ಮಂಗಳೂರು: ಪಿಲಾರು ಸಾಯಿಬಾಬಾ ಮಂದಿರಕ್ಕೆ ಸಂತೋಷ್ ಪಿ. ಅಳಿಯೂರು ಭೇಟಿ

0
49

ಮಂಗಳೂರು: ತೊಕ್ಕೊಟ್ಟು ಶ್ರೀ ಸಾಯಿಬಾಬಾ ಮಂದಿರ ಪಿಲಾರು ಇಲ್ಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ಭೇಟಿ ನೀಡಿದರು. ವಾರ್ಷಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸುತ್ತಲಿನ ಐದು ಗ್ರಾಮಗಳನ್ನು ಒಳಗೊಂಡು ಭಜನಾ ಮಂಡಳಿಗಳನ್ನು ಸೇರಿಸಿ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಭಜನಾ ಪರಿಷತ್ತಿನ ಸಂಯೋಜನೆಯೊಂದಿಗೆ ಭಜನೋತ್ಸವ ನಡೆಸುವ ಕುರಿತಾಗಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಂದಿರದ ಪ್ರಧಾನರಾದ ದಿನೇಶ್ ಶರ್ಮಾ ರವರು ಶ್ರೀಮತಿ ಸೌಮ್ಯ,ಭಜನಾ ಪರಿಷತ್ ಗೌರವ ಸಲಹೆಗಾರರಾದ ಸತೀಶ್ ದೀಪಂ,ವಲಯ ಮೇಲ್ವಿಚಾರಕರಾದ ಮೋಹನ್ ಕುಮಾರ್,ಸುನೀಲ್ ಭಟ್,ಶೈಲೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here