ಪುತ್ತಿಗೆಯಲ್ಲಿ ಸೆ.6ರಂದು ಕುಲಾಲ ಸಂಗಮ–2026 ಹಾಗೂ ಮಹಾಸಭೆ

0
93

ಪುತ್ತಿಗೆ : ಕುಲಾಲ ಸುಧಾರಕ ಸಂಘ, ಪುತ್ತಿಗೆ ಶಾಖೆಯ ವತಿಯಿಂದ ಕುಲಾಲ ಸಂಗಮ–2026 ಹಾಗೂ ಮಹಾಸಭೆಯು ಸೆಪ್ಟೆಂಬರ್ 6ರಂದು ಪುತ್ತಿಗೆಯಲ್ಲಿ ನಡೆಯಲಿದೆ.

ನವೀನ್ ಕಾಶಿ ಅವರ ಶ್ರೀ ಕಲ್ಲುರ್ಟಿ, ಕೊರಗಜ್ಜ, ಗುಳಿಗ ಸಾನ್ನಿಧ್ಯ, ವಿಕಾಸ್ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಿರಿಯ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಸಂಗೀತ ಕುರ್ಚಿ, ಹಿರಿಯ ಪ್ರಾಥಮಿಕ ವಿಭಾಗಕ್ಕೆ ಲಿಂಬೆ ಚಮಚ, ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ ತುಳು ಭಾಷೆಯಲ್ಲಿ 5 ನಿಮಿಷಗಳ ಭಾಷಣ ಸ್ಪರ್ಧೆ ನಡೆಯಲಿದೆ. ಭಾಷಣ ಸ್ಪರ್ಧೆಯ ವಿಷಯ ‘ಕುಲಾಲ ಸಮಾಜದ ಒಗ್ಗೂಡಿಸುವಿಕೆ ಎಂಚ’ ಎಂಬುದಾಗಿದೆ. ಯುವಕ-ಯುವತಿಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.

ಮಧ್ಯಾಹ್ನ 12 ಗಂಟೆಗೆ ಮಹಾಸಭೆನಡೆಯಲಿದೆ. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಗಲಿದ್ದು, ಕುಲಾಲ ಸುಧಾರಕ ಸಂಘ, ಪುತ್ತಿಗೆ ಶಾಖೆಯ ಕಾರ್ಯದರ್ಶಿ ಸತೀಶ್ ಜಾಲು ಪ್ರಾರ್ಥನೆ ನೆರವೇರಿಸಲಿದ್ದಾರೆ. ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್ ಸ್ವಾಗತಿಸಲಿದ್ದಾರೆ.

ಕುಲಾಲ ಸುಧಾರಕ ಸಂಘ, ಮಂಜೇಶ್ವರ ತಾಲೂಕು ಅಧ್ಯಕ್ಷ ರವೀಂದ್ರ ಮುನ್ನಿಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಆಟಿ ಕೂಟವನ್ನು ಉದ್ಘಾಟಿಸಲಿದ್ದಾರೆ. ಮೀಯಪದವು ಶಾಲೆಯ ಅಧ್ಯಾಪಕಿ ಸಾವಿತ್ರಿ ಅವರು ಆಟಿ ಕೂಟದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಕುಲಾಲ ಸುಧಾರಕ ಸಂಘ, ಮಂಜೇಶ್ವರ ತಾಲೂಕು ಸಮಿತಿ ಸದಸ್ಯ ಸುಧೀರ್ ರಂಜನ್ ಭಾಗವಹಿಸಲಿದ್ದಾರೆ. ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಲತಾ ಹಾಗೂ ದೈವದ ಕರ್ಮಿ ನವೀನ್ ಕಾಶಿ ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಕುಲಾಲ ಸುಧಾರಕ ಸಂಘ, ಪುತ್ತಿಗೆಯ ಹಿರಿಯ ಸದಸ್ಯ ಅಮ್ಮು ಮಾಸ್ತರ್ ಅವರನ್ನು ಅಭಿನಂದಿಸಲಾಗುವುದು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ. ಅಧ್ಯಾಪಕಿ ವಿಜಯ ನೂತಗುರಿ ಧನ್ಯವಾದ ಅರ್ಪಿಸಲಿದ್ದು, ಪುರುಷೋತ್ತಮ ಮಾಸ್ತರ್ ಉಪ್ಪಿನೆ ಕಾರ್ಯಕ್ರಮ ನಿರೂಪಿಸಲಿದ್ದಾರೆ.