ಬೂಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ದೀಪಾ ಭಾಸ್ತಿ ಅವರನ್ನು ಇಂದು ಕೊಡಗು ಕನ್ನಡ ಭವನ ಸಮಿತಿಯ ಪದಾಧಿಕಾರಿಗಳು ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಆದ ಶ್ರೀಯುತ ಧರ್ಮ ಸರ್ ಇವರು ಕೂಡ ನಮ್ಮೊಂದಿಗೆ ಸಾಥ್ ನೀಡಿ , ಪ್ರಶಸ್ತಿ ಪಡೆದ ದೀಪಾ ಭಾಸ್ತಿ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಪ್ರಶಸ್ತಿಯ ಹೆಮ್ಮೆ ಕೊಡಗು ಜಿಲ್ಲೆಗೆ ಮಾತ್ರವಲ್ಲ, ಬದಲಾಗಿ ಇಡೀ ಭಾರತ ದೇಶಕ್ಕೆ ಹೆಮ್ಮೆ ಎಂಬುದಾಗಿ ಕುಲಪತಿಗಳಾದ ಶ್ರೀಯುತ ಧರ್ಮ ಅವರು ಖುಷಿಯಿಂದ ನುಡಿದರು. ನಮ್ಮೆಲ್ಲರನ್ನೂ ಪ್ರೀತಿಯಿಂದ ಆತಿಥ್ಯ ನೀಡಿ, ಪ್ರೀತಿಯಿಂದ ಕುಟುಂಬ ಸಹಿತವಾಗಿ ಬಂದು ಮಾತನಾಡಿಸಿದರು. ನಿಜಕ್ಕೂ ಇದೊಂದು ಹೆಮ್ಮೆಯ ಸಂಗತಿ.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀಯುತ ಧರ್ಮ, ಕೊಡಗು ಕನ್ನಡ ಭವನದ ಅಧ್ಯಕ್ಷರಾದ ಶ್ರೀಯುತ ಬೊಳ್ಳಜಿರ ಬಿ.ಅಯ್ಯಪ್ಪ, ಕನ್ನಡ ಭವನದ ಪ್ರಧಾನ ಕಾರ್ಯದರ್ಶಿಯಾದ ಚಂದನ್ ನಂದರುಬೆಟ್ಟು, ಕೊಡಗು ಕನ್ನಡ ಭವನದ ನಿರ್ದೇಶಕರಾದ ಅರುಣ್ ಕುಮಾರ್. ಪಿ. ಹಾಜರಿದ್ದರು.