ಧನುಪೂಜಾ ಆಮಂತ್ರಣ ಪತ್ರಿಕೆ ಬಿಡುಗಡೆ

0
6

ಕಾಸರಗೋಡು ದೇವರಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ ವರ್ಷಂಪ್ರತಿ ಜರಗುತ್ತಿರುವ ಈ ವರುಷ ಡಿಸನಬರ್ 17 ರಿಂದ ಜನವರಿ 14 ರ ವರೆಗೆ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರ ನಿರ್ದೇಶನ ಹಾಗೂ ಆಶೀರ್ವಾದದೊಂದಿಗೆ ಧನುಮಾಸದ ಧನುಪೂಜೆ, ಧನುಮಾಸ ತಿರುವಾದಿರ ಸರ್ವೈಶ್ವರ್ಯ ಪೂಜೆ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರ ಪ್ರಧಾನ ಅರ್ಚಕರಾದ ಶ್ರೀ ರಾಮ್ ಭಟ್ ಪ್ರಾರ್ಥನೆಗೈದು ಪ್ರಥಮ ಪ್ರತಿಯನ್ನು ಧನುಪೂಜಾ ಸಮಿತಿ ಅಧ್ಯಕ್ಷರಾದ ಮಧೂರು ಪಂಚಾಯತ್ ಉಪಾಧ್ಯಕ್ಷ ಶ್ರೀ ಭಾನುಪ್ರಕಾಶ್ ಇವರು ಸೇವಾ ಟ್ರಸ್ಟಿನ ಅಧ್ಯಕ್ಷರಾಗಿದ ಶ್ರೀನಿವಾಸ ಮಾಸ್ಟರ್ ಗೆ ನೀಡಿ ಬಿಡುಗಡೆಗೊಳಿಸಿದರು.

ಈ ಸಮಾರಂಭದಲ್ಲಿ ಧನುಪೂಜಾ ಸಮಿತಿ ಉಪಾಧ್ಯಕ್ಷರಾದ ಮಹಾಬಲ ರೈ, ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರೇಮಾವತಿ ರೈ, ಸೇವಾ ಟ್ರಸ್ಟಿನ ಸದಸ್ಯರಾದ ಮೋಹನ, ಜಯನ್, ಅನಂತ ಪದ್ಮನಾಭ, ಸಂಜೀವ ಸೇಟ್ಟಿ, ನಾರಾಯಣ ನಾಯಕ್, ಸುಭಾಶ್ ಪಾಟಾಳಿ, ಗಣೇಶ್ ನಾಯಕ್, ಬಾಲಕೃಷ್ಣ ಮಾಸ್ಟರ್, ಹರೀಶ ಪಾಟಾಳಿ ಕೋಶಾಧಿಕಾರಿ ರಮೇಶ್ ರೈ ಉಪಸ್ಥಿತರಿದ್ದರು. ಧನುಪೂಜಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಸ್ವಾಗತಿಸಿ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಗಣೇಶ್ ಮನ್ನಿಪ್ಪಾಡಿ ಧನ್ಯವಾದವಿತ್ತರು.