ಮಲಯಾಳ ಭಾಷಾ ಮಸೂದೆ-2025: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮನವಿಗೆ ಕೇರಳ ಸರ್ಕಾರದ ಸ್ಪಷ್ಟೀಕರಣ

0
13

ಮಲಯಾಳ ಭಾಷಾ ಬಿಲ್ಸ್ – 2025 ಕುರಿತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮನವಿಗೆ ಕೇರಳ ಸರಕಾರದ ಆಡಳಿತ ಭಾಷಾ ಇಲಾಖೆಯ ಎಡಿಷನಲ್ ಮುಖ್ಯ ಕಾರ್ಯದರ್ಶಿಯಿಂದ ಸ್ಪಷ್ಟೀಕರಣ ಪತ್ರ
ಕೇರಳ ಸರಕಾರವು (ಮಲಯಾಳ ಭಾಷಾ ಬಿಲ್ಸ್- 2025) ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಕೈಬಿಡಲು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸುತ್ತಿದೆ. ಭಾಷಾ ಅಲ್ಪಸಂಖ್ಯಾಕರ ರಕ್ಷಣೆಗೆ ಸಂವಿಧಾನವು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಭಾಷಾ ಹಕ್ಕುಗಳನ್ನು ವ್ಯವಸ್ಥಿತಗೊಳಿಸಿದೆ.
ಭಾಷಾ ಅಲ್ಪಸಂಖ್ಯಾಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕುಗಳಿಗೆ ಧಕ್ಕೆಯಾಗದಂತೆ ನೀತಿ – ಕಾನೂನುಗಳನ್ನು ರೂಪಿಸಬೇಕಾಗುತ್ತದೆ.
ಭಾಷಾ ಅಲ್ಪಸಂಖ್ಯಾಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಒದಗಿಸಲು ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿರುತ್ತದೆ. ರಾಜ್ಯ ಸರಕಾರಗಳು ರೂಪಿಸುವ ಭಾಷಾ ನೀತಿಗಳು ದೇಶ ರಾಜ್ಯ ಅಥವಾ ಪ್ರಾದೇಶಿಕ ಸಂಘರ್ಷಗಳಿಗೆ ಕಾರಣವಾಗಬಾರದು ಎಂಬುದು ಸಂವಿಧಾನದ ಮೂಲತತ್ವ ಆಶಯವಾಗಿದೆಯೆಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.
ಮಲಯಾಳ ಭಾಷಾ ಬಿಲ್ಸ್- 2025 ಪ್ರಕಾರ ಹತ್ತನೇ ತರಗತಿಯವರೆಗೆ ಕೇರಳದ ಎಲ್ಲಾ ಸರಕಾರಿ ಮತ್ತು ಅನುಧಾನಿತ ಶಾಲೆಗಳಲ್ಲಿ ಮಲೆಯಾಳ ಭಾಷೆ ಕಡ್ಡಾಯ ಮತ್ತು ಪ್ರಥಮ ಭಾಷೆಯಾಗಿದೆ. ಮಲಯಾಳ ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯ ಜೊತೆಗೆ ಮಲಯಾಳ ಕಲಿಯಲು ಅವಕಾಶ ನೀಡಲಾಗುವುದೆಂದು ಹೇಳುತ್ತದೆ. ಅಂದರೆ ಕನ್ನಡ ಭಾಷೆಯ ಮಕ್ಕಳು ಮಲಯಾಳ ಭಾಷೆಯನ್ನು ಕಡ್ಡಾಯ ಪ್ರಥಮ ಭಾಷೆಯಾಗಿ ಕಲಿಯುವುದು ಅಥವಾ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವ ಮೂಲಕ ಮಲಯಾಳ ಭಾಷೆಯನ್ನು ಕಲಿಯಲು ಅವಕಾಶವಿದೆ ಎಂಬ ಗೊಂದಲದಿಂದ ಇದ್ದಾರೆ. ಕನ್ನಡ ವಿದ್ಯಾರ್ಥಿಗಳು ತಮ್ಮ ತಾಯಿನುಡಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವ ಅವಕಾಶವನ್ನು ಕಸಿಯುವ ಆತಂಕವನ್ನು ಮಲಯಾಳ ಭಾಷಾ ಮಸೂದೆಯಿಂದ ತಿಳಿದು ಬರುತ್ತದೆ . ಇದು ಸಂವಿಧಾನದ ಮೂಲತತ್ತ್ವಕ್ಕೆ ವಿರುದ್ಧವಾಗಿದೆ ಎಂದು ಈ ಕುರಿತು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಕೇರಳ ಸರಕಾರದ ಮುಖ್ಯಮಂತ್ರಿ ಹಾಗೂ ಕೇರಳ ರಾಜ್ಯ ಭಾಷಾ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಿಗೆ ಮರು ಪರಿಶೀಲಿಸಲು ಮನವಿ ಪತ್ರವನ್ನು ಬರೆದು ಒತ್ತಾಯಿಸಲಾಗಿತ್ತು . ಈ ಕುರಿತು ಕೇರಳ ಸರಕಾರದ personal &Administrative Reforms (Official Language ) Department, Thiruvananthapuram ಇದರ Deputy Secretary For Additional Chief Secretary To Government. Government Of Kerala ಇವರಿಂದ ದಿನಾಂಕ 22-05-2026 ರಂದು ಸ್ಪಷ್ಟೀಕರಣ ಉತ್ತರ ಬಂದಿರುತ್ತದೆ.
ಕೇರಳ ಸರಕಾರದ ಆಡಳಿತ ಭಾಷಾ ಇಲಾಖೆಯ ಪತ್ರದಲ್ಲಿ….. ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಕಾಸರಗೋಡು ಅವರ ಮನವಿಯನ್ನು ಅಧ್ಯಯನ ಮಾಡಲಾಗಿದೆ. ಮಲಯಾಳಂ ಭಾಷಾ ಮಸೂದೆ -2025 ನ್ನು ಉಲ್ಲೇಖಿಸಿ ದಿನಾಂಕ 05-03-2026 ರಂದು ಕೇರಳ ರಾಜ್ಯಪಾಲರ ಪ್ರತಿಕ್ರಿಯೆಗೆ ಒಳಪಟ್ಟಿರುತ್ತದೆ. ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತ ಎಂದು ಗುರುತಿಸಲ್ಪಟ್ಟಿರುವ ಪ್ರದೇಶಗಳಲ್ಲಿ ತಮಿಳು ಹಾಗೂ ಕನ್ನಡ ಭಾಷಾ ಅಲ್ಪ ಸಂಖ್ಯಾತರಿಗೆ ಅವರವರ ಮಾತೃಭಾಷೆಯನ್ನು ಕಲಿಯುವ ಅವಕಾಶವಿರುತ್ತದೆ.
ವಿಭಾಗ:- 6 (1) ಮಲಯಾಳಂ ಭಾಷಾ ಮಸೂದೆ – 2025 ಇದು ಸಾಮಾನ್ಯ ಪ್ರಕ್ರಿಯೆ, ಇದಕ್ಕೆ ತದ್ ವಿರುದ್ಧವಾಗಿ ಭಾಷಾ ಅಲ್ಪಸಂಖ್ಯಾತ ವಿಭಾಗದಲ್ಲಿ ಇತರ ಪ್ರಾಂತ್ಯಗಳ ಜನರನ್ನು ಮಲಯಾಳಂ ಭಾಷಾ ಮಸೂದೆಯ ವಿಭಾಗ 7 ಕ್ಕೆ ಸೇರಿಸಲಾಗಿದೆ.
ಇದನ್ನು ಹೊರತುಪಡಿಸಿ ವಿಭಾಗ 5 ಅಥವಾ 6 ಇದರ ಉಪವಿಭಾಗ (2)ದಲ್ಲಿ ಸ್ಪಷ್ಟವಾಗಿ ತಿಳಿಸುತ್ತದೇನೆoದರೆ ಯಾವ ವಿದ್ಯಾರ್ಥಿಗಳ ಮಾತೃಭಾಷೆ ಮಲಯಾಳಂನ್ನು ಹೊರತಾಗಿದೆಯೋ ಅವರಿಗೆ ಅವರ ಇಷ್ಟದ ಭಾಷೆಯನ್ನು ಆಯ್ಕೆ ಮಾಡಲು ಕೇರಳದ ಶಾಲೆಗಳಲ್ಲಿ ಅವಕಾಶವಿರುತ್ತದೆ. ಮತ್ತು ಇದು ರಾಷ್ಟ್ರೀಯ ಭಾಷಾ ಪಠ್ಯಕ್ರಮ ನಿಯಮಕ್ಕೆ ಅನುಸಾರವಾಗಿದೆ.
ಮಲಯಾಳಂ ಭಾಷಾ ಮಸೂದೆ -2025- ಇದು ಭಾಷಾ ಅಲ್ಪಸಂಖ್ಯಾತರರಿಗೆ ಮಲಯಾಳಂ ಭಾಷೆಯನ್ನು ಕಲಿಯಲು ಒತ್ತಾಯಿಸುತ್ತಿಲ್ಲ. ಹಾಗೂ ಅವರ ಮಾತೃಭಾಷೆಯನ್ನು ಕಲಿಯುವ ವಿಚಾರದಲ್ಲಿ ನಿಯಂತ್ರಣ ಹೇರುತ್ತಿಲ್ಲ. ಆದಕಾರಣ ಮೇಲಿನ ಮಸೂದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸುವುದು ಸೂಕ್ತವಲ್ಲ ಎಂದು ತಿಳಿಯಪಡಿಸುತ್ತೇವೆ. ಈ ಮೇಲಿನ ವಿವರಗಳನ್ನು ಪತ್ರದಲ್ಲಿ ಸ್ಪಷ್ಟೀಕರಣ ನೀಡಲಾಗಿದೆ. ಈ ಕುರಿತು ಕಾನೂನು ತಜ್ಞರು, ನ್ಯಾಯವಾದಿಗಳ ಮಾರ್ಗದರ್ಶನದಲ್ಲಿ ಪ್ರತ್ಯುತ್ತರವನ್ನು ದಿನಾಂಕ-06-07-2026 ರಂದು ಕೇರಳ ಸರಕಾರದ ಆಡಳಿತ ಭಾಷಾ ಇಲಾಖೆಯ ಎಡಿಷನಲ್ ಮುಖ್ಯ ಕಾರ್ಯದರ್ಶಿಯವರಿಗೆ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಪತ್ರ ಬರೆದಿರುತ್ತಾರೆ.
ಸಂಪರ್ಕ – ಶಿವರಾಮ ಕಾಸರಗೋಡು ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),ಕನ್ನಡ ಗ್ರಾಮ, ಕಾಸರಗೋಡು-671121
ಮೊಬೈಲ್ -9448572016

LEAVE A REPLY

Please enter your comment!
Please enter your name here