ಮಧೂರು.: ಮನ್ನಿಪಾಡಿಯ ವಿವೇಕಾನಂದ ನಗರದಲ್ಲಿರುವ ಶ್ರೀ ನಾಗರಾಜ -ಗುಳಿಗ ದೈವ ಸನ್ನಿಧಿಯ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿಧಿ ಸಂಗ್ರಹಗೋಸ್ಕರ ಹೊರಡಿಸಿದ ಲಕ್ಕಿ ಕೂಪನ್, ನ ಬಿಡುಗಡೆ ಕಾರ್ಯಕ್ರಮವು ಶ್ರೀ ನಾಗರಾಜ ಗುಳಿಗ ದೈವ ಸನ್ನಿಧಿಯಲ್ಲಿ ಭಕ್ತ ಸಮ್ಮುಖದ ನಡುವೆ ವಿಜೃಂಭಣೆಯಿಂದ ಜರಗಿತು. ಸನ್ನಿಧಿಯ ತಂತ್ರಿವರ್ಯರಾದ” ಬ್ರಹ್ಮಶ್ರೀ ಉಳಿಯ ವಿಷ್ಣುಅಸ್ರ “ರವರು ಲಕ್ಕಿ ಕೂಪನನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಶುಭ ವೇಳೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ದೇವದಾಸ್ ಕಾಮತ್, ಕಾರ್ಯಾಧ್ಯಕ್ಷರಾದ ಶ್ರೀ ದಾಮೋದರನ್, ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಅವಿನಾಶ್.ಆರ್, ಶ್ರೀ ನಾಗರಾಜ ಗುಳಿಗ ದೈವ ಸನ್ನಿಧಿಯ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಬ್ರಹ್ಮ ಕಲಶೋತ್ಸವ,ದ ಸಮಿತಿಯ ಕೋಶಾಧಿಕಾರಿ ಪ್ರಜಿತ್, ಸನ್ನಿಧಿಯ ಕೋಶಾಧಿಕಾರಿ ಶರತ್ ಕುಮಾರ್ ಹಾಗೂ ಸುನಿಲ್ ಕುಮಾರ್, ಪ್ರಸಾದ್, ಅಶೋಕನ್, ಸಜಿತ್ ಕೆ.ಪಿ, ಅಜಿತ್ ಆರ್.ಎಸ್, ಉದಯಕುಮಾರ್ ಮನ್ನಿ
ಪಾಡಿ, ಹಾಗೂ ಹಲವು ಸಂಘ-ಸಂಸ್ಥೆಗಳ ಗಣ್ಯರು ಈ ಶುಭ ವೇಳೆಯಲ್ಲಿ ಉಪಸ್ಥಿತರಿದ್ದರು
Home Uncategorized ಮನ್ನಿಪಾಡಿ: ಶ್ರೀ ನಾಗರಾಜ -ಗುಳಿಗ ದೈವ ಸನ್ನಿಧಿಯ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿಧಿ ಸಂಗ್ರಹದ ಲಕ್ಕಿ ಕೂಪನ್...

