1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಇಂದ್ರಾಳಿ ಮಂಚಿ ಕುಮೇರಿ ಸಮುದಾಯ ಭವನ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟನೆ

0
14

ಉಡುಪಿ ನಗರಸಭೆಯ ಇಂದ್ರಾಳಿ ವಾರ್ಡಿನ ಮಂಚಿ ಕುಮೇರಿಯಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಭವನವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ನಗರಸಭೆಯ ನಗರೋತ್ಥಾನ ಯೋಜನೆಯಡಿ ಮಂಚಿ ಕುಮೇರಿ ಭಾಗದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡ ಸಮುದಾಯದ ಜನತೆಯ ಉಪಯೋಗಕ್ಕಾಗಿ ಸುಮಾರು 1 ಕೋಟಿ ಅನುದಾನ ಒದಗಿಸಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗಿದ್ದು, ಈ ಸಮುದಾಯ ಭವನದ ಮೂಲಕ ಪರಿಶಿಷ್ಟ ಪಂಗಡ ಸಮಾಜದ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಿಗೆ ಬಳಕೆಯಾಗಿ ಸಮಾಜದ ಸಮಗ್ರ ಅಭಿವೃದ್ಧಿಗೆ ಶಕ್ತಿ ತುಂಬಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಸುಮಿತ್ರಾ ನಾಯಕ್, ಮಾಜಿ ಸದಸ್ಯರಾದ ಅಶೋಕ್ ನಾಯ್ಕ್, ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಸ್ಥಳೀಯ ಮುಖಂಡರಾದ ಪ್ರಭಾಕರ್ ಶೆಟ್ಟಿ, ಅರವಿಂದ್ ಶೆಟ್ಟಿ, ರವೀಂದ್ರ ನಾಯಕ್, ಸೀತಾರಾಮ್ ನಾಯಕ್, ರತ್ನಾಕರ ಇಂದ್ರಾಳಿ, ಗೋಪಾಲ್ ಪೂಜಾರಿ, ದೇವದಾಸ್ ನಾಯಕ್, ಪಾಂಡುರಂಗ ನಾಯಕ್, ಲೋಕಯ್ಯ ಬಿ., ದಯಾನಂದ್, ಸಂತೋಷ್ ಶೆಟ್ಟಿ, ಸುಂದರ್, ಸುರೇಶ್, ಹರೀಶ್ ಎನ್. ದೇವಾಡಿಗ, ಚಂದ್ರಿಕಾ ನಾಯಕ್, ಸುಜಲ ಸತೀಶ್, ಸುಗುಣ ನಾಯ್ಕ್, ಪ್ರಜ್ಞಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here