ಪಡುಬಿದ್ರೆಯ ನಂದಿಕೂರಿನಲ್ಲಿ ಆಧುನಿಕ ತಂತ್ರಜ್ಞಾನದ ಎಲ್ಇಡಿ (LED) ಮತ್ತು ಫ್ಯಾನ್ಸಿ ಮಿರರ್ಗಳ ತಯಾರಿಕಾ ಘಟಕ ‘ಶ್ರೀ ರಾಮ್ ಇಂಡಸ್ಟ್ರಿಸ್’ ಇಂದು ಅತ್ಯಂತ ವಿಜೃಂಭಣೆಯಿಂದ ಉದ್ಘಾಟನೆಗೊಂಡಿದೆ ಆಧುನಿಕ ಒಳಾಂಗಣ ವಿನ್ಯಾಸಕ್ಕೆ (Interior Design) ಮೆರುಗು ನೀಡುವ ವೈವಿಧ್ಯಮಯ ಎಲ್ಇಡಿ ಮಿರರ್ಗಳು ಹಾಗೂ ಆಕರ್ಷಕ ಫ್ಯಾನ್ಸಿ ಮಿರರ್ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ.

ಇಂದಿನ ಆಧುನಿಕ ಮನೆಗಳು, ಹೋಟೆಲ್ಗಳು, ಸಲೂನ್ಗಳು ಹಾಗೂ ವಾಣಿಜ್ಯ ಮಳಿಗೆಗಳ ಅಗತ್ಯಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ಕನ್ನಡಿಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಟಚ್ ಸೆನ್ಸಾರ್ (Touch Sensor), ಡಿಫಾಗರ್ (Defogger) ಮತ್ತು ವಿವಿಧ ಬಣ್ಣದ ಲೈಟಿಂಗ್ ಸೌಲಭ್ಯವಿರುವ ಎಲ್ಇಡಿ ಮಿರರ್ಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಸ್ಥಳೀಯವಾಗಿಯೇ ಇಂತಹ ಅತ್ಯಾಧುನಿಕ ತಯಾರಿಕಾ ಘಟಕ ಆರಂಭವಾಗಿರುವುದರಿಂದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಉತ್ಪನ್ನಗಳು ಲಭ್ಯವಾಗಲಿವೆ.ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಮಾಲೀಕರು, ಕುಟುಂಬಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳು ಪಾಲ್ಗೊಂಡು ನೂತನ ಉದ್ಯಮಕ್ಕೆ ಶುಭ ಹಾರೈಸಿದ್ದಾರೆ.

