ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಮಂಗಳೂರು ತಂಡ ರಾಜೇಶ್ ಬಿ ಇವರ ಸಹಕಾರದೊಂದಿಗೆ ಬಂಟ್ವಾಳ ವಿಧಾನ ಸಭೆ ಶಾಸಕರಾದ ರಾಜೇಶ್ ನಾಯ್ಕ್ ಇವರನ್ನು ಭೇಟಿ ಮಾಡಿ ಪದಪ್ರದಾನ ಕಾರ್ಯಕ್ರಮಕ್ಕೆ ಆಹ್ವಾನ ಹಾಗೂ ಸಹಕಾರವನ್ನು ಕೋರಲಾಯಿತು.
ಸ್ವಲ್ಪ ಕಾಲ ತಂಡದ ಜೊತೆ ಸಾಮಾನ್ಯ ರಂತೆ ಪ್ರೀತಿ ಆತ್ಮೀಯತೆ ಯಿಂದ ಮಾತನಾಡಿಸಿದ ಶಾಸಕರು ಸಹಕಾರದ ಭರವಸೆಯನ್ನು ಕೊಟ್ಟರು.
ಈ ಸಂದರ್ಭದಲ್ಲಿ ಮಂಗಳೂರು ಆಮಂತ್ರಣ ವೇದಿಕೆ ಅಧ್ಯಕ್ಷರಾದ ಲತೇಶ್ ಪುತ್ರನ್ , ಕಾರ್ಯದರ್ಶಿ ಕಸ್ತೂರಿ ಜಯರಾಮ್ ಕಾವೂರು, ನಿರ್ದೇಶಕರಾದ ರಶ್ಮಿ ಸನಿಲ್ ಭಾಗವಹಿಸಿದ್ದರು.

