ಮೂಡುಬಿದಿರೆ: ಕಡಲೆಕೆರೆಯ ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ನ ಪ್ರವರ್ತಿತ ಪ್ರೇರಣಾ ಶಿಶುಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ “ಶ್ರೀಕೃಷ್ಣ ಲೀಲೋತ್ಸವ ” ಜರುಗಿತು.
ಸಿಂಚನಾ ಸೌಹಾರ್ದ ಸಹಕಾರಿಯ ಸಿ.ಇ.ಒ. ಸಂಗೀತಾ ಪ್ರಭುರವರು ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಬೇಕಾದುದು ಪೋಷಕರ ಕರ್ತವ್ಯ . ಪೋಷಕರು ಧಾರ್ಮಿಕತೆಯನ್ನು ಪಾಲಿಸಿದರೆ ಮಕ್ಕಳಿಗೂ ಈ ಕುರಿತಾದ ಆಸಕ್ತಿ , ಅಭಿಮಾನ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಇಂತಹ ಸಂಸ್ಕಾರವನ್ನು ತಿಳಿಸುವ ಶ್ರೀಕೃಷ್ಣ ಲೀಲೋತ್ಸವ ಆಯೋಜನೆ ಅರ್ಥಪೂರ್ಣ ಎಂದರು.

ಸೇವಾಂಜಲಿಯ ಉಪಾಧ್ಯಕ್ಷರಾದ ಸೋಮನಾಥ ಕೋಟ್ಯಾನ್ ಮಾತನಾಡಿ, ವಿದ್ಯೆಯೊಂದಿಗೆ ಭಾರತೀಯ ಸಂಸ್ಕೃತಿ ಕಲಿಸಿ ಕೊಡುವುದು ಸೇವಾಂಜಲಿಯ ಉದ್ದೇಶ ಎಂದರು. ಸಭಾಧ್ಯಕ್ಷತೆ ವಹಿಸಿದ ಸೇವಾಂಜಲಿಯ ಸಂಚಾಲಕರಾದ ಎಂ. ಶಾಂತರಾಮ ಕುಡ್ವರು , ಶ್ರೀಕೃಷ್ಣ ಎಂದರೆ ಕಾಲ್ಪನಿಕ ವ್ಯಕ್ತಿ ಅಲ್ಲ . ಶ್ರೀಕೃಷ್ಣನ ಬಗ್ಗೆ ವೈಜ್ಞಾನಿಕ ಸಂಶೋಧನೆಯಾಗಿ ಶ್ರೀಕೃಷ್ಣನು ಹುಟ್ಟಿದ ದಿನಾಂಕ , ಸಾಧನೆ ಎಲ್ಲದಕ್ಕೂ ಸರಿಯಾದ ಸಾಕ್ಷಾಧಾರಗಳಿವೆ . ಶ್ರೀಕೃಷ್ಣನ ಬದುಕು ನಮಗೆಲ್ಲಾ ಆದರ್ಶವಾಗಬೇಕು ಎಂದು ನುಡಿದರು. ಪ್ರೇರಣಾ ಶಾಲೆಯ ಮುಖ್ಯೋಪಾಧ್ಯಾಯಿನಿ ವತ್ಸಲಾ ರಾಜೇಶ್ ರವರು ಉಪಸ್ಥಿತರಿದ್ದು, ಪುಟಾಣಿಗಳಿಗೆ ಶುಭ ಹಾರೈಸಿದರು. ಶಿಶುಮಂದಿರದ ಎಲ್ಲಾ 45 ಪುಟಾಣಿಗಳೂ ಶ್ರೀಕೃಷ್ಣ , ರಾಧೆಯ ವೇಷದಲ್ಲಿ ಕಾಣಿಸಿಕೊಂಡು ರಂಜಿಸಿದರು. ನಂತರ ಶ್ರೀಕೃಷ್ಣನ ಜೀವನದ ಘಟನೆಗಳನ್ನು ನೃತ್ಯದ ಮೂಲಕ ಅಭಿನಯಿಸಿ ಮೆಚ್ಚುಗೆ ಗಳಿಸಿದರು. ಶಿಶುಗಳ ಪೋಷಕರೂ ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶಿಶುಮಂದಿರದ ಮಾತಾಜಿ ಪುಷ್ಪಾ ಹೆಗ್ಡೆಯವರು ಕಾರ್ಯಕ್ರಮ ನಿರೂಪಿಸಿದರು. ಸ್ವಾತಿಯವರು ಧನ್ಯವಾದ ಸಲ್ಲಿಸಿದರು. ಶಾಲಾ ಸಿಬ್ಬಂದಿಗಳಾದ ಸುಜಿತ್ ಹಾಗೂ ನಾರಾಯಣರು ಸಹಕರಿಸಿದರು.

