ಮೂಡುಬಿದಿರೆ: ಬಸ್ ಸ್ಟಂಡ್ ಗೆ ಬರುತ್ತಿದ್ದ ಬಸ್ ಮತ್ತು ಓಮಿನಿ ನಡುವೆ ಅಪಘಾತ ಸಂಭವಿಸಿದ ಘಟನೆ ಇಂದು (ಜೂನ್ 13ರಂದು) ಮೂಡುಬಿದಿರೆಯಲ್ಲಿ ನಡೆದಿದೆ.
ಶಿರ್ತಾಡಿಯಿಂದ ಮೂಡುಬಿದಿರೆಗೆ ಧಾವಿಸುತ್ತಿದ್ದ ಜೀವನ್ ಬಸ್ ಮತ್ತು ಎದುರುಗಡೆಯಿಂದ ಬಂದ ಓಮಿನಿ ಕಾರು ನಡುವೆ ಮೂಡುಬಿದಿರೆಯ ನಾಗರಕಟ್ಟೆ ಅಪೋಲೊ ಮೆಡಿಕಲ್ ಬಳಿ ಅಪಘಾತ ಸಂಭವಿಸಿದ್ದು, ಓಮಿನಿ ಎದುರು ಭಾಗ ನಜ್ಜು ಗುಜ್ಜಾಗಿದ್ದು, ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಘಟನಾ ಸ್ಥಳಕ್ಕೆ ಈಗಾಗಲೇ ಪೋಲಿಸರು ಆಗಮಿಸಿದ್ದು ಇನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.