Wednesday, April 23, 2025
HomeUncategorizedಕೌಶಲ್ಯ ಭವನದ ಭೂಮಿಪೂಜೆ ಕಾರ್ಯಕ್ರಮ

ಕೌಶಲ್ಯ ಭವನದ ಭೂಮಿಪೂಜೆ ಕಾರ್ಯಕ್ರಮ

ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನ ಬಹುಉದ್ದೇಶಿತ “ಕೌಶಲ್ಯ ಭವನ” ದ ಭೂಮಿ ಪೂಜೆಯುತಾ.06/04/2025 ಆದಿತ್ಯವಾರದಂದು ಜಪ್ಪು ಅರೆಕೆರೆಬೈಲಿನ ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಎದುರಿನ ನಿವೇಶನದಲ್ಲಿ ನಡೆಯಿತು. ಭಜನಾ ಮಂಡಳಿ ಹಾಗೂ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಸೀತಾರಾಮ್ ಎ ರವರ ಮುಂದಾಳತ್ವದಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಅರ್ಚಕರಾದ ಶ್ರೀ ಶ್ರೀನಿವಾಸ ಐತಾಳ್ ರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಶ್ರೀ ಜಯಾನಂದ ಬಂಗೇರ, ಪ್ರಧಾನ ಅರ್ಚಕರಾದ ಶ್ರೀ ಜನಾರ್ಧನ ಪೂಜಾರಿ, ಮಂಡಳಿಯ ಸ್ಥಾಪಕ ಸದಸ್ಯರುಗಳ ಕುಟುಂಬಸ್ಥರು, ಮಂಡಳಿಯ ಸದಸ್ಯರುಗಳು ಹಾಗೂ ಭಕ್ತಾಧಿಗಳು ಭೂಮಿ ಪೂಜೆಯಲ್ಲಿಪಾಲ್ಗೊಂಡಿದ್ದರು.

ಕೌಶಲ್ಯ ಭವನದ ವಿಶೇಷತೆ: ಸಮಾಜದಿಂದ ಮಂದಿರ, ಮಂದಿರದಿಂದ ಸಮಾಜಕ್ಕೆ ಎನ್ನುವ ವಿಶೇಷ ಪರಿಕಲ್ಪನೆಯೊಂದಿಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನ ಬಹುಪಯೋಗಿ “ಕೌಶಲ್ಯ ಭವನ” ದಲ್ಲಿ ಮಾಹಿತಿ ಕೇಂದ್ರ, ತರಬೇತಿ ಕೇಂದ್ರ,  ಸ್ತ್ರೀ ಸಬಲೀಕರಣ, ಸ್ವಉದ್ಯೋಗ ಹಾಗೂ ಬಾಲ ವಿಕಸನ ಮತ್ತು ಹಿರಿಯ ನಾಗರಿಕರ ಪುನಶ್ಚೇತನದಂತಹ ವಿಭಾಗಗಳು ಕಾರ್ಯ ನಿರ್ವಹಿಸಲಿವೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಉಮಾನಾಥ್ ಕೋಟೆಕಾರ್ ರವರು ತಿಳಿಸಿದರು.

RELATED ARTICLES
- Advertisment -
Google search engine

Most Popular