ದಾವಣಗೆರೆ:ಸಂಗೀತ, ನೃತ್ಯ ಕೇವಲ ಮನರಂಜನೆಗೆ ಸೀಮಿತವಾಗದೇ ದೈಹಿಕ, ಮಾನಸಿಕ ಪರಿಜ್ಞಾನ, ಜ್ಞಾನಶಕ್ತಿ ಬೆಳೆಯುತ್ತದೆ. ಮಕ್ಕಳು ಕುಚೇಷ್ಠೆ, ಮಕ್ಕಳಾಟ ಸಹಜ. ಅದರೂ ಸಂಗೀತ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸಿಕೊಂಡರೆ ವಿದ್ಯಾಭ್ಯಾಸಕ್ಕೆ ಪರಿಪೂರ್ಣತೆ ಬರುತ್ತದೆ ಎಂದು ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರವರು ಇತ್ತೀಚಿಗೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ವರಾಹ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ಮಕ್ಕಳಿಗಾಗಿ ಸುಗಮ ಸಂಗೀತ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು.
ಶ್ರೀಮತಿ ಸುಮನಾರಾವ್ ಪುತ್ತೂರಿನ ಉದಯಗಾನ ಸಂಗೀತ ಕೇಂದ್ರದ ಉಪನ್ಯಾಸಕರಾದ ಮತ್ತು ಕುಮಾರಿ ಸುಪ್ರಜಾ ರಾವ್ ಸುಗಮ ಸಂಗೀತ ಕಾರ್ಯಾಗಾರ ವ್ಯವಸ್ಥಿತವಾಗಿ ಸುಶ್ರಾವ್ಯವಾಗಿ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಚಲನಚಿತ್ರಗೀತೆ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಸಂಗೀತ ಗುರುಗಳಾದ ಲತಾ ಕೇಶವ ಭಟ್, ಬಾಲಕೃಷ್ಣ ಚೆರುಗೋಳಿ ಉಪಸ್ಥಿತರಿದ್ದು ಯಶಸ್ವಿಯಾದ ಈ ಕಾರ್ಯಾಗಾರಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಸುನೀತಾ ಬೈಪಡಿತ್ತಾಯ, ಶ್ರೀರಾಮ ಕಾರಂತ್, ಚಂದನ್ ಕಾರಂತ್, ಅಶೋಕ ಬಾಡೂರು,ಶಶಿಕಲಾ ಮಯ್ಯ ಮುಂತಾದವರು ಉಪಸ್ಥಿತರಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನಾ ಪತ್ರ, ನೆನಪಿನ ಕಾಣಿಕೆ ವಿತರಿಸಲಾಯಿತು. ಶಿಬಿರಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ರಾಧಾಮಣಿ ಮೀಯಪದವು ಸ್ವಾಗತಿಸಿದರು, ಜಯಲಕ್ಷ್ಮಿ ