ಉಡುಪಿ : ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 2026-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೇಶವಮೂರ್ತಿ ಬೆಲ್ಪತ್ರೆ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಸಂಸ್ಥೆಯ ಗೌರವ ಅಧ್ಯಕ್ಷರಾಗಿ ಇಂದ್ರಾಳಿ ಜಯಕರ ಶೆಟ್ಟಿ, ಉಪಾಧ್ಯಕ್ಷರಾಗಿ ನಿಟ್ಟೂರು ಮಹಾಬಲ ಶೆಟ್ಟಿ, ಕಾರ್ಯದರ್ಶಿಯಾಗಿ ಗಣೇಶ್ ಕೋಟ್ಯಾನ್, ಕೋಶಾಧಿಕಾರಿಯಾಗಿ ನರಸಿಂಹ ಎನ್.ಆರ್. ಹಾಗೂ ಕಲಾ ಕಾರ್ಯದರ್ಶಿಯಾಗಿ ಡಾ. ರಮೇಶ್ ಚಿಂಬಾಲ್ಕರ್ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಗೌರವ ಸಲಹೆಗಾರರಾಗಿ ಬನ್ನಂಜೆ ಬಾಬು ಅಮೀನ್, ಗೋಪಾಲ ಕೃಷ್ಣ ಮಲ್ಯ ಹಾಗೂ ಆನಂದ ಸನಿಲ್ ಮಠದಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ. ಬಾಬು ಗೌಡ (ದೊಡ್ಡಣಗುಡ್ಡೆ), ನಿಟ್ಟೂರು ಭಾಸ್ಕರ್ ಸುವರ್ಣ, ನಾಗರಾಜ ಉಪಾಧ್ಯ, ಗುರುವ ಸುವರ್ಣ (ಬನ್ನಂಜೆ), ಯಶವಂತ್ ಅಮೀನ್ (ಮಲ್ಪೆ), ರಮೇಶ್ ಕೋಟ್ಯಾನ್, ನರಸಿಂಹ ಕಿಣಿ, ಅನಿಲ್ ಕುಮಾರ್ ಅಡೂರು, ಸೌಮ್ಯ ಯಶವಂತ್ ಹಾಗೂ ಸುಗಂಧಿ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು ಯಕ್ಷಗಾನ ಕಲೆಯ ಸಂರಕ್ಷಣೆ, ಕಲಾವಿದರ ಪ್ರೋತ್ಸಾಹ ಹಾಗೂ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

