ಮಹಾರಾಷ್ಟ್ರ ರಾಜ್ಯ ಮಟ್ಟದ ಭಜನಾ ಸ್ಪರ್ಧೆ-2026 : 500 ಭಜನಾ ಮಂಡಳಿಗಳಿಂದ ಸ್ಪರ್ಧೆ ; ₹1 ಲಕ್ಷ ಪ್ರಥಮ ಬಹುಮಾನ

0
7

ಮುಂಬಯಿ : ಭಜನ ಮಂಡಳಿಯ ಒಕ್ಕೂಟದ ಸಂಸ್ಥೆ (ರಿ.), ಮುಂಬಯಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಹಾರಾಷ್ಟ್ರ ಘಟಕದ ಆಶ್ರಯದಲ್ಲಿ ಮಹಾರಾಷ್ಟ್ರ ರಾಜ್ಯ ಮಟ್ಟದ ಭಜನಾ ಸ್ಪರ್ಧೆ-2026 ಆಯೋಜಿಸಲಾಗಿದೆ. ತುಳು-ಕನ್ನಡಿಗರ ಭಜನಾ ಮಂಡಳಿಗಳಿಗೆ ಈ ಸ್ಪರ್ಧೆ ಉತ್ತಮ ವೇದಿಕೆಯಾಗಿದ್ದು, ರಾಜ್ಯದ 36 ಜಿಲ್ಲೆಗಳಿಂದ ಸುಮಾರು 500 ಭಜನಾ ಮಂಡಳಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಸ್ಪರ್ಧೆಯ ಪ್ರಾಥಮಿಕ ಹಂತದ ಬಳಿಕ 30 ಭಜನಾ ಮಂಡಳಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು.

ಬಹುಮಾನಗಳ ವಿವರ:
🥇 ಪ್ರಥಮ ಬಹುಮಾನ: ₹1,00,000 ಹಾಗೂ ಪ್ರಶಸ್ತಿ ಫಲಕ
🥈 ದ್ವಿತೀಯ ಬಹುಮಾನ: ₹75,000 ಹಾಗೂ ಪ್ರಶಸ್ತಿ ಫಲಕ
🥉 ತೃತೀಯ ಬಹುಮಾನ: ₹50,000 ಹಾಗೂ ಪ್ರಶಸ್ತಿ ಫಲಕ
🎖️ 7 ಸಮಾಧಾನಕರ ಬಹುಮಾನಗಳು: ತಲಾ ₹5,000 ಹಾಗೂ ಪ್ರಶಂಸೆ

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಭಜನಾ ಮಂಡಳಿಗಳು ಮೊದಲು ಸ್ಪರ್ಧೆಯ ನಿಯಮಗಳನ್ನು ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ಭಾಗವಹಿಸುವವರು ತಮ್ಮ ಹೆಸರು ಹಾಗೂ ಅಗತ್ಯ ಮಾಹಿತಿಯನ್ನು ದಾಖಲಿಸಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಿಂದ ಸ್ಪರ್ಧೆಯ ನಿಯಮಗಳನ್ನು ಡೌನ್‌ಲೋಡ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದ್ದು, ಆಯೋಜಕರು ನೀಡಿರುವ ಸಂಪರ್ಕ ಸಂಖ್ಯೆಗಳ ಮೂಲಕವೂ ಮಾಹಿತಿ ಪಡೆಯಬಹುದು.

ಸಂಪರ್ಕಕ್ಕೆ:
8169834645
7738652181
9702234922
9870184595
9867496563
7666753145