ಜೆಪ್ಪಿನಮೊಗರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಹಾವಳಿಯಿಂದ ಮನೆಗಳು ಮತ್ತು ಸೊತ್ತುಗಳು ನಾಶವಾಗಿದ್ದು ಇದಕ್ಕೆ ಪ್ರಮುಖ ಕಾರಣ ಚರಂಡಿಗಳಲ್ಲಿ ನೀರು ಹರಿಯದೇ ಇರುವುದು ಅನೇಕ ಕಡೆಗಳಲ್ಲಿ ಚರಂಡಿಗಳನ್ನು ಮುಚ್ಚಿಡುವುದು ಕಾರಣವಾಗಿದೆ. ನಾಗಲ್ಲು, ಎರುಂಡೆ ತೋಟದ ಬಳಿ ರಾಜ ಕಾಲುವೆ ಸುಮಾರು 30 ಅಡಿ ಕೊಚ್ಚಿ ಹೋಗಿ ಜಪ್ಪಿನಮೊಗರು ಗಣೇಶ್ ನಗರ, ಹೊಯಿಗೆ ರಾಶಿ, ವೈದ್ಯನಾಥ ನಗರ ಮುಖ್ಯ ರಸ್ತೆ ಜಲಾವೃತವಾದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕಾಗಿ ಸಣ್ಣ ನೀರಾವರಿ ಇಲಾಖೆಗೆ ಸುಮಾರು 75 ಲಕ್ಷದ ಅನುದಾನ ನೀಡುವಂತೆ ಸಚಿವರಿಗೆ ಅಗ್ರಹಿಸಿದರು. ನಂತರ ಸಾರ್ವಜನಿಕ ಗಣೇಶೋತ್ಸವ ಕಛೇರಿ ಮುಂಭಾಗ ತೋಡು ಕಿರಿದಾಗಿದ್ದು ನೀರು ಸರಾಗವಾಗಿ ಹರಿಯದೆ ಅಂಗಡಿ ಮತ್ತು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಉಂಟಾದ ಹಾನಿ ಹಾಗೂ ಕೆಂಗೋಳಿಮಾರ್ ಪ್ರದೇಶದಲ್ಲಿ ರಸ್ತೆ ಕೆಸರುಮಯವಾದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ನಗರ ಪಾಲಿಕೆಯ ಅಧಿಕಾರಿಗಳಿಗೆ ಹಾಗೂ ಅಯುಕ್ತರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜೆ. ನಾಗೇಂದ್ರ ಕುಮಾರ್ ಮಾಜಿ ಕಾರ್ಫೋರೇಟರ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಸುಧಾಕರ್ ಜೆ. ಅಮರ್ ನಾಥ್ ಭಂಡಾರಿ ತಾರ್ದೋಲ್ಯ, ದಾಮೋದರ್ ಕಿರೊಡಿಯನ್, ಉಮೇಶ್ ಶೇಟ್ಟಿ ಕಂರ್ಬೆಟ್ಟು, ಪ್ರಶಾಂತ್ ಡಿಸೋಜಾ, ಹರೀಶ್ ಕುಮಾರ್, ಯೋಗಿಶ್ ರೈಬ್ರಹ್ಮರ ಬೆಟ್ಟು, ಶ್ರೀಮತಿ ಶಕೀಲಶೆಟ್ಟಿ, ಶ್ರೀಮತಿ ಕವಿತಾ ಮುರಗೇಶ್, ಜಮೀಳಾ, ಸಂತೋಷ್ ಕುಮಾರ್ , ಮೊದಲಾದವರು ಜೊತೆಗಿದ್ದರು.