ಸರ್ವ ಧರ್ಮದ ಸಮಭಾವ ನಮ್ಮದಾಗಲಿ – ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

0
93

ವರದಿ ರಾಯಿ ರಾಜ ಕುಮಾರ
ಸರ್ವಧರ್ಮಗಳೂ ಸಹಕಾರ, ಸಹಬಾಳ್ವೆ, ಶಾಂತಿಯುತ ಬದುಕನ್ನು ಸಾರುತ್ತವೆ. ಅದನ್ನು ಅಳವಡಿಸಿಕೊಂಡಲ್ಲಿ ಎಲ್ಲರ ಬದುಕು ಉತ್ತಮವಾಗುತ್ತದೆ. ಅದರಿಂದಲೇ ದೇಶದ ಪ್ರಗತಿ, ಅಭಿವೃದ್ಧಿ ಸಾಧ್ಯ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನವನ್ನು ಇತ್ತರು.

ಅವರು ಮೂಡುಬಿದಿರೆ ಅಲಂಗಾರು ಸಂತ ಥೋಮಸ್ ವಿದ್ಯಾ ಸಂಸ್ಥೆಗಳು ಹಾಗೂ ಹೋಲಿ ರೋಜರಿ ಚರ್ಚ್ ಸಹಭಾಗಿತ್ವದಲ್ಲಿ ಬಂದುತ್ವ ಕ್ರಿಸ್ಮಸ್ ಸ್ನೇಹಕೂಟ 2025ರ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮ ಗುರು ವಂ. ಫಾ. ಮೆಲ್ವಿನ್ ನೊರೊನ್ಹಾ ಮಾತನಾಡಿ ಶಾಂತಿ, ಸಹಬಾಳ್ವೆ ಎಲ್ಲ ಧರ್ಮಗಳ ಮೂಲ ಸಿದ್ಧಾಂತ. ಮಕ್ಕಳಲ್ಲಿ ಪ್ರೀತಿಯನ್ನು, ಸಹೋದರತ್ವವನ್ನು ಬೆಳೆಸುವಂತೆ ಕೇಳಿಕೊಂಡರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಪಿಕೆ ತೋಮಸ್, ಆಳ್ವಾಸ್ ಕಾಲೇಜಿನ ಡಾ. ಯೋಗೀಶ್ ಕೈರೋಡಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಲ್ ಸಲಾಂ, ವಿದ್ಯಾ ಸಂಸ್ಥೆಯ ಮದರ್ ಜನರಲ್ ಸಿ ಸುನೀತಾ, ಚರ್ಚ್ ಪಾಲನಾ ಮಂಡಳಿಯ ಎಡ್ವರ್ಡ್ ಸೆರಾವು,ಅನಿಲ್ ಲಾರೆನ್ಸ್ ಡಿಕುನ್ಹ, ಜಾನೆಟ್ ಮಿರಾಂದ, ಕ್ಲಾರಿಯೋ ಡಿಸೋಜಾ, ಅಲ್ಫೋನ್ಸಾ, ಮು.ಶಿ. ಸಿಲ್ವಿಯಾ ಬೇಸಾಯ, ಉಪಸ್ಥಿತರಿದ್ದರು.
ರಾಜೇಶ್ ಕಡಲಗೆರೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು , ಶಿಕ್ಷಕರಾದ ಕುಸುಮ ಮತ್ತು ಸೂರ್ಯನಾರಾಯಣ ಭಟ್ ಕಾರ್ಯಕ್ರಮ ನಿರ್ವಹಿಸಿದರು, ಸಂತೋಷ್ ವಂದಿಸಿದರು .

LEAVE A REPLY

Please enter your comment!
Please enter your name here