ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ಹೆಚ್ಚಿನ ಶಿಬಿರಾರ್ಥಿಗಳು ಭಾಗವಹಿಸಲಿ: ಚಂದ್ರಶೇಖರ ಸಾಲ್ಯಾನ್

0
15

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ಇದರ ವತಿಯಿಂದ ಗುರಿಪಳ್ಳ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯ ವಾರದ ಭಜನೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿರುವ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ತಾಲೂಕು ಕಾರ್ಯದರ್ಶಿ ಚಂದ್ರಶೇಖರ್ ಇಂದಬೆಟ್ಟು, ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾಗಿರುವ ಶಶಿಧರ್ ಗೌಡ ಮನ್ನಡ್ಕ ಮತ್ತು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಮಂದಿರದಲ್ಲಿ ವಾರದ ಭಜನೆ ಮುಗಿದ ನಂತರ ಮಂಡಳಿಯ ಪದಾಧಿಕಾರಿಗಳಲ್ಲಿ ಸಮಾಲೋಚನೆ ನಡೆಸಿ ಭಜನಾ ಮಂದಿರದಲ್ಲಿ ಇರುವ ಕುಂದು ಕೊರತೆಗಳು ಮೂಲಸೌಕರ್ಯ ಮುಂದಕ್ಕೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿರುವ ಚಂದ್ರಶೇಖರ ಸಾಲ್ಯಾನ್ ರವರು ಮಾತನಾಡಿ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟ ಕಾರ್ಯಗಾರದ ಬಗ್ಗೆ ವಿವರವಾಗಿ ತಿಳಿಸಿ ತಮ್ಮ ಭಜನಾ ಮಂಡಳಿಯು ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ನೀಡಲಾಗುತ್ತಿರುವ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ಪಡೆದ ತಾಲೂಕಿನ ಪ್ರಥಮ ತಂಡವಾಗಿದ್ದು ಈ ವರ್ಷದ ಕಮ್ಮಟ ಭಜನಾ ಕಾರ್ಯಗಾರಕ್ಕೆ ತಮ್ಮ ಭಜನಾ ಮಂಡಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಬರುವಂತೆ ಪ್ರಯತ್ನಿಸಲು ಪದಾಧಿಕಾರಿಗಳಲ್ಲಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಪ್ರಧಾನ ಅರ್ಚಕರು, ಭಜನಾ ಮಂಡಳಿಯ ಗೌರವಾಧ್ಯಕ್ಷೆಯಾದ ಶ್ರೀಮತಿ ಬೇಬಿ ಉಮೇಶ್, ಅಧ್ಯಕ್ಷರಾಗಿರುವ ಶ್ರೀ ಹರೀಶ್ ಹಾಗೂ ಕಾರ್ಯದರ್ಶಿಯಾಗಿರುವ ಶ್ರೀಮತಿ ಮಮತಾ ಹಾಗೂ ಪದಾಧಿಕಾರಿಗಳು ಮತ್ತು ಭಜಕರು ಉಪಸ್ಥಿತರಿದ್ದರು. ಕಾರ್ಯದರ್ಶಿಯಾಗಿರುವ ಮಮತಾರವರು ಆಗಮಿಸಿರುವ ಅತಿಥಿಗಳನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

LEAVE A REPLY

Please enter your comment!
Please enter your name here