ಶ್ರೀ ಕೃಷ್ಣ ಶಿಶುಮಂದಿರದಲ್ಲಿ ಸಾಮೂಹಿಕ ಶ್ರೀ ತುಳಸಿ ಪೂಜೆ

0
11

ಶ್ರೀ ಕೃಷ್ಣ ಶಿಶುಮಂದಿರ ಕಂದೂರು, ಸಜೀಪಮೂಡ ಇದರ ವತಿಯಿಂದ ಸಾಮೂಹಿಕ ಶ್ರೀ ತುಳಸಿ ಪೂಜಾ ಕಾರ್ಯಕ್ರಮವು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ಪ್ರಮುಖರಾದ ಕೆ. ಸುಬ್ರಾಯ ಕಾರಂತ, ಸೋಮನಾಥ, ಮಾತಾಜಿ ಕೃತಿಕಾ ಸೇರಿದಂತೆ ಶಿಶುಮಂದಿರದ ಪುಟಾಣಿಗಳು ಹಾಗೂ ಪೋಷಕರು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡರು.