ಎಸ್‌ಎಸ್‌ಎಲ್ಸಿ ಫಲಿತಾಂಶ : ಮೂಡುಬಿದಿರೆ ತಾಲೂಕಿನ 25 ಹೈಸ್ಕೂಲ್‌ಗಳಿಗೆ ಶೇ.100 ಸಾಧನೆ

0
24

ಮೂಡುಬಿದಿರೆ: ಗುರುವಾರ ಪ್ರಕಟಗೊಂಡ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಮೂಡುಬಿದಿರೆ ತಾಲೂಕಿನ ಒಟ್ಟು 28 ಹೈಸ್ಕೂಲ್‌ಗಳ ಪೈಕಿ 25 ಶಾಲೆಗಳು ಶೇ.100 ಫಲಿತಾಂಶ ಸಾಧಿಸಿ ಗಮನ ಸೆಳೆದಿವೆ.

ಶೇ.100 ಫಲಿತಾಂಶ ಪಡೆದ ಹೈಸ್ಕೂಲ್‌ಗಳು ಹೀಗಿವೆ:

ಸರಕಾರಿ ಪ್ರೌಢಶಾಲೆ ಮೂಡುಮಾರ್ನಾಡು, ರೋಟರಿ ಆಂಗ್ಲಮಾಧ್ಯಮ ಹೈಸ್ಕೂಲ್, ಜೈನ್ ಹೈಸ್ಕೂಲ್, ಜವಾಹರಲಾಲ್ ನೆಹರು ಹೈಸ್ಕೂಲ್ ಶಿರ್ತಾಡಿ, ಸರ್ವೋದಯ ಕಲ್ಲಮುಂಡ್ಕೂರು, ಸರಕಾರಿ ಹೈಸ್ಕೂಲ್ ಹೊಸಬೆಟ್ಟು, ಸರಕಾರಿ ಹೈಸ್ಕೂಲ್ ದರೆಗುಡ್ಡೆ, ಬಿ.ಆರ್.ಪಿ ಮೂಡುಬಿದಿರೆ, ಹೋಲಿ ರೋಸರಿ ಮೂಡುಬಿದಿರೆ, ಸರಕಾರಿ ಹೈಸ್ಕೂಲ್ ಪ್ರಾಂತ್ಯ, ಸುಬ್ರಹ್ಮಣ್ಯ ಹೈಸ್ಕೂಲ್ ಕಡಂದಲೆ, ಸರಕಾರಿ ಹೈಸ್ಕೂಲ್ ನೆಲ್ಲಿಕಾರು, ಮೊರಾರ್ಜಿ ದೇಸಾಯಿ ಕಲ್ಲಬೆಟ್ಟು, ಸಂತ ಥೋಮಸ್ ಅಲಂಗಾರು, ಸರಕಾರಿ ಹೈಸ್ಕೂಲ್ ನೀರ್ಕೆರೆ, ಮುಹಮ್ಮದೀಯ ಕೋಟೆಬಾಗಿಲು, ಆಳ್ವಾಸ್ ಕನ್ನಡ ಮಾಧ್ಯಮ, ಸರಕಾರಿ ಹೈಸ್ಕೂಲ್ ಪಡುಕೊಣಾಜೆ, ಮೌಂಟ್ ಕಾರ್ಮೆಲ್ ಶಿರ್ತಾಡಿ, ದುರ್ಗಾದೇವಿ ಶುಂಠಿಲಪದವು, ಬ್ಲಾಸಮ್ ಬೆಳುವಾಯಿ, ದಿಗಂಬರ ಜೈನ ಮೂಡುಬಿದಿರೆ, ಎಕ್ಸಲೆಂಟ್ ಕಲ್ಲಬೆಟ್ಟು, ಸಂತ ಇಗ್ನೇಷಿಯಸ್ ಪಾಲಡ್ಕ ಹಾಗೂ ಆದರ್ಶ ತೋಡಾರ್.

ಇನ್ನುಳಿದ ಶಾಲೆಗಳ ಪೈಕಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ 99.47% ಫಲಿತಾಂಶ ದಾಖಲಿಸಿದ್ದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರ್ 94.12% ಮತ್ತು ಅಳಿಯೂರು ಸರಕಾರಿ ಪ್ರೌಢಶಾಲೆ 95.61% ಫಲಿತಾಂಶ ಗಳಿಸಿವೆ.

LEAVE A REPLY

Please enter your comment!
Please enter your name here