ಕೋಮು ಸಂಘರ್ಷ ತಡೆಗೆ ವಿಶೇಷ ಕಾರ್ಯಪಡೆಗೆ ಚಾಲನೆ

0
185


ತುಳುನಾಡಿನಲ್ಲಿ ಕೋಮು ಸಂಘರ್ಷವನ್ನು ತಡೆಯಲು ಸೃಜಿಸಲಾದ ವಿಶೇಷ ಕಾರ್ಯಪಡೆ (ಸ್ಪೆಷಲ್‌ ಆಯಕ್ಷನ್‌ ಫೋರ್ಸ್‌)ಗೆ ಜೂ.13ರಂದು (ಇಂದು) ಚಾಲನೆ ದೊರೆಯಲಿದೆ.
ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಕಾರ್ಯಪಡೆಯನ್ನು ಉದ್ಘಾಟಿಸಲಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ.
ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

ನಾಲ್ಕು ಜಿಲ್ಲೆ – 248 ಮಂದಿ
ರಾಜ್ಯದ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ದರ್ಜೆಯ 656 ಹುದ್ದೆಗಳಲ್ಲಿ 248 ಹುದ್ದೆಗಳನ್ನು ಬೇರ್ಪಡಿಸಿ, ವಿಶೇಷ ಕಾರ್ಯ ಪಡೆಯನ್ನು ಸ್ಥಾಪಿಸ ಲಾಗಿದೆ. ಡಿಐಜಿಪಿ ಹುದ್ದೆ-1, ಡಿವೈಎಸ್‌ಪಿ (ಸಿವಿಲ್‌)-1, ಸಹಾಯಕ ಕಮಾಂಡೆಂಟ್‌ -1, ಪಿಐ/ ಆರ್‌ಪಿಐ-4, ಪಿಎಸ್‌ಐ/ಆರ್‌ಎಸ್‌ಐ/ಎಸ್‌ಐ-16, ಸಿಎಚ್‌ಸಿ -60, ಸಿಪಿಸಿ/ಎಪಿಸಿ-150 ಮತ್ತು ಅನುಯಾಯಿ -15 ಸೇರಿ 248 ಹುದ್ದೆಗಳಿವೆ.

ಮಂಗಳೂರು ಕೇಂದ್ರ
ಕೇಂದ್ರಸ್ಥಾನ ಮಂಗಳೂರಿನಲ್ಲಿ ಇರಲಿದ್ದು, ಉಡುಪಿ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಮತ್ತು ದ.ಕ. ಜಿಲ್ಲೆಯಲ್ಲಿ ಇದು ಕಾರ್ಯಾಚರಿಸಲಿದೆ. ಕೇಂದ್ರ ಸ್ಥಾನದಲ್ಲಿ ಡಿಐಜಿಪಿ ಹುದ್ದೆ-1, ಡಿವೈಎಸ್‌ಪಿ (ಸಿವಿಲ್‌)-1, ಸಹಾಯಕ ಕಮಾಂಡೆಂಟ್‌-1, ಪಿಐ/ಆರ್‌ಪಿಐ-1, ಪಿಎಸ್‌ಐ/ ಆರ್‌ಎಸ್‌ಐ/ಎಸ್‌ಐ-1, ಸಿಎಚ್‌ಸಿ -3, ಸಿಪಿಸಿ/ಎಪಿಸಿ-6 ಮಂದಿ ಸೇರಿದಂತೆ 15 ಮಂದಿಯ ತಂಡ ಇರಲಿದೆ.
ದ.ಕ., ಉಡುಪಿ ಜಿಲ್ಲಾ ಶಿವಮೊಗ್ಗ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಪಿಐ/ಆರ್‌ಪಿಐ-1, ಪಿಎಸ್‌ಐ/ಆರ್‌ಎಸ್‌ಐ/ಎಸ್‌ಐ-5, ಸಿಎಚ್‌ಸಿ -19, ಸಿಪಿಸಿ/ಎಪಿಸಿ-48 ಮತ್ತು ಅನುಯಾಯಿ 5 ಮಂದಿ ಸೇರಿ 78 ಮಂದಿ ಕಾರ್ಯಾಚರಿಸುವರು. ಉಡುಪಿ ಜಿಲ್ಲೆಯು ತಾತ್ಕಾಲಿಕವಾಗಿ ಮಂಗಳೂರು ನಗರ ವ್ಯಾಪ್ತಿಯ ಅಧೀನದಲ್ಲಿ ಬರಲಿದೆ ಎನ್ನಲಾಗಿದೆ.

ಮುಖ್ಯಸ್ಥರಾಗಿ ಮಂಗಳೂರು ಪೊಲೀಸ್‌ ಕಮಿಷನರ್‌
ಕಾರ್ಯಪಡೆಯ ಮುಖ್ಯಸ್ಥರಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಕಾರ್ಯ ನಿರ್ವಹಿಸುವರು. ಡಿವೈಎಸ್‌ಪಿ ಸ್ಥಾನಕ್ಕೆ ಮಂಗಳೂರಿನಲ್ಲಿ ಈ ಹಿಂದಿದ್ದ ಕೆ.ಯು.ಬೆಳ್ಳಿಯಪ್ಪ ಅವರನ್ನು ನಿಯೋಜಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ
ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯಪಡೆ ವಿಶೇಷ ನಿಗಾ ವಹಿಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆ ದಾಗ ತತ್‌ಕ್ಷಣ ಹಾಜರಾಗಲಿದೆ. ತಮ್ಮ ಆದ ಗುಪ್ತಚರ ದಳವನ್ನೂ ಈ ಕಾರ್ಯಪಡೆ ಹೊಂದುವ ಮೂಲದ ಸಂಭಾವ್ಯ ಕೋಮು ಹಿಂಸಾಚಾರ, ಗಲಭೆಯಂತಹ ಸಂಚುಗಳನ್ನು ವಿಫಲಗೊಳಿಸಲಿದೆ. ಕೋಮುದ್ವೇಷದ ವಿಷಯದ ಮೇಲೆ ನಿಗಾ ವಹಿಸುವುದು, ಮೂಲಭೂತ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುವುದು, ಜಾಲತಾಣಗಳ ಮೇಲೆ ಸೂಕ್ಷ್ಮ ನಿಗಾ ಇಡುವ ಕೆಲಸವನ್ನೂ ಗುಪ್ತಚರ ವಿಭಾಗದ ಮೂಲಕ ಮಾಡಲಿದೆ.

LEAVE A REPLY

Please enter your comment!
Please enter your name here