Friday, June 13, 2025
HomeUncategorizedಅಪ್ಪನ ಬದುಕಿನ ಮಾರ್ಮಿಕ ಸತ್ಯ

ಅಪ್ಪನ ಬದುಕಿನ ಮಾರ್ಮಿಕ ಸತ್ಯ

ದಿಕ್ಕೂಚಿ ಇಲ್ಲದೆ ದೋಣಿ ದಡ ಸೇರುವುದು ಕಷ್ಟ. ಹಾಗೆ ತಂದೆಯ ಮಾರ್ಗದರ್ಶನ, ಸಹಕಾರ, ಬೆಂಬಲವಿಲ್ಲದ
ಬದುಕಿನಲ್ಲಿ ಮಕ್ಕಳು ಯಶಸ್ಸು ಕಾಣುವುದಾಗಲಿ. ತೃಪ್ತಿ ಪಡೆಯುವುದಾಗಲಿ ಕಷ್ಟ. ಜಗತ್ತಿನಲ್ಲಿ ಅಮ್ಮ ಎಷ್ಟು
ಶ್ರೇಷ್ಠಳೋ ಮಕ್ಕಳ ಭವಿಷ್ಯಕ್ಕೆ ಅಪ್ಪನೂ ಅಷ್ಟೇ ಶ್ರೇಷ್ಠ ವ್ಯಕ್ತಿ, ತಾಯಿಗೆ ಸಾಮಾನ್ಯವಾಗಿ ಮಕ್ಕಳ ಲಾಲನೆ
ಪಾಲನೆ ಬಗ್ಗೆ ಆಲೋಚನೆಗಳಿದ್ದರೆ, ತಂದೆಗೆ ಇಡೀ ಸಂಸಾರವನ್ನು ಹೇಗೆ ಸುಖ ಸಂತೋಷವೆಂಬ ದಡ
ಸೇರಿಸಬೇಕು ಎಂಬ ದೂರ ಆಲೋಚನೆಗಳ ಕನಸು ಹೊತ್ತಿರುತ್ತಾನೆ. ತಂದೆ ಸಂಸಾರಕ್ಕೆ ಒಂದು ದೊಡ್ಡ ನಿಧಿ
ಇದ್ದ ಹಾಗೆ, ತಂದೆ ಒಬ್ಬ ಪೋಷಕನಾಗಿ, ರಕ್ಷಕನಾಗಿ, ಪಾಲಕನಾಗಿ, ಶಿಕ್ಷಕನಾಗಿ, ಗುರುವಾಗಿ ಸಲಹೆಗಾರನಾಗಿ,
ತಾಳ್ಮೆಯ ಕೇಳುಗನಾಗಿ. ಧೈರ್ಯ ತುಂಬುಬ ಶಕ್ತಿಯಾಗಿ, ಸಲಹೆಗಾರನಾಗಿ, ಬದುಕಿನ ಯಶಸ್ಸಿನ ರಹಸ್ಯ ತಿಳಿಸಿಕೊಡುವ ವ್ಯಕ್ತಿಯಾಗಿ, ಬದುಕಿಗೆ ಭರವಸೆ ತುಂಬಿ ಭವಿಷ್ಯದ ಬಗ್ಗೆ ನಂಬಿಕೆ ಮತ್ತು ಮಾನಸಿಕ ಧೈರ್ಯ ತುಂಬುವ ವ್ಯಕ್ತಿಯಾಗಿ ಸಂಸಾರದ ಬೆನ್ನೆಲುಬಾಗಿ ಹೀಗೆ ಹತ್ತಾರು ಪಾತ್ರಗಳಲ್ಲಿ ಸಂಸಾರದ ಏಳಿಗೆಗೆ ಶ್ರಮಿಸುವ ವ್ಯಕ್ತಿ ಅಪ್ಪ.

ಭದ್ರವಾದ ಬುನಾದಿಯ ಮೇಲೆ ಕಟ್ಟಿದ ಮನೆ ಹೇಗೆ ಭದ್ರವಾಗಿರುತ್ತದೆಯೋ ಹಾಗೆ ಅಪ್ಪನ ಒಳ್ಳೆಯ
ಸಂಸ್ಕಾರದಲ್ಲಿ ಬೆಳೆದ ಮಕ್ಕಳ ಭವಿಷ್ಯ ಕೂಡ ಭದ್ರವಾಗಿ ರೂಪುಗೊಳ್ಳಲು ಸಾಧ್ಯ. ಅಪ್ಪನ ಶ್ರಮ ಮತ್ತು ತ್ಯಾಗದಲ್ಲಿ ಮಕ್ಕಳ ಸುಂದರ ಭವಿಷ್ಯ ಅಡಗಿರುತ್ತದೆ. ಚಿಕ್ಕವರಾಗಿದ್ದಾಗ ಅಪ್ಪ ಇಷ್ಟಾನೋ ಅಮ್ಮ ಇಷ್ಟಾನೋ ಅಂತ ಕೇಳಿದಾಗ ನಾವು ಅಮ್ಮ ಅಂತ ಹೇಳಿದ್ರೂ, ಏಟುಬಿದ್ದಾಗ ಅಮ್ಮ ಅಂತ ಕೂಗಿದ್ರು, ಯಾವತ್ತೂ ಸಿಟ್ಟಾಗದೆ ಖುಷಿ ಪಡುವ ತಂದೆಗೆ ನಾವು ಒಂದು ಸರಿನೋ ಪ್ರೀತಿ ವ್ಯಕ್ತಪಡಿಸದಿದ್ದರೂ ಪ್ರಶಂಸೆ ಮಾಡದಿದ್ದರೂ ಎಷ್ಟೇ ಕಡೆಗಾಣಿಸಿದರು ನಮ್ಮನ್ನು ಪ್ರೀತಿಸುವ ವ್ಯಕ್ತಿ ಅಪ್ಪ. ನಾನು ಹೇಗಿದ್ದರೂ ಪರವಾಗಿಲ್ಲ.

ಮಕ್ಕಳು ಸಂತೋಷವಾಗಿರಲಿ ಎನ್ನುವ ತ್ಯಾಗಮೂರ್ತಿ. ಮಕ್ಕಳ ಭವಿಷ್ಯಕ್ಕಾಗಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ, ಬೇಡಿದನ್ನೆಲ್ಲ ಕೊಡುವವನು ಆ ದೇವರು, ಆದರೆ ಬೇಡದೆ ಬಯಸಿದ್ದನ್ನೆಲ್ಲಾ ಕೊಡಿಸುವ ವ್ಯಕ್ತಿ ಅಪ್ಪ ಒಬ್ಬನೇ. ಒಬ್ಬ ತಂದೆ ಮಕ್ಕಳಿಗೋಸ್ಕರ ಮತ್ತು ಸಂಸಾರದ ಏಳಿಗೆಗೋಸ್ಕರ ಯಾರಿಗೂ ಹೇಳದೆ ಎಷ್ಟು ಸಾಲ ಮಾಡುವ
ಸಂದರ್ಭಗಳು ಬರುತ್ತವೆ ನಿಮಗೆ ಗೊತ್ತೇ? ಸ್ವಲ್ಪ ಆಲೋಚಿಸಿ ನೋಡೋಣ ಸಣ್ಣ ಮಕ್ಕಳು ಇದ್ದಾಗ ಆಟಿಕೆ
ಸಾಮಾನುಗಳನ್ನು ಕೊಡಿಸುವುದರಿಂದ ಹಿಡಿದು ಪ್ರತಿಯೊಂದು ಬೇಡಿಕೆಗಳನ್ನು ಅಪ್ಪ ಈಡೇರಿಸುತ್ತಲೇ
ಬರುತ್ತಾನೆ. ವಿದ್ಯಾಭ್ಯಾಸಕ್ಕಾಗಿ, ಅಮ್ಮನ ಬೇಡಿಕೆಗಳನ್ನು ಈಡೇರಿಸಲಿಕ್ಕಾಗಿ, ಸಂಬAಧಿಕರ ಹಾಗೂ ಗೆಳೆಯರ ಕಷ್ಟಕ್ಕಾಗಿ ಅದೆಷ್ಟು ಸಾಲ. ಹಣಕಾಸಿನ ವ್ಯವಹಾರದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುತ್ತಾನೆ. ಲೈಫ್ ಇನ್ಶುರೆನ್ಸ್ ಹಾಗೂ ಆರ್.ಡಿ. ಖಾತೆಗಳಿಗೆ ಸಂಸಾರದ ಉತ್ತಮ ಭವಿಷ್ಯಕ್ಕಾಗಿ ಮತ್ತು ದೂರ ದೃಷ್ಟಿಯಿಂದ ಮಕ್ಕಳ ಮದುವೆಗಾಗಿ ಉಳಿತಾಯ ಖಾತೆಗಳಿಗೆ ಹಣ ಕಟ್ಟಲು ಒದ್ದಾಡುತ್ತಿರುತ್ತಾನೆ. ತಾನು ಹಳೆಯ ಸಣ್ಣ ಮೊಬೈಲ್ ಇಟ್ಟುಕೊಂಡಿದ್ದರು ಮಕ್ಕಳಿಗೆ ದೊಡ್ಡ ಮೊಬೈಲ್ ಕೊಡಿಸುವ ಹಂಬಲ. ತಾನು ಹಳೇ ಬಟ್ಟೆಗಳನ್ನೇ ತೊಟ್ಟು ಸರಳ ಜೀವನ ನಡೆಸಿ ಮಕ್ಕಳಿಗೆ ಐಷಾರಾಮಿ ಬೈಕು, ಕಂಪ್ಯೂಟರ್, ಡ್ರೆಸ್ ಮೊಬೈಲ್‌ಗಳ ಬೇಡಿಕೆಗಳನ್ನು ಈಡೇರಿಸಲು ಹೊಡೆದಾಡುತ್ತಿರುತ್ತಾನೆ.

ತಂದೆ-ತಾಯಿ ಮತ್ತು ಅಜ್ಜ-ಅಜ್ಜಿಯರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಕಣ್ಣಿಂದ ನೋಡಿ ಸುಮ್ಮನಿರಲಾಗಿರದೆ ಸಾಲ ಸೋಲ ಮಾಡಿಯಾದರೂ ಆಸ್ಪತ್ರೆಗೆ ತೋರಿಸುತ್ತಾನೆ. ಹೀಗೆ ಬೆಟ್ಟದಷ್ಟು ಕಷ್ಟ ಇದ್ದರು ದಡ ಸೇರಿಸುವ ಪ್ರಯತ್ನದಲ್ಲಿ ತನ್ನ ಆರೋಗ್ಯದ ಬಗ್ಗೆಯೂ ಗಮನಿಸದೆ ಲೆಕ್ಕಿಸದೆ ತನ್ನ ಯೌವನವನ್ನು ಸಂಸಾರಕ್ಕಾಗಿ ಮುಡುಪಿಟ್ಟು ಹಗಲು ಇರುಳು ದುಡಿದು ಸಂಸಾರಕ್ಕೆ ಬೆಳಕು ಕೊಡುವ ವ್ಯಕ್ತಿ ಅಂದರೆ ಅಪ್ಪ ಒಬ್ಬನೇ. ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳಿಸುವಾಗಲಿ, ಮಗನನ್ನು ವಿದ್ಯಾಭ್ಯಾಸಕ್ಕೆ ಅಥವಾ ಕೆಲಸಕ್ಕೆ ಬೇರೆ ಊರಿಗೆ ಕಳಿಸುವಾಗ ಅವನಿಗೆ ಎಷ್ಟು ದುಃಖ ಬಂದರೂ ತೋರಿಸಿಕೊಳ್ಳದೆ ಬದಿಗೆ (ಸೈಡಿಗೆ) ಹೋಗಿ ಕಣ್ಣಲ್ಲಿ ತುಂಬಿರುವ ಕಣ್ಣೀರನ್ನು ಒರೆಸಿಕೊಂಡು ಬಂದು ಮತ್ತೆ ಧೈರ್ಯ ತುಂಬಿ ಕಳುಹಿಸುವ ಅಪ್ಪನ ಸಂಬAಧ ಪ್ರೀತಿಯನ್ನು ಎಂದೂ ಮರೆಯಲಾಗದು. ಸಂಸಾರ ಮತ್ತು ತನ್ನ ವೃತ್ತಿ, ಜವಾಬ್ದಾರಿಗಳನ್ನು ಸಮತೋಲನವಾಗಿ ತೂಗಿಸಿಕೊಂಡು ಎಲ್ಲರಿಗೂ ಒಳ್ಳೆಯವನಾಗುವ ಪ್ರಯತ್ನದಲ್ಲೇ ತೊಡಗಿರುತ್ತಾನೆ. ಇವತ್ತಿನ ಮಕ್ಕಳು ಮೊಬೈಲ್ ಜೊತೆ ಕಳೆದ ಸಮಯವನ್ನು ತಂದೆ-ತಾಯಿಯ ಜೊತೆ ಕಳೆಯುವುದಿಲ್ಲ ಮತ್ತು ಅವರ ಭಾವನೆಗಳಿಗೆ ಸ್ಪಂದಿಸಿ ಮಾತನಾಡುವುದಿಲ್ಲ. ಇದು ಒಂದು ದೊಡ್ಡ ದುರಂತ. ಮಗಳನ್ನು ಅಳಿಯ ಕರೆದುಕೊಂಡು ಹೋದರೆ, ಮಗನನ್ನು ಸೊಸೆ ಕರೆದುಕೊಂಡು ಹೋಗುತ್ತಾಳೆ. ಕೊನೆಗೆ ಉಳಿಯೋರು ಮಕ್ಕಳಿಂದ ಏನನ್ನು ಅಪೇಕ್ಷೆ ಪಡೆದ ಅಪ್ಪ-ಅಮ್ಮ ಇಬ್ಬರೇ. ನಮ್ಮ ಎಲ್ಲಾ ಕಷ್ಟಗಳಿಗೂ ಸ್ಪಂದಿಸುವ ತಾಯಿಯನ್ನು ಮತ್ತು ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ಮಕ್ಕಳ ಭವಿಷ್ಯದ ಬಗ್ಗೆ ಸದಾ ಯೋಚಿಸುವ ತಂದೆ-ತಾಯಿಯ ತ್ಯಾಗವನ್ನು ವರ್ಣಿಸಲು ಶಬ್ದಗಳೇ ಇಲ್ಲ.

