ಮಾಧ್ಯಮದ ವರದಿಗೆ ತಕ್ಷಣ ಸ್ಪಂದಿಸಿದ ಮೂಡುಬಿದಿರೆ ಪುರಸಭೆ: ಇನ್ನು ಎಚ್ಚೆತ್ತುಕೊಳ್ಳದ ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆ

0
293


ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಪುರಸಭಾ ವ್ಯಾಪ್ತಿಯೊಳಗಿನ ರಾಜ್ಯ ಹೆದ್ದಾರಿಯ ದುರವಸ್ಥೆಯನ್ನು ವರದಿ ಮಾಡಿದ ವರದಿಯನ್ನು ಪರಿಗಣಿಸಿ ತಕ್ಷಣವೇ ಪುರಸಭೆಯ ಅಧ್ಯಕ್ಷ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಜನಪ್ರತಿನಿಧಿಗಳು ರಸ್ತೆಯ ರಿಪೇರಿಗೆ ತೊಡಗಿದ್ದಾರೆ ಎನ್ನುವುದು ಬಹಳ ಸಂತೋಷಕರ ಸಂಗತಿಯಾಗಿದೆ. ಈಗಾಗಲೇ ಎರಡು ಕಡೆಯ ಹೊಂಡಗುಂಡಿಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ ಉಳಿದವುಗಳಿಗೂ ಇಂದು-ನಾಳೆಯೊಳಗೆ ಮುಕ್ತಿ ಕೊಡುವ ಭರವಸೆಯನ್ನು ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ನೀಡಿರುತ್ತಾರೆ. ನಿನ್ನೆಯಷ್ಟೇ ಮಾಧ್ಯಮದಲ್ಲಿ ಮಾಡಿದ ವರದಿಗೆ ತಕ್ಷಣ ಸ್ಪಂದಿಸಿದ ಎಲ್ಲರಿಗೂ ಕೂಡ ಧನ್ಯವಾದಗಳನ್ನು ಸಾರ್ವಜನಿಕರ ಪರವಾಗಿ ಸಲ್ಲಿಸಲಾಗುತ್ತಿದೆ.


ಮಾಧ್ಯಮದ ವರದಿಯನ್ನು ಕಂಡು ನೂರಾರು ನಾಗರಿಕರು ತಮ್ಮ ಬೆಂಬಲವನ್ನು ಸೂಚಿಸಿ ನೇರವಾಗಿ ಪುರಸಭೆಯವರಿಗೆ ಪೋನಾಯಿಸಿದ್ದಾರೆ ಎನ್ನುವುದು ಮಾಧ್ಯಮದವರಿಗೆ ತಿಳಿದು ಬಂದಿದೆ. ಹೀಗಾಗಿ ಪುರಸಭೆಯವರು ಕೂಡ ಆ ಬಗ್ಗೆ ತಕ್ಷಣ ಸ್ಪಂದಿಸಲು ಸಾಧ್ಯವಾಯಿತು. ಸ್ಪಂದಿಸಿದ ಎಲ್ಲಾ ನಾಗರಿಕರಿಗೂ ಕೂಡ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸಲಾಗುತ್ತಿದೆ.
ಆದರೆ ಬಹಳ ವಿಷಾಧಕರ ಸಂಗತಿ ಏನೆಂದರೆ ರಾಜ್ಯ ಹೆದ್ದಾರಿ ಪ್ರಾಧಿಕಾರವು ಇನ್ನೂ ಕೂಡ ಎಚ್ಚೆತ್ತುಕೊಳ್ಳದೆ ಇರುವುದು ಖೇದಕರ ಸಂಗತಿ. ಮೂಡುಬಿದಿರೆ-ಪುತ್ತಿಗೆ- ಕೊಡ್ಯಡ್ಕ, ಸಂಪಿಗೆ-ಕಿನ್ನಿಗೋಳಿ, ಸಿದ್ಧಕಟ್ಟೆ-ಬಂಟ್ವಾಳ, ನಡುವಿನ ರಸ್ತೆ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಸಂಪೂರ್ಣವಾಗಿ ಹದಗೆಟ್ಟಿದ್ದರೂ ರಾಜ್ಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಒಂದಿನಿತೂ ಗಮನ ಹರಿಸಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳುವುದೇ???????

LEAVE A REPLY

Please enter your comment!
Please enter your name here