ಮಲ್ಪೆ: ಶ್ರೀ ರಾಮ ಮಂದಿರ ಜಿ.ಎಸ್.ಬಿ ಸಮಾಜ ಮಲ್ಪೆ ಇಲ್ಲಿನ ಜಿಎಸ್ ಬಿ ಮಹಿಳಾ ಮಂಡಳಿ ವತಿಯಿಂದ ಸಾಮೂಹಿಕ ಚೂಡಿ ಪೂಜೆ ಸಲ್ಲಿಸಿದರು.
ಶ್ರೀ ತುಳಸೀ ಕಟ್ಟೆಯ ಸನ್ನಿಧಾನದಲ್ಲಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ ಅವರ ಮಾರ್ಗದರ್ಶನದಲ್ಲಿ ಪ್ರಕೃತಿಯಲ್ಲಿ ದೊರೆಯುವ ವಿವಿಧ ಬಗೆಯ ಹೂ ಗಳಿಂದ ಚೂಡಿ ಕಟ್ಟಿ ಶ್ರಾವಣ ಮಾಸದ ಪ್ರತೀ ಶುಕ್ರವಾರ , ಆದಿತ್ಯವಾರ ಮುತ್ತೈದೆಯರು ಮನೆಯಲ್ಲಿ ಹಾಗೂ ದೇವಳದಲ್ಲಿ ಸಮೂಹಿಕವಾಗಿ ಪೂಜೆ ಸಲ್ಲಿಸುವ ಪದ್ಧತಿ . ಊರಿನ ದೇವಾಲಯ , ಮಂದಿರಗಳಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿ ಪರಸ್ಪರ ಚೂಡಿ ವಿನಿಮಯ ಮಾಡಿ ಕೊಳ್ಳುತ್ತಾರೆ.

