ಮಂಗಳೂರು : ಲೋಕಸಭೆಯಲ್ಲಿ ಮೊನ್ನೆ ನಡೆದ ವಿದ್ಯಮಾನಗಳು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ದೇಶದ ಮಹಿಳೆಯರಿಗೆ ಹಕ್ಕು ನೀಡುವ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಬೆಂಬಲಿಸಬೇಕಾದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಶುಲ್ಲಕ ಕಾರಣ ನೀಡಿ ಅಡ್ಡಿಪಡಿಸುತ್ತಿರುವುದು ಅವರ ಮಹಿಳಾ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ
ಕೇಂದ್ರದ ಏನ್ ಡಿಎ ಸರ್ಕಾರವು ಮಹಿಳಾ ಮೀಸಲಾತಿಯನ್ನು ಕೇವಲ ಘೋಷಣೆಯಾಗಿ ಉಳಿಸದೆ ಅದನ್ನು ಕಾನೂನು ಬದ್ಧಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಅಧಿಕಾರದಲ್ಲಿದ್ದಾಗ ಮಹಿಳಾ ಮೀಸಲಾತಿಯನ್ನು ಕಡೆಗಣಿಸಿದ ಕಾಂಗ್ರೆಸ್ ಈಗ ಮಸೂದೆ ಜಾರಿಗೆ ಬರುವ ಹಂತದಲ್ಲಿ ನಾನಾ ಕಾರಣ ವೊಡ್ಡಿ ಕಾಲ ಹರಣ ಮಾಡುತ್ತಿದೆ.
ನಾರಿ ಶಕ್ತಿಯನ್ನು ಗೌರವಿಸಬೇಕಾದ ಈ ಸಂದರ್ಭದಲ್ಲಿ ಮಹಿಳೆಯರಿಗೆ ಎಸಗಿದ ದ್ರೋಹವನ್ನು ತೀವ್ರವಾಗಿ ನಾವು ಖಂಡಿಸುತ್ತೇವೆ. ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ನಮ್ಮ ನಾಯಕರೂ ಮಾಜಿ ಪ್ರಧಾನಿಗಳು ಆದ ದೇವೇಗೌಡರು ಅವರ ಅಧಿಕಾರ ಅವಧಿಯಲ್ಲಿ 33% ಶೇಕಡ ಮೀಸಲಾತಿಯನ್ನು ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದರು ಅದನ್ನು ಅಂದು ಕಾಂಗ್ರೆಸ್ ಬೆಂಬಲಿಸಿರಲಿಲ್ಲ ಎಂಬುದು ಚರಿತ್ರೆಯಲ್ಲಿ ದಾಖಲಾಗಿದೆ. ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದುಶ್ರೀ ದೇವೇಗೌಡರು ಎಂಬುದನ್ನು ಎಲ್ಲರೂ ಒಮ್ಮೆ ನೆನಪಿಸಿಕೊಳ್ಳಬೇಕು.
ಈ ಮಸೂದೆಯನ್ನು ಬೆಂಬಲಿಸಲು ಇರುವ ಪ್ರಮುಖ ಕಾರಣಗಳು.
ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದು ಸಂಸತ್ತಿನಲ್ಲೂ ವಿಧಾನಸಭೆಗಳಲ್ಲೂ ಸಿಗುತ್ತಿರುವ ಪ್ರಾತಿನಿಧ್ಯ ನಗಣ್ಯವಾಗಿದೆ.ಪ್ರಸ್ತುತ ಲೋಕಸಭೆಯಲ್ಲಿ ಕೇವಲ 14 ಶೇಕಡ ಪ್ರಾತಿನಿದ್ಯ ಮಾತ್ರ ಮಹಿಳೆಯರಿಗೆ ಸಿಕ್ಕಿದೆ. ಹೊಸಮಸೂದೆ ಜಾರಿಗೆ ಬಂದಾಗ 33 ಶೇಕಡ ಮೀಸಲಿರಿ ಸುವ ಮೂಲಕ ಅವರ ನೇರ ಪಾಲ್ಗೊಳ್ಳುವಿಕೆ ಸಾಧ್ಯವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಲಿಂಗ ಸಮಾನತೆಯತ್ತ ರಾಷ್ಟ್ರವನ್ನು ಕೊಂಡಯುತ್ತದೆ.
2: ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ :
ಭಾರತದ ಜನಸಂಖ್ಯೆ 1971 ರಿಂದ ಈಚೆಗೆ ಗಣನೀಯವಾಗಿ ಹೆಚ್ಚಾಗಿದೆ ಆದರೆ ಸಂಸತ್ತಿನ ಸ್ಥಾನಗಳು ಅಷ್ಟೇ ಆಗಿ ಉಳಿದಿದೆ ಒಬ್ಬ ವ್ಯಕ್ತಿ ಒಂದು ಮೌಲ್ಯ ಎಂಬ ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಇದು ವಿರುದ್ಧವಾಗಿದೆ. 1971ರಲ್ಲಿ ಒಬ್ಬ ಸಂಸದ ಆಯ್ಕೆಯಾದರೆ 10 ಲಕ್ಷ ಜನರನ್ನು ಪ್ರತಿನಿಧಿಸುತ್ತಿದ್ದರು. ಇಂದು ಅದೇ ಸಂಸದರು ಸರಾಸರಿ 25ರಿಂದ 30 ಲಕ್ಷ ಜನರನ್ನು ಪ್ರತಿನಿಧಿಸುವ ಅನಿವಾರ್ಯತೆ ಇದೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಒಬ್ಬ ವ್ಯಕ್ತಿಗೆ ನಿಭಾಯಿಸಲು ಸಾಧ್ಯವಿಲ್ಲ.ಪ್ರತಿಯೊಬ್ಬ ನಾಗರಿಕನ ಧ್ವನಿಗೆ ಸಂಸತ್ತಿನಲ್ಲಿ ಹೆಚ್ಚಿನ ಬೆಲೆ ಸಿಗುವಂತಾಗಬೇಕು.
3 ಪ್ರಜಾಪ್ರಭುತ್ವದ ಬಲವರ್ಧನೆ
ವಿರೋಧಪಕ್ಷಗಳು ಸ್ಥಾನಗಳ ಹೆಚ್ಚಳ ಕೆಲವು ರಾಜ್ಯಗಳಿಗೆ ಅನ್ಯಾಯಮಾಡುತ್ತದೆ ಎಂಬುದಾಗಿ ಆರೋಪಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನ ಅಂತಿಮವಾಗಬೇಕು. ಪ್ರಸ್ತುತ ಲೋಕಸಭೆಯಲ್ಲಿ 543 ಸದಸ್ಯ ಬಲವಿದೆ ಆದರೆ ಹೊಸ ಸಂಸತ್ ಭವನವನ್ನು 888 ಸದಸ್ಯರಿಗೆ ಅಗತ್ಯವಿರುವಂತೆ ನಿರ್ಮಿಸಲಾಗಿದೆ. ಮುಂದಿನ 25 ವರ್ಷಗಳ ಭಾರತದ ಅಗತ್ಯವನ್ನು ಗಮನದಲ್ಲಿರಿಸಿ ದೂರ ದೃಷ್ಟಿಯಿಂದ ಮಾಡಿರುವ ಈ ನಿರ್ಧಾರ ಇವತ್ತು ಗಮನಾರ್ಹವಾಗಿದೆ.
ದಶಕಗಳಿಂದ ಬಾಕಿ ಇರುವ ಈ ಮಸೂದೆಯನ್ನು ಜಾರಿಗೆ ತರಲು ಅಡ್ಡಿ ಮಾಡುವುದು ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚದಿದ್ದರೆ ಸರಕಾರದ ಯೋಜನೆಗಳು ತಳಮಟ್ಟದ ಜನರಿಗೆ ತಲುಪಲು ಕಷ್ಟವಾಗುತ್ತದೆ.
ದೇಶದ ಹಿತ ದೃಷ್ಟಿಯಿಂದ ತಮ್ಮ ಮತ ಬ್ಯಾಂಕ್ ರಾಜಕೀಯಕ್ಕಾಗಿ ಪ್ರಜಾಪ್ರಭುತ್ವದಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಅಡ್ಡಿ ಮಾಡಿರುವುದು ವಿಷಾದನೀಯ. ಈ ಮಸೂದೆ ಕೇವಲ ಒಂದು ಕಾಯ್ದೆಯಲ್ಲ ನವಭಾರತದ ನೀಲ ನಕ್ಷೆ.ಮಹಿಳೆಯರಿಗೆ ಹೆಚ್ಚಿನ ಅಧಿಕಾರ ನೀಡಿ ಆಡಳಿತದಲ್ಲಿ ಅವರ ಒಳಗೊಳ್ಳುವಿಕೆ ಗೆ ಅವಕಾಶ ಕಲ್ಪಿಸುವುದು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಕಲ್ಪಿಸುವುದು ನಮ್ಮ ಸಂವಿಧಾನದ ಆಶಯವೂ ಹೌದು. ವಿರೋಧ ಪಕ್ಷಗಳು ರಚನಾತ್ಮಕ ಟೀಕೆ ಮಾಡುವದಿದ್ದರೆ ಅವರಿಗೆ ನೈತಿಕ ಬಲ ಬರುತ್ತಿತ್ತು ಆದರೆ ಪೂರ್ಣವಿರೋಧ ವ್ಯಕ್ತಪಡಿಸಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ NDA ಸರಕಾರದ ಅಂಗವಾಗಿರುವ ಜಾತ್ಯತೀತ ಜನತಾದಳ ಜಿಲ್ಲಾ ಘಟಕ ಇದನ್ನು ತೀವ್ರವಾಗಿ ವಿರೋಧಿಸಿ ಖಂಡಿಸುತ್ತದೆ.
ಜಾಕೆ ಮಾದವ ಗೌಡ ಜಿಲ್ಲಾಧ್ಯಕ್ಷರು, ಶಶಿರಾಜ್ ಶೆಟ್ಟಿ ಕೊಳಂಬೆ ಜಿಲ್ಲಾ ಕಾರ್ಯದ್ಯಕ್ಷರು, ಯೋಗಿಶ್ ಶೆಟ್ಟಿ ಜಪ್ಪು, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

