ಮಂಗಳೂರು : ಪಿಲಿಕೂರು ಕ್ಷೇತ್ರ ತಲಪಾಡಿಯಲ್ಲಿ ಸಾಲ್ಯಾನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ನಾಗರಪಂಚಮಿ ಆಚರಣೆ

0
8

ಮಂಗಳೂರು : ತಲಪಾಡಿಯ ಸಮೀಪದ ಪಿಲಿಕೂರಿನಲ್ಲಿ ಸಾಲ್ಯಾನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಭಕ್ತಿಭಾವದಿಂದ ನಡೆಯಿತು, ನಾಗದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ವಿಶೇಷ ಪೂಜೆ, ನಾಗ ದೇವರಿಗೆ ತಂಬಿಲ ಸೇವೆ, ಹಾಗೂ ಹಲವು ಹರಕೆ ಸೇವೆ ನಡೆದವು.ನಾಗರಪಂಚಮಿಯ ವಿಶೇಷ ದಿನದಂದು ಸಾವಿರಾರು ಮಂದಿ ಭಾಗವಹಿಸಿ ಶ್ರೀ ನಾಗದೇವರ ಪ್ರಸಾದ ಪಡೆದು ಭಕ್ತರು, ಕುಟುಂಬಸ್ಥರು ಪುನೀತರಾದರು.