ಶ್ರೀ ಸಿಟಿಯ ಹೊಸ ಉತ್ಪಾದನಾ ಘಟಕವು 2026ರ ಅಂತ್ಯಕ್ಕೆ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ನಿರೀಕ್ಷೆ ಇದೆ
ಶ್ರೀ ಸಿಟಿ, ಆಂಧ್ರ ಪ್ರದೇಶ, ಮೇ 8, 2025 ಎಲ್.ಜಿ.ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿ.(ಎಲ್.ಜಿ.ಇ.ಐ.ಎಲ್.) ಆಂಧ್ರ ಪ್ರದೇಶದ ಶ್ರೀ ಸಿಟಿಯಲ್ಲಿ ಹೊಸ ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭಿಸಲು ಬದ್ಧವಾಗಿರುವುದಾಗಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದು ಈ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ಸರ್ಕಾರದ ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಸಂವಹನಗಳು, ರಿಯಲ್ ಟೈಮ್ ಗೌರ್ನೆನ್ಸ್ ಹಾಗೂ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆಯ ಮಾನ್ಯ ಸಚಿವರಾದ ಶ್ರೀ ನಾರಾ ಲೋಕೇಶ್ ಉಪಸ್ಥಿತರಿದ್ದರು.ಈ ಹೊಸ ಘಟಕವು 2026ರ ಅಂತ್ಯಕ್ಕೆ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ನಿರೀಕ್ಷೆ ಇದೆ.
ಶ್ರೀ ಸಿಟಿಯ ಕೈಗಾರಿಕಾ ಪ್ರದೇಶದಲ್ಲಿರುವ ಈ ಹೊಸ ಉತ್ಪಾದನಾ ಘಟಕವು ಎಲ್.ಜಿ.ಇ.ಐ.ಎಲ್. ಸಾಮರ್ಥ್ಯ ಹೆಚ್ಚಿಸಲಿದೆ ಮತ್ತು ಈ ಪ್ರದೇಶದಲ್ಲಿ ಸ್ಥಳೀಯ ಉದ್ಯೋಗಾವಕಾಶ ಹೆಚ್ಚಿಸಲಿದೆ. ಈ ಹೊಸ ಸೌಲಭ್ಯವು ಭಾರತದಲ್ಲಿ ಮೂರನೇ ಘಟಕವಾಗಲಿದೆ. ಇತರೆ ಎರಡು ಘಟಕಗಳು ಉತ್ತರ ಪ್ರದೇಶದ ಗ್ರೇಟರ್ ನೊಯಿಡಾ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿವೆ. ಈ ಹೂಡಿಕೆಯು ಎಲ್.ಜಿ. ಎಲೆಕ್ಟ್ರಾನಿಕ್ಸ್ ಜಾಗತಿಕ ಪೂರೈಕೆ ಸರಣಿಯ ಒಳಗಡೆ ಭಾರತದ ಸಂಭವನೀಯ ಪ್ರಮುಖ ಕೇಂದ್ರವಾಗುವುದನ್ನು ಎತ್ತಿ ತೋರಿಸಿದೆ.
ಆಂಧ್ರ ಪ್ರದೇಶ ಸರ್ಕಾರವು ಎಲ್.ಜಿ.ಇ.ಐ.ಎಲ್.ಗೆ 247 ಎಕರೆ ಭೂಮಿಯನ್ನು ಹೊಸ ಘಟಕ ನಿರ್ಮಾಣಕ್ಕೆ ನೀಡಿದ್ದು ಇದು 1495 ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಈ ಸೌಲಭ್ಯದಲ್ಲಿ ಎಲ್.ಜಿ.ಇ.ಐ.ಎಲ್.ನ ಹೂಡಿಕೆಯು ನಾಲ್ಕು ವರ್ಷಗಳಲ್ಲಿ 600 ಮಿಲಿಯನ್ ಯು.ಎಸ್. ಡಾಲರ್ (ರೂ.5001 ಕೋಟಿ) ಆಗಲಿಗೆ ಮತ್ತು ಅದರೊಂದಿಗೆ ಈ ಪ್ರದೇಶಕ್ಕೆ ಪೂರಕ ಉದ್ಯಮಗಳನ್ನು ತರುವ ಮೂಲಕ ಆಂಧ್ರ ಪ್ರದೇಶ ರಾಜ್ಯದಲ್ಲಿ ಶ್ವೇತ ಉತ್ಪನ್ನಗಳ ಉತ್ಪಾದನೆಯ ವ್ಯವಸ್ಥೆ ಸೃಷ್ಟಿಸಲಿದೆ.
