ಬೆಳ್ಮಣಿನ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಲಯನ್ಸ್ ಕ್ಲಬ್ ಬೆಳ್ಮಣಿನ ಆತಿಥ್ಯದಲ್ಲಿ ಸಂತ ಜೋಸೆಫರ ದೇವಾಲಯ ಬೆಳ್ಳಣ್ಣು, ಗ್ರಾಮ ಪಂಚಾಯತ್ ಬೆಳ್ಳಣ್ಣು, ನಂದಳಿಕೆ ಮತ್ತು ಬೋಳ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾ ಪರಮೇಶ್ವರಿ ಫ್ರೆಂಡ್ಸ್ ಕ್ಲಬ್,
ರೋಟರಿ ಕ್ಲಬ್ ಬೆಳ್ಳಣ್ಣು, ಜೆಸಿಐ ಬೆಳ್ಳಣ್ಣು, ನವಚೇತನ ಸೇವಾ ಬಳಗ ತೋಡಾರು, ವಿಕಾಸ ಭಾರತ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು ಮತ್ತು ಶ್ರೀ ಗುರುದುರ್ಗಾ ಮಿತ್ರ ಮಂಡಳಿ ನಂದಳಿಕೆ ಹಾಗೂ ಸ್ಥಳೀಯ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಅಕ್ಟೋಬರ್ 11, 2026 ರಂದು ನಡೆಯಲಿದೆ.
ಆರೋಗ್ಯ ಶಿಬಿರದಲ್ಲಿ ರಕ್ತದ ಸಕ್ಕರೆ ಅಂಶದ ಪರೀಕ್ಷೆ, ಕೊಬ್ಬಿನಾಂಶ, ಇಸಿಜಿ, ರಕ್ತದೊತ್ತಡ ಪರೀಕ್ಷೆ, ಕಣ್ಣಿನ ತಪಾಸಣೆ, ಮೂಳೆ ಮತ್ತು ಕೀಲುರೋಗ ಪರೀಕ್ಷೆ, ಹೃದ್ರೋಗ ಪರೀಕ್ಷೆ, ಚರ್ಮರೋಗ ಪರೀಕ್ಷೆ, ನರರೋಗ ಪರೀಕ್ಷೆ ಇನ್ನಿತರ ಪರೀಕ್ಷೆಯನ್ನು ನಡೆಯಲಿದೆ. 10 ದಿನದ ಔಷದಿಯನ್ನು ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕೆಂದು ಲಯನ್ಸ್ ಕ್ಲಬ್ ಬೆಳ್ಮಣ್‌ನ ಅಧ್ಯಕ್ಷರಾದ ಲಾ ಬಿ.ಎಚ್. ಶಿವರಾಮ್ ಆಚಾರ್ಯರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
