ಕೃಷ್ಣಮಠದಲ್ಲಿ ಸಾಮೂಹಿಕ ಪ್ರಾರ್ಥನೆ

0
5

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿ 12 ಸಂವತ್ಸರಗಳು ಸಂದಿವೆ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ, ಅಧರ್ಮ ಪಲಾಯನ ಮಾಡುವಂತಾಗಲಿ ಎಂದು ಪರ್ಯಾಯ ಶೀರೂರು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದರು.
ನರೇಂದ್ರ ಮೋದಿಯವರು ಚುನಾಯಿತ ಪ್ರಧಾನಿಯಾಗಿ ಅತೀ ಹೆಚ್ಚುಕಾಲ ಆಡಳಿತ ನಡೆಸಿದ ದಾಖಲೆ ಹಿನ್ನೆಲೆಯಲ್ಲಿ ಕೃಷ್ಣ ಮಠದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಅಶೀರ್ವಚನ ನೀಡಿದರು.
ದಿವಾನ್​ ಡಾ. ಉದಯ್​ ಕುಮಾರ್​ ಸರಳತ್ತಾಯ, ಶಾಸಕ ಯಶ್ಪಾಲ್​ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಪ್ರಮುಖರಾದ ವೀಣಾ ಶೆಟ್ಟಿ, ಸುಪ್ರಸಾದ್​ ಶೆಟ್ಟಿ, ಮಧುಕರ ಮುದ್ರಾಡಿ, ಶ್ರೀಶ ನಾಯಕ್​ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here