ಕಾರ್ಕಳ ಸಂತ್ವಾನ ಕೇಂದ್ರ ಹಾಗೂ ಶಿಶು ಪಾಲನ ಕೇಂದ್ರದ ವಿಡಿಯೋ ಮೂಲಕ ಅಧಿಕಾರಿಗಳಿಗೆ ಪ್ರಶ್ನೆ : ರಮಿತಾ ಸೂರ್ಯವಂಶಿ

0
7

ಕಾರ್ಕಳ : ಮಹಿಳೆಯರ ನೋವಿನ ಸ್ಪಂದನೆಗೆ ನಿರ್ಮಾಣವಾದ ಕಾರ್ಕಳದ ಸಾಂತ್ವಾನ ಕೇಂದ್ರದಲ್ಲಿ ಮಹಿಳೆಯರ ನೋವಿಗೆ ಸ್ಪಂದಿಸ ಬೇಕಾದ ಕೌಂಸೆಲ್ಲಿಂಗ್ ಕೊಡುವ ವ್ಯಕ್ತಿ ಯಾರು ಎಂದು ನಿಖರ ವಿಡಿಯೋದ ಮೂಲಕ ಪತ್ತೆ ಹಚ್ಚಿ ಅಧಿಕಾರಿಗಳಿಗೆ ಸಾಕ್ಷಿ ಸಮೇತ ರಮಿತಾ ಸೂರ್ಯವಂಶಿ ಅವರು ಹಿಡಿದು ಕೊಟ್ಟಿದ್ದಾರೆ.

ಅದೇ ರೀತಿ ಶಿಶು ಪಾಲನ ಕೇಂದ್ರವು ಮಹಡಿಯ ಮೇಲೆ ನಡೆಯುತ್ತಿದ್ದು ಅದು ಕೂಡ ಮಕ್ಕಳಿಗೆ ಸುರಕ್ಷಿತ ವಿಲ್ಲದೆ ಇರುವುದನ್ನು ಸಾಕ್ಷಿ ಸಮೇತ ಹಿಡಿದು ಕೊಟ್ಟಿದಾರೆ.
ಸತತ 2ವರ್ಷದಿಂದ ಇದರ ಹಿಂದೆ ಹೋರಾಟ ಮಾಡುತಿದ್ದು ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದ ಮೇಲೂ ಯಾವುದೇ ರೀತಿಯ ಸ್ಪಂದನೆ ಇಲ್ಲದ್ದನ್ನು ಗಮನಿಸಿ ಸಾಕ್ಷಿ ಹಿಡಿಯಲು ನೇರವಾಗಿ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾನಗಳಲ್ಲಿ ಪ್ರಚಾರ ಆದ 2ತಾಸು ಗಳಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ನೇರ ಸ್ಥಳಕ್ಕೆ ಭೇಟಿ ನೀಡಿ ಕ್ರಮ ತೆಗೆದು ಕೊಂಡಿರುವುದು ಗಮನಕ್ಕೆ ಬಂದಿದ್ದೆ ಹಾಗಾಗಿ ಇನ್ನಾದರೂ ಇಂತಹ ಕಛೇರಿಗಳಲ್ಲಿ ದುರುಪಯೋಗ ಆಗದಂತೆ ನಡೆದು ಕೊಳ್ಳುವಂತೆ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತಾರೆ.