ಸ್ವದೇಶಿ ವಸ್ತುಗಳ ಬಳಕೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡೋಣ-ಡಾ.ಕಲ್ಲಡ್ಕ ಪ್ರಭಾಕರ ಭಟ್

0
18

 ಸ್ವದೇಶೀ ಜಾಗರಣ ಸೈಕ್ಲಿಂಗ್‌ಜಾಥಾಗೆ ಪುತ್ತೂರಿನಲ್ಲಿಅದ್ದೂರಿ ಸ್ವಾಗತ
 ಜಾಥಾದಲ್ಲಿಉತ್ಸಾಹದಿಂದ ಪಾಲ್ಗೊಂಡ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು
 ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಮಾಜಿಯೋಧರು, ಪುತ್ತೂರಿನ ನಾಗರಿಕರು ಸೇರಿದಂತೆ ಹಲವು ಗಣ್ಯರು ಭಾಗಿ

‘ಸ್ವದೇಶಿ ಬಳಸಿ ದೇಶ ಬೆಳೆಸಿ’ ಎಂಬ ಘೋಷವಾಕ್ಯದಡಿ, ಸಾಫ್ಟ್ವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯೋಪಯೋಗಿ ವಸ್ತುಗಳ ತನಕ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ ರಾಷ್ಟ್ರೀಯಆರ್ಥಿಕತೆಯನ್ನು ಬಲಪಡಿಸುವಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಕರ್ನಾಟಕ ಸರಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್‌ರವಿ ಮುನಿಸ್ವಾಮಿಅವರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕ್ಲಿಂಗ್‌ಅಭಿಯಾನಡಿಸೆAಬರ್೧೭ರAದು ಸಂಜೆ ಪುತ್ತೂರಿಗೆ ಆಗಮಿಸಿತು. ಸುಳ್ಯ ಮಾರ್ಗವಾಗಿ ಆಗಮಿಸಿದ ಈ ಜಾಥಾವನ್ನುದರ್ಬೆಯ ವಿನಾಯಕ ನಗರದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳು ಮತ್ತುಊರಿನ ನಾಗರಿಕರ ವತಿಯಿಂದಆರತಿ ಬೆಳಗುವ ಮೂಲಕ ಸ್ವಾಗತಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ. ಕಲ್ಲಡ್ಕ ಪ್ರಭಾಕರ ಭಟ್‌ಅವರು ಭಾರತ ಮಾತೆಗೆ ಪುಷ್ಪಾರ್ಚನೆಮಾಡುವಮೂಲಕಪುತ್ತೂರುನಗರದಲ್ಲಿಜಾಥಾಕ್ಕೆ ಚಾಲನೆನೀಡಿದರು.ಬಳಿಕ ಮಾತನಾಡಿದಅವರು, “ನನ್ನದೇಶ ಎಂಬ ಸ್ವಾಭಿಮಾನದಿಂದ ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳ ಬಳಕೆ ಮಾಡಬೇಕು.ಯಾವುದೇ ಜಾಹೀರಾತುಗಳಿರಲಿ, ಯಾರು ಏನೇ ಹೇಳಲಿ, ನಾನು ನನ್ನಊರಿನ, ನನ್ನದೇಶದ ವಸ್ತುಗಳನ್ನೇ ಬಳಕೆ ಮಾಡುತ್ತೇನೆ ಎಂಬ ಸಂಕಲ್ಪ ಮಾಡುವ ಮೂಲಕ ಬದಲಾವಣೆತರಬೇಕು.