ತಂದೆ ತಾಯಿಗಳು ಎಂದೂ ತಮ್ಮ ಸಾವಿನ ಬಗ್ಗೆ ಯೋಚಿಸುವುದಿಲ್ಲ ಆದರೆ ನನ್ನ ಸಾವಿನ ನಂತರ ನಮ್ಮ ಮಕ್ಕಳ ಸುಖ-ದುಃಖ, ಕಷ್ಟಗಳನ್ನು ಕೇಳಿ ಸಮಾಧಾನಪಡಿಸುವವರು, ಧೈರ್ಯ ತುಂಬುವರು ಇಲ್ಲವಂತಾಗುತ್ತದೆ ಎಂಬುದಕ್ಕೆ ಚಿಂತಿಸುತ್ತಿರುತ್ತಾರೆ ಎಷ್ಟು ಜನ್ಮ ಎತ್ತಿ ಬಂದರೂ ತಂದೆ ತಾಯಿಯ ಋಣ ತೀರಿಸಲು
ಸಾಧ್ಯವಿಲ್ಲ. ತಂದೆ ಬೆವರಿನ ಒಂದು ಹನಿ ಋಣವನ್ನು ಕೂಡ ಮಕ್ಕಳಿಗೆ ತಿರಿಸಲು ಸಾಧ್ಯವೇ ಇಲ್ಲ ಇದು ಸತ್ಯ. ಮಕ್ಕಳ ಏಳಿಗೆಗಾಗಿ ಕೊನೆಗಾಲದಲ್ಲಿ ಬಿಡಿಗಾಸನ್ನು ಉಳಿಸಿಕೊಳ್ಳದೆ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಅಪ್ಪ ಅಮ್ಮನಿಗೆ ಮುಪ್ಪು ಬಂದಾಗ ಕಾಲು ಮುರಿದು ಕುಂಟ ಕುದುರೆ ಭೂಮಿಗೆ ಭಾರವೆಂದು ವೃದ್ದಾಶ್ರಮಕ್ಕೆ ಸೇರಿಸುವ ಇವತ್ತಿನ ಕೆಲವು ಮಕ್ಕಳಿಗೆ ಅಪ್ಪನ ಬೆಲೆ ಕೊನೆಗೂ ತಿಳಿಯುವುದೇ ಇಲ್ಲ. ಇದು ಒಂದು ದೊಡ್ಡ ದುರಂತ. ನನ್ನ ಮಗ ನನ್ನ ಮಾತು ಕೇಳದಿದ್ದಾಗ ಸ್ಪಂದಿಸಿ ಸಹಕರಿಸದೆ ಇದ್ದಾಗ ಬೆಲೆ ಕೊಡದೆ ಇದ್ದಾಗ, ಪ್ರೀತಿ ತೋರಿಸದೆ ಇದ್ದಾಗ ಮಾತ್ರ ಸತ್ತು ಸ್ವರ್ಗ ಸೇರಿದ್ದ ನನ್ನ ತಂದೆಯ ಬೆಲೆ ಮತ್ತು ತ್ಯಾಗ ಅರ್ಥವಾಗುತ್ತದೆ ಮತ್ತು ವ್ಯಥೆಯಾಗಿ
ಮರುಕಳಿಸುತ್ತದೆ. ಇದ್ದಾಗ ತಂದೆ ತಾಯಿಯ ಮನಸ್ಸು ನೋಯಿಸಿ, ಸತ್ತ ನಂತರ ನಿತ್ಯ ದಾನ ಮತ್ತು ಧ್ಯಾನ ಮಾಡಿದರೆ ಪಾಪ ಪರಿಹಾರವಾದೀತೆ? ಬೆಲೆ ಕಟ್ಟಲಾಗದ ಅಪ್ಪನನ್ನು ಅರ್ಥ ಮಾಡಿಕೊಳ್ಳುವ ಮಕ್ಕಳಾಗಲೀ, ಗಂಡ ಇದ್ದಾಗ ಗಂಡನನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಹೆಂಡತಿಯಾಗಲೀ ಬಹಳ ವಿರಳ.

