ಮುಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಪದಗ್ರಹಣ ಸಮಾರಂಭ ಮುಲ್ಕಿಯ ಬಿಲ್ಲವ ಮಹಾಮಂಡಲದಲ್ಲಿ ಜರುಗಿತು. ಈ ಸಂದರ್ಭ ವಿದ್ಯಾಭ್ಯಾಸಕ್ಕಾಗಿ ಆದಿತ್ಯ, ಅನುಜ್ಞ ಅವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಉಮೇಶ್ ಕಾರಂತ, ವಿಶ್ವನಾಥ್ ಭಟ್, ಪುಷ್ಪ ಕವತಾರ್ ಅವರಿಗೆ ಹಾಗೂ ಮನೆ ನಿರ್ಮಾಣಕ್ಕಾಗಿ ಭವಾನಿ ಶೆಟ್ಟಿ ಹಾಗೂ ಇನ್ನಿತರ ಸೇವಾ ಕಾರ್ಯಕ್ರಮಗಳು ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಲಯನ್ಸ್ ರಾಜ್ಯಪಾಲ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ನಿಯೋಜಿತ ದ್ವಿತೀಯ ಉಪ ರಾಜ್ಯಪಾಲರಾದ ಲ.ಎಚ್ಎಂ ತಾರನಾಥ್ , ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್, ಅಧ್ಯಕ್ಷ ಲ. ಅನಿಲ್ ಕುಮಾರ್, ಕಾರ್ಯದರ್ಶಿ ಲ.ಅಶ್ವಿನಿ ಪ್ರಸಾದ್, ಕೋಶಾಧಿಕಾರಿ ಲ ಸಂತೋಷ್ ಕುಮಾರ್, ಪ್ರತಿಭಾ ಹೆಬ್ಬಾರ್, ಲಯನ್ಸ್ ವಲಯ ಅಧ್ಯಕ್ಷರುಗಳಾದ ರೋಷನ್ ಡಿಸೋಜಾ, ಉಮೇಶ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಶಿವಪ್ರಸಾದ್, ಎಕ್ಸಟೆನ್ಶನ್ ಚೇರ್ಮನ್ ಓಸ್ವಾಲ್ಡ್ ಡಿಸೋಜಾ ನಿಕಟ ಪೂರ್ವ ರಾಜ್ಯಪಾಲರಾದ ಡಾಕ್ಟರ್ ಮೇಲ್ವಿನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪುಷ್ಪರಾಜ್ ಚೌಟ ನಿರೂಪಿಸಿದರು.