ಉಡುಪಿ ಬ್ರಹ್ಮಗಿರಿ ಶ್ರೀ ಸತ್ಯ ಸಾಯಿ ಸೇವಾ ಸಮಿತಿ , ಉಡುಪಿಯ ಗಾಂಧಿ ಆಸ್ಪತ್ರೆ, ಮಣಿಪಾಲದ ಕೆ ಎಂ ಸಿ ಆಸ್ಪತ್ರೆ, ಭಾರತೀಯ ವೈದ್ಯರ ಸಂಘ ಉಡುಪಿ ,ಮಣಿಪಾಲ ವಿಭಾಗ, ಶ್ರೀ ಕೃಷ್ಣ ಯೋಗ ಕೇಂದ್ರ ಉಡುಪಿ ಹಿರಿಯ ನಾಗರಿಕರ ವೇದಿಕೆ ಉಡುಪಿ ಇವರ ಸಹಕಾರದೊಂದಿಗೆ ಇತ್ತೀಚಿಗೆ ಬ್ರಹ್ಮಗಿರಿಯ ಸಾಯಿ ಸಭಾಂಗಣ ದಲ್ಲಿ ನೆಡೆಯಿತು , ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ 100ನೇ ಜನ್ಮದಿನಾಚರಣೆಯ ಅಂಗವಾಗಿ ಹಿರಿಯ ನಾಗರಿಕರಿಗಾಗಿ ವಿಶೇಷ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿತ್ತು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಆನಂದ ಕುಂದಾಪುರ ಇವರು ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜರುಗಿದ ಈ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ 157 ಹಿರಿಯ ನಾಗರಿಕರು ಭಾಗವಹಿಸಿದ್ದರು. ಹಲವು ಬಗೆಯ ತಪಾಸಣೆ ನೆಡೆಸಿ ಸಲಹೆ ಸೂಚನೆ ನೀಡಲಾಯಿತು ಶಿಬಿರದ ಯಶಸ್ವಿಗಾಗಿ ಡಾ. ಸುರೇಶ್ ಹೆಗ್ಡೆ ,ಡಾ. ಅನಂತ ಶೆಣೈ ,ಡಾ.ಶಿವಶಂಕರ್ , ಡಾ.ಕಸ್ತೂರಿ ನಾಯಕ್ ಹಾಗೂ ಇತರ ವೈದ್ಯರು ಮತ್ತು 20 ಜನ ಅರೆ ವೈದ್ಯಕೀಯ ಸಿಬ್ಬಂದಿಗಳು (paramedical ) ಸಿಬ್ಬಂದಿಗಳು ಸೇವೆಯನ್ನು ನೀಡಿರುತ್ತಾರೆ. ಶ್ರೀ ಕೃಷ್ಣ ಯೋಗ ಕೇಂದ್ರದ ಶ್ರೀ ಅಮಿತ್ ಶೆಟ್ಟಿ ಹಾಗೂ ಹಿರಿಯ ನಾಗರಿಕರ ವೇದಿಕೆಯ ಶ್ರೀ ಮುರಳಿಧರ್ ಅವರು ಉಪಸ್ಥಿತರಿದ್ದರು.23 ಜನ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಸೇವಾದಳದವರು ಈ ವೈದ್ಯಕೀಯ ಶಿಬಿರದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು
ಡಾ. ಅನಂತ ಶೆಣೈ ಮಾತನಾಡುತ್ತಾ ಹಿರಿಯ ನಾಗರಿಕರು ಆಗ್ಗಾಗೆ ವೈದ್ಯರ ಬೇಟಿಮಾಡಿ ಅರೋಗ್ಯ ತಪಾಸಣೆ ಮಾಡಿಕೊಳ್ಳಿ , ಹೃದಯ ಪರೀಕ್ಷೆ , ಮಧುಮೇಹ ತಪಾಸಣೆ , ಬಿಪಿ ಪರೀಕ್ಷೆ , ಜೊತೆಗೆ ನಿತ್ಯ ವ್ಯಾಯಾಮ , ವಾಕಿಂಗ್ , ಮಿತ ಆಹಾರ ಸೇವನೆ , ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಿ ಸಲಹೆ ನೀಡಿದರು

