ಮಂಗಳೂರು : ಕುಂದಾಪುರ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಆಡುಭಾಷೆಯ ಸೊಗಡನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕುಡ್ಲದಲ್ಲಿ ಕುಂದಾಪುರ ಕನ್ನಡ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ವಯೋಮಾನದವರಿಗೆ ಹಲವು ಸಾಂಪ್ರದಾಯಿಕ ಹಾಗೂ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದವರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಗೇರುಬೀಜ ಗುರಿ ಇಡು ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ರಾಘವೇಂದ್ರ ತಂಡ ಹಾಗೂ ಸಂತೋಷ್ ಶೆಟ್ಟಿ ತಂಡ, ಮಹಿಳೆಯರ ವಿಭಾಗದಲ್ಲಿ ಪ್ರತಿಭಾ ತಂಡ ಹಾಗೂ ವಂದನ ತಂಡ, ಮಕ್ಕಳ ವಿಭಾಗದಲ್ಲಿ ಧೃತಿ, ಶಶಾಂಕ ಮತ್ತು ಭುವಿಯ ತಂಡಗಳು ವಿಜೇತರಾದರು.

ರಂಗೋಲಿ ಸ್ಪರ್ಧೆಯಲ್ಲಿ ಸತ್ಯವತಿ ಹಾಗೂ ವಿಜಯ ಅವರು ಗಮನ ಸೆಳೆದರು.
ಚಮಚ–ನಿಂಬೆ ಓಟದಲ್ಲಿ ಪುರುಷರ ವಿಭಾಗದಲ್ಲಿ ಉಮೇಶ್ ಶೆಟ್ಟಿ ಮತ್ತು ಉತ್ಸವ ವಿಜೇತರಾದರೆ, ಮಕ್ಕಳ ವಿಭಾಗದಲ್ಲಿ ಭರತ್, ತನ್ವಯಿ ಹಾಗೂ ಹಿಮಾನಿ ಪ್ರಶಸ್ತಿ ಪಡೆದರು.
ಮಡಲು ನೇಯುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಪೂರ್ಣಿಮಾ ಶ್ರೀಧರ್ ಹಾಗೂ ರೇಖಾ ಗಣೇಶ್, ಪುರುಷರ ವಿಭಾಗದಲ್ಲಿ ಹರೀಶ್ ಮೊಳಹಳ್ಳಿ ಹಾಗೂ ಉಮೇಶ್ ಶೆಟ್ಟಿ ವಿಜೇತರಾದರು.
ತಲೆಯ ಮೇಲೆ ಲೋಟ ಹೊತ್ತು ಓಡುವ ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಶ್ರವಿಕ, ಆಕರ್ಷ್ ಹಾಗೂ ಅದ್ವಿತ್, ಪ್ರಾಥಮಿಕ ವಿಭಾಗದಲ್ಲಿ ವಿಧಾತ್ ಹಾಗೂ ಶೌರ್ಯ, ಮಹಿಳೆಯರ ವಿಭಾಗದಲ್ಲಿ ನಯನ ಹಾಗೂ ವಂದನ, ಪುರುಷರ ವಿಭಾಗದಲ್ಲಿ ಮಹೇಶ್ ಹಾಗೂ ಜಿ.ಕೆ. ಶೆಟ್ಟಿ ವಿಜೇತರಾದರು.

ಒಂಟಿಕಾಲಿನ ಓಟದಲ್ಲಿ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಆಕರ್ಷ್, ಪ್ರತೀಕ್ ಹಾಗೂ ಶ್ರೀಜನ್ಯ, ಪ್ರಾಥಮಿಕ ವಿಭಾಗದಲ್ಲಿ ಅಗ್ನಿ ಹಾಗೂ ಭವಿತ್ ವಿಜೇತರಾದರು.
ಬಲೂನು ಜೋಡಿ ಸ್ಪರ್ಧೆಯಲ್ಲಿ ಅಂಬಿಕಾ–ನೇತ್ರಾವತಿ ಹಾಗೂ ನಾಗರತ್ನ–ಸ್ವಾತಿ ಜೋಡಿಗಳು ವಿಜೇತರಾದರು.
ಸ್ಪರ್ಧೆಗಳನ್ನು ಕ್ರೀಡಾ ಸಮಿತಿಯ ವಸಂತ್ ಶೆಟ್ಟಿ, ವಿವೇಕ್ ಮಿತ್ಯಂತ, ಆದರ್ಶ ಶೆಟ್ಟಿ ಹಾಗೂ ಅವಿನಾಶ್ ಶೆಟ್ಟಿ ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳ ಮೂಲಕ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಉತ್ಸಾಹದಿಂದ ಪಾಲ್ಗೊಂಡು ಕುಂದಾಪುರ ಕನ್ನಡ ದಿನಾಚರಣೆಗೆ ಮೆರುಗು ತಂದರು.