ಶ್ರೀ ಸಿಟಿಯ ಹೊಸ ಘಟಕವು ಉತ್ಪಾದನೆಯಲ್ಲಿ ಮತ್ತಷ್ಟು ಸ್ಥಳೀಕರಿಸಲಿದೆ ಮತ್ತು ಭಾರತದಾದ್ಯಂತ ಎಲ್.ಜಿ. ಉತ್ಪನ್ನಗಳ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲಿದೆ. ಇದು ಜಿ.ಇ.ಐ.ಎಲ್.ನ ಪೂರೈಕೆ ಸರಣಿಯನ್ನು ದಕ್ಷಿಣ ಭಾರತದಲ್ಲಿ ಸದೃಢಗೊಳಿಸಲಿದ್ದು ಈ ಪ್ರದೇಶದ ಗ್ರಾಹಕರಿಗೆ ಎಲ್.ಜಿ. ಉತ್ಪನ್ನಗಳ ಲಭ್ಯತೆಗೆ ವೇಗ ನೀಡಲಿದೆ. ಈ ಸೌಲಭ್ಯವು ವಿಸ್ತಾರ ಶ್ರೇಣಿಯ ಉತ್ಪನ್ನಗಳನ್ನು ಉತ್ಪಾದಿಸಲಿದ್ದು ಅದರಲ್ಲಿ ಎಸಿ ಕಂಪ್ರೆಸರ್ ಗಳು, ರೆಫ್ರಿಜಿರೇಟರ್ ಗಳು, ವಾಷಿಂಗ್ ಮೆಷಿನ್ ಗಳು ಮತ್ತು ಏರ್ ಕಂಡೀಷನರ್ ಗಳಿವೆ.
ಶ್ರೀ ನಾರಾ ಲೋಕೇಶ್ ಮತ್ತುಅವರ ಉಪಸ್ಥಿತಿಯೊಂದಿಗೆ ಈ ಕಾರ್ಯಕ್ರಮದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ದಕ್ಷಿಣ ಕೊರಿಯಾದ ಎಲ್.ಜಿ.ಎಲೆಕ್ಟ್ರಾನಿಕ್ಸ್ ಎಕ್ಸಿಕ್ಯೂಟಿವ್ಸ್ ಭಾಗವಹಿಸಿದ್ದು ಅವರಲ್ಲಿ ಎಲ್.ಜಿ. ಹೋಮ್ ಅಪ್ಲಯನ್ಸ್ ಸಲ್ಯೂಷನ್ ಕಂಪನಿಯ ಅಧ್ಯಕ್ಷ ಲ್ಯು ಜೇ-ಚಿಯೊಲ್, ಎಲ್ಜಿ. ಇಕೊ ಸಲ್ಯೂಷನ್ ಕಂಪನಿಯ ಅಧ್ಯಕ್ಷ ಜೇಮ್ಸ್ ಲೀ ಮತ್ತು ಎಲ್.ಜಿ.ಇ.ಐ.ಎಲ್. ವ್ಯವಸ್ಥಾಪಕ ನಿರ್ದೇಶಕ ಹೊಂಗ್ ಜು ಜಿಯೊನ್ ಮತ್ತಿತರೆ ಸರ್ಕಾರಿ ಅಧಿಕಾರಿಗಳು ಮತ್ತು ಎಲ್.ಜಿ.ಇ.ಐ.ಎಲ್.ಹಿರಿಯ ನಾಯಕರು ಕೂಡಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿಯಿಂದ ತಮ್ಮ ಅಭಿನಂದನೆಗಳನ್ನು ತಿಳಿಸಿದ ಆಂಧ್ರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು, “ನಾವು ಹೃದಯಪೂರ್ವಕವಾಗಿ ಆಂಧ್ರ ಪ್ರದೇಶದ ಶ್ರೀ ಸಿಟಿಗೆ ಎಲ್.ಜಿ. ಎಲೆಕ್ಟ್ರಾನಿಕ್ಸ್ ಅನ್ನು ಸ್ವಾಗತಿಸುತ್ತೇವೆ. ಆಂಧ್ರ ಪ್ರದೇಶದಲ್ಲಿ ಎಲ್.ಜಿ. ಎಲೆಕ್ಟ್ರಾನಿಕ್ಸ್ ನ ಹೊಸ ಉತ್ಪಾದನಾ ಘಟಕದ ಪ್ರಕಟಣೆಯು ಉದ್ಯಮ ಸ್ನೇಹಿ, ಸುಲಭವಾಗಿ ಉದ್ಯಮ ನಿರ್ವಹಣೆ, ಆವಿಷ್ಕಾರಕ್ಕೆ ಉತ್ತೇಜನ ಮತ್ತು ವಿಶ್ವಮಟ್ಟದ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗುವ ಆಂಧ್ರ ಪ್ರದೇಶದ ಪ್ರಗತಿಪರ ನೀತಿಗಳಿಗೆ ಸಾಕ್ಷಿಯಾಗಿದೆ. ಅತ್ಯುತ್ತಮವಾಗಿ ರೂಪಿಸಿದ ಕೈಗಾರಿಕಾ ವ್ಯವಸ್ಥೆ, ಅತ್ಯುತ್ತಮ ಕನೆಕ್ಟಿವಿಟಿ ಮತ್ತು ಉದ್ಯಮ ಸ್ನೇಹಿ ವಾತಾವರಣದಿಂದ ಶ್ರೀ ಸಿಟಿಯನ್ನು ಹೊಸ ಘಟಕಕ್ಕೆ ಅತ್ಯುತ್ತಮ ತಾಣವಾಗಿಸಿದೆ” ಎಂದರು.
