ಉಪ್ಪಿನಂಗಡಿಯಲ್ಲಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿ ಕಳವು

0
5

ಉಪ್ಪಿನಂಗಡಿ : ಇಲ್ಲಿನ ಮಠ ಎಂಬಲ್ಲಿ ಗ್ಯಾರೇಜ್‌ನಲ್ಲಿ ದುರಸ್ತಿ ಕೆಲಸಕ್ಕಾಗಿ ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿಯನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಲಾರಿ ಮಾಲಕ ಅನೀಶ್ ತೋನ್ಸನ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅನೀಶ್ ಅವರು ಸುಮಾರು ಒಂದೂವರೆ ತಿಂಗಳ ಹಿಂದೆ ತಮ್ಮ ಟಿಪ್ಪರ್ ಲಾರಿಯನ್ನು ಮಠದ ಗ್ಯಾರೇಜ್‌ನಲ್ಲಿ ಬಾಡಿ ಕೆಲಸಕ್ಕಾಗಿ ನಿಲ್ಲಿಸಿದ್ದರು. ಬಳಿಕ ನವೆಂಬರ್ 12ರಂದು ಮಠದ ಆಟೋ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸಕ್ಕಾಗಿ ಲಾರಿಯನ್ನು ನಿಲ್ಲಿಸಲಾಗಿತ್ತು.

ನವೆಂಬರ್ 15ರಂದು ರಾತ್ರಿ 10:35ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ಲಾರಿಯನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳವಾದ ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಎಂದು ತಿಳಿಸಲಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.