ಮುಲ್ಕಿ: ಮಟ್ಟು ಶಾಂಭವಿ ಯುವ ಸಂಗಮ ವತಿಯಿಂದ ವಿದ್ಯಾ ನಿಧಿಯ ಸಹಾಯಾರ್ಥವಾಗಿ ಯುವ ಉತ್ಸವ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಮಟ್ಟು ಶ್ರೀ ಕೋರ್ದಬ್ಬು ದೈವಸ್ಥಾನದ ಬಳಿಯ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಉದ್ಘಾಟಿಸಿ ಮಾತನಾಡಿ , ಯುವ ಜನಾಂಗ ಋಣಾತ್ಮಕ ಚಿಂತನೆಯನ್ನು ತ್ಯಜಿಸಿ ಧನಾತ್ಮಕವಾಗಿ ಚಿಂತಿಸಬೇಕಾದ ಅಗತ್ಯವಿದೆ,ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಹಾಗೂ ಸಂಸ್ಕಾರ ಮೂಡಿಸುವ ಸೇವಾ ಸಂಸ್ಥೆಗಳ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಕಂಪಾಡಿ ಬಿಪಿ ಸಿ ಎಲ್ ಓ ಪಿ ಎಸ್ ನ ಮುಖ್ಯ ಪ್ರಬಂಧಕ
ವೈಎಸ್ ರಾಜ್ ಕಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್,ನಮ್ಮ ಕುಡ್ಲದ ಸುರೇಶ್ ಕರ್ಕೆರ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಶೇಖರ್ ಕುಕ್ಯಾನ್ ಮುಂಬೈ, ವಿಶ್ವೇಂದ್ರ ಅಮೀನ್ ಮುಂಬೈ, ಶಾಂಭವಿ ಯುವ ಸಂಗಮದ ಅಧ್ಯಕ್ಷ ಸಂತೋಷ್ ಸುವರ್ಣ,ಮಾಜೀ ಅಧ್ಯಕ್ಷ ಧನಂಜಯ ಮಟ್ಟು,ಮಹಿಳಾ ಮಂಡಲದ ಅಧ್ಯಕ್ಷೆ ಸವಿತಾ ಸುವರ್ಣ, ಮತ್ತಿತರರು ಉಪಸ್ಥಿತರಿದ್ದರು
ದಿನೇಶ್ ಕೊಲ್ನಾಡ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಇಂಗ್ಲಿಷ್ ಲಿಪಿಯನ್ನು ತುಳುವಿಗೆ ಅನುವಾದ ಮಾಡಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಸುವಿತ್ ಕುಮಾರ್ ಮಟ್ಟು ರವರನ್ನು ಸನ್ಮಾನಿಸಲಾಯಿತು ಹಾಗೂ ಆದರ್ಶ ಯುವಕ ಕೋಟಿ ಚೆನ್ನಯ್ಯ ಪ್ರಶಸ್ತಿ ಸುಖೇಶ್ ಕೋಟ್ಯಾನ್ ಮತ್ತುವಿಶ್ವನಾಥ, ಆದರ್ಶ ವಿದ್ಯಾರ್ಥಿ ಏಕಲವ್ಯ ಪ್ರಶಸ್ತಿ ಜೇಸ್ಟ ನ್ ಡಿಸೋಜಾ, ಆದರ್ಶ ಮಹಿಳೆ ರಾಣಿ ಅಬ್ಬಕ್ಕ ಪ್ರಶಸ್ತಿ- ರೇಖಾ ಮೇಘಾನಾದ ಮಟ್ಟು, ಆದರ್ಶ ಕೃಷಿಕ ಬೆನ್ನಿದ ಮಗೆ ಪ್ರಶಸ್ತಿ- ಸತೀಶ್ ಕುಮಾರ್ ಹೊಸ ಕೊಪ್ಪಲ,ಆದರ್ಶ ದಂಪತಿ-ಶಾಂತಾ ಜಯ ಸುವರ್ಣ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು ,ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.