ಅಪ್ಪ ಸತ್ತ ನಂತರವೇ ಅವನ ಬದುಕಿನ ಮಾರ್ಮಿಕ ಸತ್ಯ ಮತ್ತು ಸಂಸಾರಕ್ಕೋಸ್ಕರ ಮಾಡಿದ ತ್ಯಾಗದ ಅರಿವು ಆಗುತ್ತದೆ. ತ್ಯಾಗದ ಇನ್ನೊಂದು ಅರ್ಥವೇ ಅಪ್ಪ. ಜೀವನದಲ್ಲಿ ತಂದೆಯ ಕೈ ಹಿಡಿದರೆ ಜಗತ್ತಿನಲ್ಲಿ ಯಾವ ವ್ಯಕ್ತಿಯ ಕಾಲು ಹಿಡಿಯುವ ಸಂದರ್ಭ ಬರುವುದಿಲ್ಲ. ಅಪ್ಪ ಅಂದರೆ ಕೇವಲ ಜೀವ ತ್ಯಾಗವನ್ನು ವರ್ಣಿಸಲು ಶಬ್ದಗಳೇ ಇಲ್ಲ. ತಂದೆ ತಾಯಿಗಳು ಎಂದೂ ತಮ್ಮ ಸಾವಿನ ಬಗ್ಗೆ ಯೋಚಿಸುವುದಿಲ್ಲ ಆದರೆ ನನ್ನ ಸಾವಿನ ನಂತರ ನಮ್ಮ ಮಕ್ಕಳ ಸುಖ-ದುಃಖ, ಕಷ್ಟಗಳನ್ನು ಕೇಳಿ ಸಮಾಧಾನಪಡಿಸುವವರು, ಧೈರ್ಯ ತುಂಬುವರು ಇಲ್ಲವಂತಾಗುತ್ತದೆ ಎಂಬುದಕ್ಕೆ ಚಿಂತಿಸುತ್ತಿರುತ್ತಾರೆ ಎಷ್ಟು ಜನ್ಮ ಎತ್ತಿ ಬಂದರೂ ತಂದೆ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ತಂದೆ ಬೆವರಿನ ಒಂದು ಹನಿ ಋಣವನ್ನು ಕೂಡ ಮಕ್ಕಳಿಗೆ ತಿರಿಸಲು ಸಾಧ್ಯವೇ ಇಲ್ಲ ಇದು ಸತ್ಯ. ಮಕ್ಕಳ ಏಳಿಗೆಗಾಗಿ ಕೊನೆಗಾಲದಲ್ಲಿ ಬಿಡಿಗಾಸನ್ನು ಉಳಿಸಿಕೊಳ್ಳದೆ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಅಪ್ಪ ಅಮ್ಮನಿಗೆ ಮುಪ್ಪು ಬಂದಾಗ ಕಾಲು ಮುರಿದು ಕುಂಟ ಕುದುರೆ ಭೂಮಿಗೆ ಭಾರವೆಂದು ವೃದ್ದಾಶ್ರಮಕ್ಕೆ ಸೇರಿಸುವ ಇವತ್ತಿನ ಕೆಲವು ಮಕ್ಕಳಿಗೆ ಅಪ್ಪನ ಬೆಲೆ ಕೊನೆಗೂ ತಿಳಿಯುವುದೇ ಇಲ್ಲ.
ಇದು ಒಂದು ದೊಡ್ಡ ದುರಂತ. ನನ್ನ ಮಗ ನನ್ನ ಮಾತು ಕೇಳದಿದ್ದಾಗ ಸ್ಪಂದಿಸಿ ಸಹಕರಿಸದೆ ಇದ್ದಾಗ ಬೆಲೆ ಕೊಡದೆ ಇದ್ದಾಗ, ಪ್ರೀತಿ ತೋರಿಸದೆ ಇದ್ದಾಗ ಮಾತ್ರ ಸತ್ತು ಸ್ವರ್ಗ ಸೇರಿದ್ದ ನನ್ನ ತಂದೆಯ ಬೆಲೆ ಮತ್ತು ತ್ಯಾಗ
ಅರ್ಥವಾಗುತ್ತದೆ ಮತ್ತು ವ್ಯಥೆಯಾಗಿ ಮರುಕಳಿಸುತ್ತದೆ. ಇದ್ದಾಗ ತಂದೆ ತಾಯಿಯ ಮನಸ್ಸು ನೋಯಿಸಿ, ಸತ್ತ
ನಂತರ ನಿತ್ಯ ದಾನ ಮತ್ತು ಧ್ಯಾನ ಮಾಡಿದರೆ ಪಾಪ ಪರಿಹಾರವಾದೀತೆ? ಬೆಲೆ ಕಟ್ಟಲಾಗದ ಅಪ್ಪನನ್ನು ಅರ್ಥ
ಮಾಡಿಕೊಳ್ಳುವ ಮಕ್ಕಳಾಗಲೀ, ಗಂಡ ಇದ್ದಾಗ ಗಂಡನನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ
ಹೆಂಡತಿಯಾಗಲೀ ಬಹಳ ವಿರಳ.

ಅಪ್ಪ ಸತ್ತ ನಂತರವೇ ಅವನ ಬದುಕಿನ ಮಾರ್ಮಿಕ ಸತ್ಯ ಮತ್ತು ಸಂಸಾರಕ್ಕೋಸ್ಕರ ಮಾಡಿದ ತ್ಯಾಗದ ಅರಿವು ಆಗುತ್ತದೆ. ತ್ಯಾಗದ ಇನ್ನೊಂದು ಅರ್ಥವೇ ಅಪ್ಪ. ಜೀವನದಲ್ಲಿ ತಂದೆಯ ಕೈ ಹಿಡಿದರೆ ಜಗತ್ತಿನಲ್ಲಿ ಯಾವ ವ್ಯಕ್ತಿಯ ಕಾಲು ಹಿಡಿಯುವ ಸಂದರ್ಭ ಬರುವುದಿಲ್ಲ. ಅಪ್ಪ ಅಂದರೆ ಕೇವಲ ಜೀವ.

ಹೆಚ್.ವಿ. ಮಂಜುನಾಥ ಸ್ವಾಮಿ, ಮೊಬೈಲ್ ೯೮೪೪೮೮೨೩೬೬

RELATED ARTICLES
- Advertisment -
Google search engine

Most Popular