ಮೂಡುಬಿದಿರೆಯಲ್ಲಿ ಮಹಾ ರಕ್ತದಾನ, ಆರೋಗ್ಯ ತಪಾಸಣೆ ಮತ್ತು ಸಸಿ ವಿತರಣಾ ಕಾರ್ಯಕ್ರಮ

0
331

ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಜೂನ್ 6 ರಂದು ಜವನೆರ್ ಬೆದ್ರ ಫೌಂಡೇಶನ್(ರಿ), ಅಬ್ಬಕ್ಕ ಬ್ರಿಗೇಡ್, ಫಾದರ್ ಮುಲ್ಲಾರ್ ಹಾಸ್ಪಿಟಲ್ ಹಾಗೂ ಆಳ್ವಾಸ್ ಹೋಮಿಯೋಪತಿ ಕಾಲೇಜ್ ಇವುಗಳ ಜಂಟಿ ಆಶ್ರಯದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಮತ್ತು ಸಸಿ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಮಾಜಮುಖಿ ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಅವರು ಉದ್ಘಾಟಿಸಿ ತುರ್ತು ಸಂದರ್ಭದಲ್ಲಿ ರಕ್ತದಾನದ ಅಗತ್ಯತೆಗಳ ಬಗ್ಗೆ ವಿವರಿಸಿದರು.

ಸಮಾಜಕ್ಕೆ ಏನಾದರೂ ತನ್ನಿಂದಾದ ಕೊಡುಗೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸುಮಾರು ೭೨ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಬೆಳುವಾಯಿ ಪ್ರವೀಣ್ ಜೈನ್ ಅವರನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ. ಆಭಯಚಂದ್ರ ಜೈನ್ ಅವರು “ಮಹಾ ರಕ್ತದಾನಿ ಮಾಣಿಕ್ಯ” ಎಂಬ ಗೌರವ ಬಿರುದು ನೀಡಿ ಸನ್ಮಾನಿಸಿದರು. ಇದೇ ಸಂಧರ್ಭದಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ) ಸ್ವಚ್ಚತೆ ಹಾಗೂ ರಕ್ತದಾನಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎ.ಸಿ.ಎಫ್ ಪಿ.ಶ್ರೀಧರ್ ಅವರು ರಕ್ತದಾನ ಮಾಡುವುದರಿಂದ ಇತರ ರೋಗಗಳು ನಮ್ಮ ದೇಹವನ್ನು ಪ್ರವೇಶಿಸದಂತೆ ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು. ಇದರ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವೈದ್ಯರಾದ ಡಾ. ಚಾರು ಕೋಸ್ಲಾ ಮಾತನಾಡಿ ಒಂದು ಯುನಿಟ್ ರಕ್ತ ಸುಮಾರು ೪೨ ಜೀವಗಳನ್ನು ಕಾಪಾಡುತ್ತದೆ ಎಂದು ರಕ್ತದಾನದ ಮಹತ್ವವನ್ನು ವಿವರಿಸಿದರು.

ದಾಖಲೆಯ 115 ಜನರಿಂದ ರಕ್ತದಾನ
ಪ್ರತಿವರ್ಷದಂತೆ ಈ ಬಾರಿಯೂ ರಕ್ತದಾನದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು ಸುಮಾರು ೧೩೫ಕ್ಕೂ ಅಧಿಕ ಜನರು ರಕ್ತ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದು ಇದರಲ್ಲಿ ೧೧೫ ಜನರು ರಕ್ತದಾನ ಮಾಡುವ ಮೂಲಕ ಈ ಪುಣ್ಯಕಾರ್ಯದಲ್ಲಿ ಕೈ ಜೋಡಿಸಿದರು. ಕಳೆದ ವರ್ಷವೂ ೧೧೫ ಜನರು ರಕ್ತದಾನ ಮಾಡಿರುವುದು ಮತ್ತೊಂದು ವಿಶೇಷ. ‘ದಸ್ಕತ್’ ಸಿನಿಮಾದ ನಾಯಕ ನಟ ದೀಕ್ಷಿತ್ ಕೆ ಅಂಡಿಂಜೆ ರಕ್ತದಾನ ಮಾಡುವ ಮೂಲಕ ಮಾದರಿಯಾದರು.

ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಧ್ಯಪಕರಾದ ಡಾ.ಪ್ರವೀಣ್ ರಾಜ್ ಆಳ್ವಾ, ಯುವ ವಾಹಿನಿ ಮೂಡಬಿದ್ರೆ(ರಿ) ಅಧ್ಯಕ್ಷರಾದ ಮುರುಳೀಧರ್ ಕೋಟ್ಯಾನ್, ಸರ್ವೋದಯ ಫ್ರೇಂಡ್ಸ್ ನ ಅಧ್ಯಕ್ಷರಾದ ಗುರು ಒಂಟಿಕಟ್ಟೆ, ರೋಟರಿ ಕ್ಲಬ್ ಅಫ್ ಮೂಡಬಿದ್ರೆ(ರಿ) ಟೆಂಪಲ್ ಟೌನ್ ಅಧ್ಯಕ್ಷರಾದ ಪೂರ್ಣಚಂದ್ರ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಬಿಂದ್ಯಾ ಶರತ್ ಶೆಟ್ಟಿ ಹಾಗೂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜವನೆರ್ ಬೆದ್ರ ಫೌಂಡೇಶನ್(ರಿ) ಸಂಘಟನೆಯ ಸ್ಥಾಪಕಾಧ್ಯಕ್ಷರಾದ ಅಮರ್ ಕೋಟೆ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ನುಡಿಗಳಾನ್ನಾಡಿದರು. ಸುಮಾಲತಾ ಅವರು ಗೌರವ ಸನ್ಮಾನ ಪಡೆದ ೧೫ ‘ರಕ್ತ ನಿಧಿ ಮಾಣಿಕ್ಯರ’ ಪ್ರಶಸ್ತಿ ಪ್ರಮಾಣ ಪತ್ರ ವಾ‍ಚಿಸಿದರು ಹಾಗೂ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಪ್ರಥಮ್ ಎಸ್ ಬನ್ನಡ್ಕ ಅವರು ವಂದಿಸಿದರು.

ಜವನೆರ್ ಬೆದ್ರ ಫೌಂಡೇಶನ್(ರಿ) ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿಗಳಾದ ರಾಜೇಶ್ ಕೋಟೆಗಾರ್, ರಂಜಿತ್ ಶೆಟ್ಟಿ, ಟ್ರಸ್ಟಿ ಜವನೆರ್ ಬೆದ್ರ ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ ,ಜವನೆರ್ ಬೆದ್ರರಕ್ತ ನಿಧಿಯ ಸಂಚಾಲಕ ಮನು ಎಸ್ ಒಂಟಿಕಟ್ಟೆ,ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ ನ ಶ್ರೀಮತಿ ಸಹನಾ, ಜವನೆರ್ ಬೆದ್ರ ಭಕುತಿ ಭಜನ ವೃಂದ ಸಂಚಾಲಕ ಪ್ರಥಮ್ ಎಸ್ ಬನ್ನಡ್ಕ ಸೇರಿ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here