Saturday, June 14, 2025
HomeUncategorizedಮಹಾತ್ಮ ಜ್ಯೋತಿಬಾಪುಲೇ ಕೊರಗರ ಯುವ ಯುವಕಲಾವೇದಿಕೆ ಬೈಂದೂರು ಇವರ ವತಿಯಿಂದ ತಾಲೂಕು ಆಡಳಿತ ಕಚೇರಿಯ ಎದುರು...

ಮಹಾತ್ಮ ಜ್ಯೋತಿಬಾಪುಲೇ ಕೊರಗರ ಯುವ ಯುವಕಲಾವೇದಿಕೆ ಬೈಂದೂರು ಇವರ ವತಿಯಿಂದ ತಾಲೂಕು ಆಡಳಿತ ಕಚೇರಿಯ ಎದುರು ಪ್ರತಿಭಟನೆ

ಮಹಾತ್ಮ ಜ್ಯೋತಿಬಾಪುಲೇ ಕೊರಗರ ಯುವ ಯುವಕಲಾವೇದಿಕೆ ಬೈಂದೂರು ಇವರ ವತಿಯಿಂದ ಬೈಂದೂರು ತಾಲೂಕಿನ ಕೊರಗರಿಗೆ ಭೂಮಿಯ ಹಕ್ಕನ್ನು ನೀಡುವುದು ಹಾಗೂ ಭೂಮಿಯ ಸಮಸ್ಯೆಯನ್ನು ಸರಿಪಡಿಸುವ ಕುರಿತು ಬೈಂದೂರು ತಾಲೂಕು ಆಡಳಿತ ಕಚೇರಿಯ ಎದುರು ಪ್ರತಿಭಟನೆ ರ್ಯಾಲಿ ನಡೆಸಲಾಯಿತು.
ಕುಂದಾಪುರ ತಾಲೂಕಿನ ಕೊರಗ ಸಂಘಟನೆ ಅಧ್ಯಕ್ಷರಾದ ಗಣೇಶ್ ಕುಂದಾಪುರ ಮಾತನಾಡಿ ಬೈಂದೂರು ತಾಲೂಕಿನ ಕೊರಗ ಸಮುದಾಯದ ಹಲವು ಕುಟುಂಬಗಳಿಗೆ ಭೂಮಿ ಇಲ್ಲ, ಈ ಮೊದಲು ಅನೇಕ ಬಾರಿ ಕೊರಗರಿಗೆ ಭೂಮಿಯನ್ನು ನೀಡುವ ಕುರಿತು ಸಭೆಗಳು, ಚರ್ಚೆಗಳು ನಡೆದಿರುತ್ತದೆ. ಈ ವರೆಗೂ ಯಾರಿಗೂ ಕೂಡ ಭೂಮಿ ನೀಡಿರುವುದಿಲ್ಲಾ. ಕೊರಗ ಸಮುದಾಯದವರಿಗೆ ಕೃಷಿ ಚಟುವಟಿಕೆಗೆ ಯೋಗ್ಯವಾದ ಭೂಮಿಯನ್ನು ನೀಡಬೇಕೆಂದು ಹಾಗೂ ಈ ಕೆಳಗಿನ ನಿರ್ದಿಷ್ಟ ಸಮಸ್ಯೆಗೆ ಶೀಘ್ರವೇ ಸ್ಪಂದಿಸಿ ಭೂಮಿ ಸಮಸ್ಯೆಯನ್ನು ಸರಿಪಡಿಸಿ ಕೊಡುವುದರೊಂದಿಗೆ ಕೊರಗರ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೇಳಿಕೊಂಡರು.

ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ ಕೂಡಲೇ ತಹಶೀಲ್ದಾರ್ ಅವರ ಅಧ್ಯಕ್ಷತೆ ಹಾಗೂ ಎಸಿ ಅವರ ಒಂದು ಉಪಸ್ಥಿತಿಯಲ್ಲಿ ಕೊರಗರ ಭೂಮಿ ಸಮಸ್ಯೆ ಬಗ್ಗೆ ತುರ್ತು ಸಭೆಯನ್ನು ಕರೆದು ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುದಗಿ ಹೇಳಿದರು

ವೈ ಲಕ್ಷ್ಮಣ ಕೊರಗ ಅಧ್ಯಕ್ಷರು ಮಹಾತ್ಮ ಜ್ಯೋತಿಬಾಪುಲೇ ಕೊರಗರ ಯುವ ಕಲಾವೇದಿಕೆ ಬೈಂದೂರು ಮಾತನಾಡಿ ಕೊರಗರಿಗೆ ಭೂಮಿಯ ಹಕ್ಕನ್ನು ನೀಡುವುದು ಹಾಗೂ ಭೂಮಿಯ ಸಮಸ್ಯೆಯನ್ನು ಸರಿಪಡಿಸುವ ಕುರಿತು ಚರ್ಚಿಸಲಾಯಿತು ತದನಂತರ ಗಿರಿಜನ ಸಮನ್ವಯ ಅಧಿಕಾರಿ ನಾರಾಯಣ ಸ್ವಾಮಿ ಸಮಾಜ ಕಲ್ಯಾಣ ಅಧಿಕಾರಿಯಾದ ರಮೇಶ್ ಕುಲಾಲ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಸಿ.ಐ. ಟಿ.ಯು ಸುರೇಶ್ ಕಲ್ಗಾರ್ ಮತ್ತು ರಾಜು ಪಡುಕೋಣೆ, ಗಣೇಶ್ ಬಾರ್ಕೂರು, ಸುರೇಶ್ ಎಳಜಿತ್, ಸುಬ್ರಹ್ಮಣ್ಯ ಬಿಜೂರ್, ಗಣೇಶ್ ಪೂಜಾರಿ ಸೂರಸಿದ್ದ ಹೇರೂರು, ದಲಿತ ಸಂಘದ ಮುಖಂಡರು,
ಕೊರಗ ಸಮುದಾಯದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular