ಮಲಬಾರ್ ಗೋಲ್ಡ್ ವತಿಯಿಂದ ಪಿಯುಸಿ ಪ್ರಥಮ ರಾಂಕ್ ವಿಜೇತೆ ದಿಶಾಗೆ ಗೌರವ

0
35

ಮಂಗಳೂರು : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಇದರ ವತಿಯಿಂದ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ಕು. ದಿಶಾ ಮೂಡಬಿದ್ರಿ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು.

ಮಲಬಾರ್ ಗೋಲ್ಡ್ ಮಂಗಳೂರು ಇದರ ಗ್ರಾಹಕರಾದ ಗಂಗಾಧರ ಪೂಜಾರಿ ಮತ್ತು ರಶ್ಮಿ ಜಿ ಪೂಜಾರಿ ಮುಖ್ಯ ಅತಿಥಿ ಆಗಿ ಭಾಗವಹಿಸಿದ್ದರು. 

ಕು. ದಿಶಾ ಮಾತನಾಡಿ ನನಗೆ ತುಂಬಾ ಖುಷಿಯಾಗುತ್ತದೆ ಹಾಗೂ ತನ್ನ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ದಿಶಾ ಅವರ ಪಾಲಕರಾದ ವೀಣಾ ರವರು ಕಾರ್ಯಕ್ರಮದಲ್ಲಿ ಮಾತಾಡಿ ಮಲಬಾರ್ ಗೋಲ್ಡ್ ಗೆ ತುಂಬು ಹ್ರದಯದ ಧನ್ಯವಾದಗಳು ಹೇಳಿದರು. ಅದೇ ರೀತಿ ಆಳ್ವಾಸ್ ಕಾಲೇಜಿನ ಛೇರ್ಮನ್ ಮೋಹನ್ ಅಲ್ವಾ ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಶ್ಲಾಗಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಂಗಾಧರ ಪೂಜಾರಿ ಅವರು ಕು. ದಿಶಾ ನನ್ನು 600/600 ಅಂಕಗಳಿಸಿ ನಮ್ಮ ಜಿಲ್ಲೆ ಹೆಮ್ಮೆ ಪಡುವಂತಹ ಸಾದನೆ ಮಾಡಿದ್ದಾರೆ ಅದೇ ರೀತಿ ಮುಂದಿನ ಭವಿಷ್ಯ ಉಜ್ವಲ ವಾಗಲೀ ಎಂದು ಹಾರೈಸಿದರು . ಹಫೀಜ್ ರೆಹಮನ್ ಸ್ಟೋರ್ ಹೆಡ್ ಮಾತನಾಡಿ ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ ಹಾಗೂ ಇವರ ಸಾದನೆ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಹೇಳಿ ದಿಶಾನನ್ನು ಹಾರೈಸಿದರು.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಜ್ ರಹ್ಮಾನ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿಎಸ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮೇನೇಜರ್ ಗಿರೀಶ್ ಶೆಟ್ಟಿ, ಸಮೀರ್ ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here