ಕಾರ್ಕಳ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಹಾವಳಿ: ಪ್ರಯಾಣಿಕರು, ವ್ಯಾಪಾರಿಗಳಿಂದ ಆಕ್ರೋಶ

0
36

ಕಾರ್ಕಳ: ನಗರದ ಮುಖ್ಯ ಬಸ್ಸು ನಿಲ್ದಾಣ ಬಹಳ ಇಕ್ಕಟ್ಟಿನಿಂದ ಕೂಡಿದ್ದು ಈ ಮಧ್ಯೆ ಬಸ್ಸು ನಿಲ್ದಾಣದ ಮಧ್ಯಭಾಗದಲ್ಲಿರುವ ಹೈ ಮಾಸ್ಕ್ ದೀಪಗಳಿರುವ ಕಂಬದ ಕೆಳಗೆ ಕೆಲ ವ್ಯಕ್ತಿಗಳು ತಮ್ಮ ಖಾಸಗಿ ವಾಹನಗಳನ್ನು ಗಂಟೆಗಟ್ಟಲೆ ನಿಲ್ಲಿಸಿ ಹೋಗುವ ಪರಿಣಾಮ ಬಸ್ಸು ನಿಲ್ದಾಣಕ್ಕೆ ಪ್ರವೇಶಿಸುವ ಬಸ್ಸುಗಳಿಗೆ ತೀವ್ರತರದ ಅಡಚಣೆಗಳು ಉಂಟಾಗಿ ಬಸ್ಸುಗಳ ಕರ್ಕಶ ಹಾರ್ನ್ ಗಳ ಶಬ್ದಗಳಿಂದಾಗಿ ಪ್ರಯಾಣಿಕರಿಗೂ ಹಾಗೂ ಸುತ್ತಮುತ್ತಲಿರುವ ಅಂಗಡಿ ವ್ಯಾಪಾರಿಗಳಿಗೂ ತೀವ್ರತರದ ತೊಂದರೆಗಳು ಉಂಟಾಗುತ್ತಿದ್ದು
ಕೆಲವೊಮ್ಮೆ ಬಸ್ ಗಳು ನಿಲ್ದಾಣದ ಒಳಗೆ ಪ್ರವೇಶಿಸದೆ ಅಲ್ಲೇ ನಿಂತಿರುವುದರಿಂದ ವಾಹನಗಳ ದಟ್ಟಣೆ ಉಂಟಾಗಿ ತೀವ್ರ ತರದ ತೊಂದರೆ ಉಂಟಾಗುತ್ತದೆ. ಬಸ್ ನಿಲ್ದಾಣದ ಬಳಿ ಇರುವ ಆಸ್ಪತ್ರೆಗೆ ಬರುವ ವಾಹನಗಳು ಈ ದಟ್ಟನೆಯಲ್ಲಿ ಸಿಕ್ಕಿಕೊಂಡಿರುವ ಘಟನೆಯು ನಡೆದಿದೆ.
ಕೆಲವು ಸಮಯದ ಹಿಂದೆ ಬಸ್ಸು ನಿಲ್ದಾಣದಲ್ಲಿ ಪೊಲೀಸರು ಈ ಪ್ರದೇಶದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಲು ಬಿಡುತ್ತಿರಲಿಲ್ಲ ನಿಂತ ವಾಹನಗಳ ಮೇಲೆ ದಂಡವನ್ನು ಹಾಕುತ್ತಿದ್ದರು.
ಆದರೆ ಈಗ ಪೊಲೀಸರು ಬಸ್ಟ್ಯಾಂಡಿಗೆ ಬರದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯ ಪತ್ರಿಕಾ ವಿತರಕರಾದ ಸಂತೋಷ್ ಕುಮಾರ್ ರೈ ಮಾಧ್ಯಮದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.

LEAVE A REPLY

Please enter your comment!
Please enter your name here