ಆಂಧ್ರ ಪ್ರದೇಶ ಸರ್ಕಾರದ ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಸಂವಹನಗಳು, ರಿಯಲ್ ಟೈಮ್ ಗೌರ್ನೆನ್ಸ್ ಹಾಗೂ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆಯ ಮಾನ್ಯ ಸಚಿವರಾದ ಶ್ರೀ ನಾರಾ ಲೋಕೇಶ್, “ಎಲ್.ಜಿ. ಎಲೆಕ್ಟ್ರಾನಿಕ್ಸ್ ಭಾರತದಲ್ಲಿ ತನ್ನ ಮೂರನೇ ಉತ್ಪಾದನಾ ಘಟಕ ಪ್ರಾರಂಭಿಸಲು ಶ್ರೀ ಸಿಟಿಯನ್ನು ಆಯ್ಕೆ ಮಾಡಿಕೊಂಡಿರುವದು ನಮಗೆ ಬಹಳ ಸಂತೋಷ ತಂದಿದೆ. ಇದು ಭಾರತಕ್ಕೆ ಎಲ್.ಜಿ. ಎಲೆಕ್ಟ್ರಾನಿಕ್ಸ್ ಬದ್ಧತೆಗೆ ಸಾಕ್ಷಿಯಾಗಿದೆ ಮತ್ತು ಆಂಧ್ರ ಪ್ರದೇಶಕ್ಕೆ ಈ ವಿಸ್ತರಣೆಯು ಭಾರತದಾದ್ಯಂತ ಎಲ್.ಜಿ. ಉತ್ಪನ್ನಗಳಿಗೆ ಸಂಭವನೀಯ ಬೇಡಿಕೆಯನ್ನು ಪೂರೈಸಲಿದೆ ಎಂಬ ವಿಶ್ವಾಸ ನನ್ನದು” ಎಂದರು.
“ನಾವು ಭಾರತದೊಂದಿಗೆ ನಮ್ಮ ಸಹಯೋಗ ವಿಸ್ತರಿಸುವಲ್ಲಿ ಮತ್ತು ಅದರ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುವಲ್ಲಿ ಮತ್ತೊಂದು ಪ್ರಮುಖ ಮೊದಲ ಹೆಜ್ಜೆ ಇರಿಸಿದ್ದೇವೆ. ನಮ್ಮ ಮೂರನೇ ಉತ್ಪಾದನಾ ಘಟಕದ ನಿರ್ಮಾಣವು ನೊಯಿಡಾ ಮತ್ತು ಪುಣೆಯಲ್ಲಿ ನಮ್ಮ ಪ್ರಸ್ತುತ ಇರುವ ಉತ್ಪಾದನಾ ಘಟಕಗಳಿಗೆ ಪೂರಕವಾಗಿರುತ್ತದೆ ಮತ್ತು ಭಾರತದಲ್ಲಿ ನಮ್ಮ ಪ್ರಯಾಣದಲ್ಲಿ ಹೊಸ ಮೈಲಿಗಲ್ಲು ಆಗಲಿದೆ” ಎಂದು ಲ್ಯು ಹೇಳಿದರು. “ಈ ಹೊಚ್ಚಹೊಸ ಸೌಲಭ್ಯವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ಸ್ಥಳೀಯ ಉತ್ಪಾದನೆ ಹೆಚ್ಚಿಸಲಿದೆ” ಎಂದರು.