Friday, June 13, 2025
Homeಮಂಗಳೂರುಕೊಟ್ಟಾರಚೌಕಿ : ಮನೆಯೊಳಗೆ ನುಗ್ಗಿದ ಸ್ಥಳಗಳಿಗೆ ಐವನ್‌ ಡಿʼಸೋಜಾ ಭೇಟಿ

ಕೊಟ್ಟಾರಚೌಕಿ : ಮನೆಯೊಳಗೆ ನುಗ್ಗಿದ ಸ್ಥಳಗಳಿಗೆ ಐವನ್‌ ಡಿʼಸೋಜಾ ಭೇಟಿ

ಕೊಟ್ಟಾರಚೌಕಿ ವಾರ್ಡ್‌ ನಂ. 25ರಲ್ಲಿ ಮನೆಯೊಳಗೆ ನೀರು ನುಗ್ಗಿದ ಸ್ಥಳಗಳಿಗೆ ಗ್ರಾಮಲಕ್ಕಧಿಕಾರಿಗಳು ತೆರಳದೇ ವಿಳಂಬ ಮಾಡುತ್ತಿರುವುದನ್ನು ಗಮನಿಸಿ ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ಸಲ್ಲಿಸುವಂತೆ ಗ್ರಾಮಧಿಕಾರಿಗೆ ವಿಧಾನಪರಿಷತ್‌ ಐವನ್‌ ಡಿʼಸೋಜಾ ಸೂಚನೆ.

ಮಂಗಳೂರು ನಗರದ ಜಿಂಜರ್‌ ಹೋಟೇಲ್‌ನ ಬದಿಯಲ್ಲಿರುವ ತೋಡುಗಳಲ್ಲಿ ನೀರು ಹರಿಯದೇ ತೋಡುಗಳಲ್ಲಿ ಮಣ್ಣು ಮತ್ತು ಕಸ ತುಂಬಿ ನೀರು ತೋಡುಗಳಲ್ಲಿ ಹರಿಯದೇ ಅನೇಕ ಕಡೆಗಳಲ್ಲಿ ನಷ್ಟ ಉಂಟಾಗಿ ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಸ್ಥಳಗಳಿಗೆ ಭೇಟಿ ನೀಡದೇ ತನ್ನ ಕರ್ತವ್ಯವನ್ನು ನಿರ್ಲಕ್ಷಿಸಿರುವುದನ್ನು ಗಮನಿಸಿದ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ಯಾವುದೇ ವರದಿ ನೀಡದೇ ಇರುವುದನ್ನು ಗಮನಿಸಿ ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್‌ ಗಳಾದ ಎಇಇ
ಶಿವಲಿಂಗಪ್ಪ ಮತ್ತು ಜೆಇ ಪ್ರಿಯಾಂಕ ಹಾಗೂ ಸ್ಥಳೀಯ ನಾಯಕರುಗಳ ಜೊತೆ ಭೇಟಿ ಮಾಡಿ
ಗ್ರಾಮಲೆಕ್ಕಾಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿ ಕೂಡಲೇ ಭೇಟಿ ನೀಡಿ ಈ ಬಗ್ಗೆ ಕೂಡಲೇ ಕ್ರಮ
ಕೈಗೊಳ್ಳುವಂತೆ ಸೂಚಿಸಿದರು.

ಇಂತಹ ವಿಚಾರಗಳು ಅನೇಕ ಕಡೆ ನಡೆಯುತ್ತಿದ್ದರೂ, ಗ್ರಾಮಲೆಕ್ಕಾಧಿಕಾರಿಗಳು ಮತ್ತು ನಗರ ಪಾಲಿಕೆ ಇಂಜಿನಿಯರ್‌ಗಳು ನಿರ್ಲಕ್ಷತನ ವಹಿಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಲಬೇಕು ಎಂದು ನಗರ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳನ್ನು ಐವನ್‌ ಡಿʼಸೋಜಾ ಒತ್ತಾಯಿಸಿದ್ದಾರೆ. ಇದೇ ಧೋರಣೆಯು ಮುಂದುವರಿದರೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೇ ಇದ್ದರೇ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸಿ, ಇಂತಹವರ ಪಟ್ಟಿಯನ್ನು ತಯಾರಿಸಿ

ಮುಂದಿನ ಕ್ರಮ ತೆಗೆದುಕೊಳೂವುದರ ಬಗ್ಗೆ ಶಿಫಾರಸ್ಸು ಮಾಡಲಾಗುವುದು ಮಾತ್ರವಲ್ಲದೇ,
ಸಾರ್ವಜನಿಕ ಹಿತಾಸಕ್ತಿಗಳ ವಿರುದ್ದವಾಗಿ ಕೆಲಸ ಮಾಡತಕ್ಕಂತಹ ಇಂಜಿನಿಯರ್‌ಗಳು
ಗ್ರಾಮಲೆಕ್ಕಧಿಕಾರಿಗಳ ಬಗ್ಗೆ ಐವನ್‌ ಡಿʼಸೋಜಾರವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಚೇತನ್‌ ಕುಮಾರ್‌, ರೂಪಾ ಚೇತನ್‌ , ವೆಲ್ವಿನ್‌ ಕ್ಯಾಸ್ತಲಿನೋ
ಹಾಗೂ ಸ್ಥಳೀಯರು ಜೊತೆಗಿದ್ದರು.

RELATED ARTICLES
- Advertisment -
Google search engine

Most Popular