ಮೂಡುಬಿದಿರೆ ಗಣೇಶೋತ್ಸವ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

0
144

ಮೂಡುಬಿದಿರೆ: ಇಲ್ಲಿಯ ಸಮಾಜ ಮಂದಿರದಲ್ಲಿ ಆಗಸ್ಟ್ 27ರಿಂದ 31ರ ತನಕ ನಡೆಯುವ 62ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. ಪ್ರಾಂಶುಪಾಲ ಪ್ರಭಾತ್ ಬಲ್ನಾಡ್ ದೀಪ ಬೆಳಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಅವರು ಗಣೇಶೋತ್ಸವದ ಪ್ರಾರಂಭದ ಉದ್ದೇಶಗಳನ್ನು ನೆನಪಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಪಿ.ಎಂ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here