ಸ್ವದೇಶ ಉಳಿದರೆ ಸ್ವಾಭಿಮಾನ, ಸ್ವರಾಜ್ಯ, ಸ್ವರಾಜ್ಯ ಸ್ವಾತಂತ್ರ‍್ಯ. ಈ ನಿಟ್ಟಿನಲ್ಲಿದೇಶದಗಡಿಯಲ್ಲಿ ಸೇವೆ ಮಾಡಿರುವ ಸೇನೆಯ ನಿವೃತ್ತಅಧಿಕಾರಿರವಿ ಮುನಿಸ್ವಾಮಿ ನೇತೃತ್ವದಲ್ಲಿ ಸ್ವದೇಶಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿ ನಮ್ಮನ್ನು ಸ್ವದೇಶಿ ಹಳಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.ಸ್ವದೇಶಿ ಬಳಕೆ ಅವರಿಗಾಗಿಅಲ್ಲ. ಅದು ನಮಗಾಗಿ ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರೂ ಮಾಡಬೇಕಾದಅವಶ್ಯಕತೆಯಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ೩೦ ವರ್ಷಗಳಹಿಂದೆಸ್ವದೇಶಿಅಭಿಯಾನಪ್ರಾರAಭಿಸಿದಸAದರ್ಭದಲ್ಲಿದೇಶಕ್ಕೆ ರೂ.೫೫,೦೦೦ ಕೋಟಿ ಲಾಭ ಆಗುವ ಲೆಕ್ಕಾಚಾರವಿತ್ತು. ಇದೀಗ ೩೦ ವರ್ಷಗಳನಂತರಜನಸAಖ್ಯೆಏರಿಕೆಯಾಗಿದ್ದುಸ್ವದೇಶಿವಸ್ತುಗಳಬಳಕೆಯಿAದದೇಶಕ್ಕೆಲಕ್ಷಾAತರಕೋಟಿ ಉಳಿಕೆಯಾಗಲಿ” ಎಂದು ಆಶಿಸಿದರು.ಕ್ಯಾಪ್ಟನ್‌ಗಣೇಶ್‌ಕಾರ್ಣಿಕ್, ಬ್ರಿಗೇಡಿಯರ್ ಐ. ಎನ್. ರೈ, ಕರ್ನಲ್ ಶರತ್ ಭಂಡಾರಿಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸೈಕಲ್‌ಜಾಥಾದಲ್ಲಿ ಭಾಗಿಯಾದಗಣ್ಯರು
ದರ್ಬೆ ವಿನಾಯಕ ನಗರದಿಂದ ಹೊರಟು ಪುತ್ತೂರು ಮುಖ್ಯರಸ್ತೆಯ ಮೂಲಕ ನೆಹರುನಗರ ವಿವೇಕಾನಂದಆವರಣದತನಕ ಸೈಕಲ್‌ಜಾಥಾ ನಡೆಯಿತು. ಡಾ. ಕಲ್ಲಡ್ಕ ಪ್ರಭಾಕರ ಭಟ್, ಕಾಪ್ಟನ್‌ಗಣೇಶ್‌ಕಾರ್ಣಿಕ್ ಸೇರಿದಂತೆ ಹಲವು ಮಂದಿ ಸೈಕಲ್‌ಜಾಥಾದಲ್ಲಿ ಭಾಗಿಜಾಥಾಕ್ಕೆ ಚಾಲನೆ ನೀಡಿದ ಬಳಿಕ ಕಲ್ಲಡ್ಕಡಾ.ಪ್ರಭಾಕರ ಭಟ್, ವಿಧಾನ ಪರಿಷತ್‌ಮಾಜಿಸದಸ್ಯಕ್ಯಾಗಣೇಶ್‌ಕಾರ್ಣಿಕ್, ವಿವೇಕಾನಂದವಿದ್ಯಾವರ್ಧಕಸAಘದ ಕಾರ್ಯದರ್ಶಿಡಾ. ಕೆ. ಎಂ ಕೃಷ್ಣಭಟ್‌ರವರುತಾವೇಸೈಕಲ್‌ಸವಾರಿಮಾಡುವಮೂಲಕಜಾಥಾದಲ್ಲಿಸಾಗಿದರು. ಸುಮಾರು ೫ ಕಿ.ಮೀದೂರದಜಾಥಾದಲ್ಲಿಮಾಜಿಸೈನಿಕರು, ಬ್ಯಾಂಕ್ ಉದ್ಯೋಗಿಗಳು, ವಿಜ್ಞಾನಿಗಳು, ಪುತ್ತೂರಿನ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಂಜಿನಿಯರ್‌ಗಳು, ವೈದ್ಯರು, ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಸ್ಥರುಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here