ರಾಮಕೃಷ್ಣ ಶಿರೂರು ಅವರಿಗೆ ‘ಕರ್ನಾಟಕ ಸಾಧಕ ರತ್ನ’ ರಾಜ್ಯ ಪ್ರಶಸ್ತಿ

0
11

-ಮಂದಾರ ರಾಜೇಶ್

​ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಹಾಗೂ ಸಾಹಿತ್ಯ ಸಂಘಟಕ ಡಾ. ರಾಮಕೃಷ್ಣ ಶಿರೂರು ಅವರು ಪ್ರತಿಷ್ಠಿತ ‘ಕರ್ನಾಟಕ ಸಾಧಕ ರತ್ನ ರಾಜ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಬೈಂದೂರು ತಾಲೂಕಿನ ಶಿರೂರು ನಿವಾಸಿಗಳಾದ ಭವಾನಿ ಶಂಕರ ಶಾನುಭೋಗ ಮತ್ತು ಸರೋಜಿನಿ ದಂಪತಿ ಪುತ್ರರಾದ ಇವರು, ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಭಾಷಾ ಶಿಕ್ಷಕರಾಗಿ ಮಾತ್ರವಲ್ಲದೆ, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ವಿವಿಧ ಹಂತದ ಪದಾಧಿಕಾರಿಯಾಗಿ ಹಾಗೂ ರಾಜ್ಯ ಅಧ್ಯಕ್ಷರಾಗಿ ಅವರು ಸ್ಮರಣೀಯ ಸೇವೆಗೈದಿದ್ದಾರೆ.

ಇವರ ಈ ಶ್ಲಾಘನೀಯ ಶೈಕ್ಷಣಿಕ ಹಾಗೂ ಸಾಂಘಿಕ ಸಾಧನೆಯನ್ನು ಪರಿಗಣಿಸಿ ಈ ಗೌರವ ಒಲಿದುಬಂದಿದ್ದು, ಜನಪರವಾಣಿ ಪ್ರಕಾಶನದ ಸಂಸ್ಥಾಪಕ ಬಿ.ಎಸ್. ಬಾಗೇವಾಡಿ ಮಠ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.