
ಮಂಗಳೂರು : ವಿಶ್ವದ ಪ್ರಮುಖ 4 ನೇ ಆಭರಣ ಮಾರಾಟ ಸಂಸ್ಥೆಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ & ಡೈಮಂಡ್ಸ್, ತನ್ನ ಗ್ರಾಹಕರಿಗಾಗಿ ಬಹು ನಿರೀಕ್ಷಿತ ಆಂಟಿಕ್ ಜ್ಯುವೆಲರಿಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮಂಗಳೂರಿನ ಶೋರೂಮಿನಲ್ಲಿ ಅದ್ಧೂರಿಯಾಗಿ ಆರಂಭಿಸಿದೆ.
ಪರಂಪರೆ, ಸಂಸ್ಕೃತಿ ಮತ್ತು ರಾಜಮನೆತನದ ಸೊಬಗನ್ನು ಪ್ರತಿಬಿಂಬಿಸುವ ನೂರಾರು ವಿಶಿಷ್ಟ ವಿನ್ಯಾಸಗಳ ಆಭರಣಗಳನ್ನು ಒಳಗೊಂಡ ಈ ಪ್ರದರ್ಶನವು ಸೆಪ್ಟೆಂಬರ್ 09 ರಿಂದ ಸೆಪ್ಟೆಂಬರ್ 17 ರವರೆಗೆ 9 ದಿನಗಳ ಕಾಲ ಮಂಗಳೂರಿನ ಮಲಬಾರ್ ಗೋಲ್ಡ್ & ಡೈಮಂಡ್ಸ್ ಶೋರೂಮಿನಲ್ಲಿ ನಡೆಯಲಿದೆ.
ಈ ವಿಶೇಷ ಪ್ರದರ್ಶನವನ್ನು ಮಿಸೆಸ್ ಇಂಡಿಯಾ ಕರ್ನಾಟಕ 2025 ಪ್ರಶಸ್ತಿ ವಿಜೇತರಾದ ತಶ್ಮ ಚೇತನ್ ಉತ್ಪನ್ನ ಅನಾವರಣಗೊಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆ ಯಾವಾಗಲೂ ಪರಂಪರೆಗೆ ಆಧುನಿಕತೆಯ ಸ್ಪರ್ಶ ನೀಡುವ ಆಭರಣಗಳನ್ನು ಪರಿಚಯಿಸುತ್ತಿದೆ. ಈ ಆಂಟಿಕ್ ಸಂಗ್ರಹವು ಪ್ರತಿಯೊಬ್ಬ ಮಹಿಳೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಿ.ಎಚ್.ಡಿ. ಸಂಶೋಧಕಿ ರೇಷ್ಮಾ ಕೋಟೆ ಅವರು ಮಾತನಾಡಿ, “ಈ ಆಂಟಿಕ್ ಜ್ಯುವೆಲರಿ ಸಂಗ್ರಹವನ್ನು ವಿಶೇಷವಾಗಿ ಆಭರಣ ಪ್ರಿಯರು, ಮದುವೆಗೆ ಸಿದ್ಧರಾಗುತ್ತಿರುವ ವಧುಗಳು, ಹಾಗೂ ಹಬ್ಬ, ನಿಶ್ಚಿತಾರ್ಥ ಮತ್ತು ಇತರ ವಿಶೇಷ ಸಂದರ್ಭಗಳಿಗಾಗಿ ವಿಭಿನ್ನ ಹಾಗೂ ವಿಶೇಷ ವಿನ್ಯಾಸದ ಆಭರಣಗಳನ್ನು ಹುಡುಕುತ್ತಿರುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಆಭರಣದಲ್ಲೂ ಕರಕುಶಲತೆಯ ಅದ್ಭುತತೆಯನ್ನು ಕಾಣಬಹುದು” ಎಂದು ಹೇಳಿದರು.
ಪ್ರದರ್ಶನದ ವಿಶೇಷತೆಗಳು:
ಪ್ರದರ್ಶನದ ಅವಧಿಯಲ್ಲಿ ಶೋರೂಮಿಗೆ ಭೇಟಿ ನೀಡಿ ಆಂಟಿಕ್ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಚಾರ್ಜ್ ಮೇಲೆ ಶೇ. 50 ರ ವರೆಗೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದು ಗ್ರಾಹಕರಿಗೆ ತಮ್ಮ ಕನಸಿನ ಆಭರಣಗಳನ್ನು ಅತ್ಯಂತ ಆಕರ್ಷಕ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶವಾಗಿದೆ.
ಗ್ರಾಹಕರು ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಕಾಲಾತೀತ ಸೌಂದರ್ಯ ಹೊಂದಿರುವ ಆಭರಣಗಳ ವಿಶಿಷ್ಟ ಸಂಗ್ರಹವನ್ನು ವೀಕ್ಷಿಸಿ, ಖರೀದಿಸಿ ಪ್ರಯೋಜನ ಪಡೆಯುವಂತೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆ ಆಹ್ವಾನಿಸಿದೆ.
ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶೋರೂಮಿನ ಸ್ಟೋರ್ ಹೆಡ್ ಹಫೀಜ್ ರೆಹಮಾನ್, ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಮೊಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಕ್ ಫರ್ಹಾನ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
