ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಬಳಿ ಮರಕ್ಕೆ ಆಕಸ್ಮಿಕ ಬೆಂಕಿ ತಗಲಿ ಸ್ಥಳೀಯರು ಭಯಭೀತರಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕೆಂಚನಕೆರೆ ಶಾಲೆಯ ಹೆದ್ದಾರಿ ಬದಿಯ ದೂಪದ ಮರಕ್ಕೆ ಏಕಾಏಕಿ ಬೆಂಕಿ ತಗಲಿ ಧಗಧಗನೆ ಉರಿಯಲಾರಂಭಿಸಿದೆ.
ಮರದ ಬದಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ವಿದ್ದ ಕಾರಣ ಕೂಡಲೇ ಸ್ಥಳೀಯರಾದ ಶಮೀನ ಆಳ್ವ ಅಗ್ನಿಶಾಮಕ ದಳ ಹಾಗೂ ಮುಲ್ಕಿ ಮೆಸ್ಕಾಂ ಇಲಾಖೆಗೆ ತಿಳಿಸಿದ್ದಾರೆ ಹಾಗೂ ಮರಕ್ಕೆ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಮುಲ್ಕಿ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಯಾರೋ ದುಷ್ಕರ್ಮಿಗಳು ಮರಕ್ಕೆ ಬೆಂಕಿ ಕೊಟ್ಟಿರಬಹುದು ಎಂದು ಶಂಕಿಸಲಾಗಿದೆ.

