
ಹಿಂದೂ ಜಾಗರಣ ವೇದಿಕೆ ಮೂಡುಬಿದಿರ ತಾಲೂಕು,ಮಂಗಳೂರು ಗ್ರಾಮಾಂತರ ಜಿಲ್ಲೆ ಅದರ ಆಶ್ರಯದಲ್ಲಿ ದಿನಾಂಕ09-08-2026 ಆದಿತ್ಯವಾರದಂದು ಸಂಜೆ 06:30ಕ್ಕೆ ಮೂಡುಬಿದಿರೆ ಸಾವಿರ ಕಂಬದ ಬಸದಿ ಪ್ರಾಂಗಣದಿಂದ ಮೂಡುಬಿದಿರೆ ಸಮಾಜ ಮಂದಿರ ತನಕ ಪಂಜಿನ ಮೆರವಣಿಗೆ ನಡೆಯಲಿದ್ದು ಆ ಪ್ರಯುಕ್ತ ಮುದ್ರಿಸಲಾದ ಆಮಂತ್ರಣ ಪತ್ರಿಕೆಯನ್ನು ಮೂಡುಬಿದಿರೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ದೇವರ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು.
1947ರ ಆಗಸ್ಟೆ 14ಮಧ್ಯರಾತ್ರಿ ಭಾರತವು ತ್ರಿಖಂಡವಾಗಿ ಕತ್ತರಿಸಲ್ಪಟ್ಚ ಆ ಕರಾಳ ರಾತ್ರಿಯ ದುರಂತ ಘಟನೆಯನ್ನು ಸ್ಮರಿಸುತ್ತ ಕಳೆದಹೋದ ಭಾಗಗಳನ್ನು ಮತ್ತೆ ಒಂದುಗೂಡಿಸುವರೇ ಜನಜಾಗೃತಿಗಾಗಿ ಹಾಗೂ 79ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಮತ್ತು ಅಖಂಡ ಭಾರತ ದಿನ ಸಂಕಲ್ಪವಾಗಿ ಬೃಹತ್ ಪಂಜಿನ ಮೆರವಣಿಗೆ ಯನ್ನು ಪ್ರತಿ ವರ್ಷವೂ ಮಾಡುತ್ತ ಬರಲಾಗುತ್ತಿದೆ.
ಪರಮಪೂಜ್ಯ ಭಾರತ ಭೂಷಣ ಸ್ವಸ್ತಿಶ್ರೀ ಡಾ। ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ,ಜೈನ ಮಠ ಮೂಡುಬಿದಿರೆ ಅವರು ಪಂಜಿನ ಮೆರವಣಿಗೆಗೆ ಚಾಲನೆ ನೀಡಲಿರುವರು. ಮೂಡುಬಿದಿರೆಯ ಖ್ಯಾತ ನ್ಯಾಯವಾದಿ ಶರತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಅಜಯ್ ದೀಕ್ಷಿತ್ ಶೆಟ್ಟಿ ,ರುದ್ರಾಂಶ ಕನ್ಸ್ಟ್ರಕ್ಷನ್ ಮೂಡುಬಿದಿರೆ, ಕಲ್ಲಮುಂಡ್ಕೂರು ಸೇವಾ ಸಹಕಾರಿ ಸಂಘದ ನಿರ್ದೇಶಕ ವಿದ್ಯಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆಮಂತ್ರಣ ಪತ್ರಿಕೆಯ ಬಿಡುಗಡೆಯ ಈ ಸಮಾರಂಭದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ಸಮಿತ್ ರಾಜ್ ದರೆಗುಡ್ಡೆ, ಮೂಡುಬಿದಿರೆ ತಾಲೂಕು ಸಂಯೋಜಕ ಹರಿಶ್ಚಂದ್ರ ಕೆ. ಸಿ, ಸಹ ಸಂಯೋಜಕ ಸಂತೋಷ್ ಕುಮಾರ್ ಜೈನ್, ತಾಲೂಕು ಪ್ರಮುಖರಾಗಿರುವ ಅನೂಜ್ ಭಂಡಾರಿ,ಉದಯ ಬನ್ನಡ್ಕ,ಸುಧಾಕರ ಹೆಗ್ಡೆ, ಜಗದೀಶ್, ಸಮೃದ್ಧಿ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.

