಾನ ಕಲೆಯ ಬೆಳವಣಿಗೆ ಹಾಗೂ ಕಲಾಸಕ್ತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಯಕ್ಷಗಾನಾಭಿಮಾನಿಗಳು, ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ಅಳದಂಗಡಿ ಪ್ರಕಟಣೆಯಲ್ಲಿ ವಿನಂತಿಸಿದೆ.

