ಮಂಗಳೂರು: ವರೇಕಳ ಶ್ರೀನಾಗಬ್ರಹ್ಮ ಮೂಲಸ್ಥಾನ ಹಾಗೂ ಧೂಮಾವತಿ, ಬಂಟ ಮತ್ತಿತರ ಪರಿವಾರ ದೈವಗಳ ಸೇವಾ ಟ್ರಸ್ಟ್ ಹರೇಕಳದ ಶ್ರೀ ದೈವದ ತರವಾಡು ಮನೆಯ “ಗೃಹಪ್ರವೇಶ” ಮತ್ತು ಶ್ರೀ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ 17- 18 ರಂದು ನಡೆಯಲಿದೆ.
ಕಾರ್ಯಕ್ರಮಗಳ ವಿವರ
ದಿನಾಂಕ : 17-05-2025ನೇ ಶನಿವಾರ ಸಾಯಂಕಾಲ ಗಂಟೆ 6.00 ರಿಂದ ಶಿಲ್ಪಿಗಳಿಂದ ಆಲಯ ಪರಿಗ್ರಹ, ಸ್ವಸ್ತಿ ಪುರ್ಣಾರ್ಚನೆ, ವಾಸ್ತು ಪೂಜೆ. ವಾಸ್ತು ಹೋಮ, ರಕ್ಷೋಘ್ನ ಹೋಮ, ಸುದರ್ಶನ ಹೋಮ, ವಾಸ್ತುಬಲಿ, ದಿಕ್ಬಾಲ ಬಲಿ, ಇತ್ಯಾದಿ ವೈದಿಕ ಕಾರ್ಯಕ್ರಮಗಳು ಜರುಗಲಿದೆ.
ದಿನಾಂಕ : 18-05-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 6.30 ರಿಂದ
ನಾಗಬ್ರಹ್ಮ ದೇವರಿಗೆ ತನು ತಂಬಿಲ, ಆಶ್ಲೇಷ ಪೂಜೆ, 108 ಕಾಯಿಯ ಗಣಯಾಗ, ಶ್ರೀ ದುರ್ಗಾ ಹೋಮ, ಕಲಶ ಪ್ರಧಾನ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ದೈವ ಪ್ರತಿಷ್ಠೆ, 108 ಕಲಶಾಭಿಷೇಕ, ದೈವಗಳಿಗೆ ಪರ್ವ, ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 3.00ಕ್ಕೆ ಮೂಲ ಮೈಸಂದಾಯ ದೈವದ ನೇಮೋತ್ಸವ, ಸಂಜೆ ಗಂಟೆ 5.00ಕ್ಕೆ ಜುಮಾದಿ ಬಂಟ ದೈವಗಳಿಗೆ ನೇಮೋತ್ಸವ, ರಾತ್ರಿ ಗಂಟೆ 9.00ಕ್ಕೆ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ, ರಾತ್ರಿ ಗಂಟೆ 1.00ಕ್ಕೆ ಕಲ್ಲುರ್ಟಿ ಪಂಜುರ್ಲಿ ಹಾಗೂ ರಾಹು ಗುಳಿಗೆ ದೈವಗಳಿಗೆ ನೇಮೋತ್ಸವ ಜರುಗಲಿದೆ.
ದಿ. 19-05-2025ನೇ ಸೋಮವಾರ 4.00ರಿಂದ ದೈವಗಳಿಗೆ ಪರ್ವ ಜರಗಲಿರುವುದು.
ವರೇಕಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಜಗತ್ತನ್ನು ಸಂಗೀತದ ಶಬ್ದದಿಂದ ಕದಡಿಸಿದ ‘ಕೆಜಿಎಫ್’, ‘ಸಲಾರ್’, ‘ಉಗ್ರಂ’ ಹಿಟ್ ಮ್ಯಾಜಿಷಿಯನ್ — ನಮ್ಮ ಕರಾವಳಿ ಗರ್ವ ಶ್ರೀ ರವಿ ಬಸ್ರೂರು ಹಾಗೂ ಕನ್ನಡ ಕಿರುತೆರೆಯ ಖ್ಯಾತ ನಟಿ ಆಶಾ ಅಯ್ಯನರ್ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
ಹಿನ್ನೆಲೆ: ಒಂದು ಪವಿತ್ರವಾದ ಮತ್ತು ಕಾರಣಿಕ ಕ್ಷೇತ್ರವೆಂದು ಪ್ರಸಿದ್ದಿ ಪಡೆದುಕೊಂಡು ಬಂದಿರುತ್ತದೆ ಮತ್ತು ಈ ಕ್ಷೇತ್ರಕ್ಕೆ ವೈಶಿಷ್ಟ್ಯಮಯವಾದ ಸ್ಥಾನಮಾನವಿದೆ. ಈ ಕ್ಷೇತ್ರವು ಉಳ್ಳಾಲ(ಮಂಗಳೂರು) ತಾಲೂಕಿನ ಹರೇಕಳ ಗ್ರಾಮದ ವರೇಕಳ ಎಂಬ ಪ್ರದೇಶದಲ್ಲಿರುತ್ತದೆ. ಶ್ರೀ ಕ್ಷೇತ್ರದಲ್ಲಿ ಶ್ರೀ ನಾಗಬ್ರಹ್ಮ, ನಾಗ ರಕೇಶ್ವರಿ, ನಾಗ ಕನ್ನಿಕೆ, ನಂದಿ, ಕ್ಷೇತ್ರ ಪಾಲ,ಬ್ರಮರಾಂಬೆ ಗುಳಿಗ ಮುಂತಾದ ಪಂಚ ಶಕ್ತಿಗಳು ನಾಗ ಬನದಲ್ಲಿದ್ದು ಮತ್ತು ಧೂಮಾವತಿ ಬಂಟ,ಮೂಲ ಮೈಸಾಂದಾಯ ಹಾಗೂ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಹಾಗೂ ರಾಹು ಗುಳಿಗ ದೈವಗಳಿಗೆ ಆರಾಧನೆ ಪಡೆಯುವ ಸಮ್ರದ್ದ ಪ್ರಕೃತಿಯ ಮಡಿಲಲ್ಲಿ ಇರುವ ದೈವ ಸಾನಿಧ್ಯವಾಗಿದೆ. 1997 ರಲ್ಲಿ ಶ್ರೀ ಕ್ಷೇತ್ರದ ನಾಗಬನವನ್ನು, 2023 ರಲ್ಲಿ ಮೂಲ ಮೈಸಾಂದಾಯ, ಅಣ್ಣಪ್ಪ ಪಂಜುರ್ಲಿ ದೈವಗಳ ಸಾನಿಧ್ಯ ಪ್ರತಿಷ್ಠೆ, ಅಶ್ವಥ ಕಟ್ಟೆಯನ್ನು ಶಿಲಾಕಲ್ಲಿನಿಂದ ಮಾಡಿಕೊಂಡಿದ್ದು, ಪ್ರಸ್ತುತ ಲೋಕಕಲ್ಯಾಣಕ್ಕಾಗಿ ಶ್ರೀ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಕೈಗೊಳ್ಳಲಾಗಿದ್ದು ಈಗಾಗಲೇ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾಮಗಾರಿಗಳು ಚಾಲನೆಯಲ್ಲಿರುತ್ತದೆ.
ಜುಮಾದಿ ಬಂಟ ಧರ್ಮ ಚಾವಡಿಯ ಜೀರ್ಣೋದ್ಧಾರದ ಕೆಲಸಗಳು ಈಗಾಗಲೇ ಅರ್ಧಬಾಗದಷ್ಟು ನಡೆದಿದ್ದು, ನಾಗ ದೇವರ ಹಾಗೂ ದೈವಗಳ ಸುತ್ತು ಬಳಿ ಮತ್ತು ಕೆರೆಯನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ಈ ಎಲ್ಲಾ ಜೀರ್ಣೋದ್ಧಾರ ಕಾಮಗಾರಿಗಳಿಗೆ ಸುಮಾರು 1 ಕೋಟಿ 30 ಲಕ್ಷ ವೆಚ್ಚ ತಗುಲುವುದಾಗಿ ಅಂದಾಜಿಸಲಾಗಿದೆ ಹಾಗೂ ಆದಷ್ಟು ಬೇಗ ಜೀರ್ಣೋದ್ಧಾರ ಕಾಮಗಾರಿಗಳನ್ನು ಮುಗಿಸಿ ಇದೇ ಬರುವ ಮೇ ತಿಂಗಳ 17 ಮತ್ತು 18ನೇ ತಾರೀಖಿನಂದು ಊರ ಪರವೂರ ಎಲ್ಲಾ ಸರ್ವ ಭಕ್ತಾದಿಗಳ, ದಾನಿಗಳ ಸಹಕಾರದೊಂದಿಗೆ ಬ್ರಹ್ಮಕಲಶ ಮತ್ತು ಪುನರ್ ಪ್ರತಿಷ್ಠೆ ಮಾಡುವುದಾಗಿ ನಿಶ್ಚಯಿಸಲಾಗಿದೆ.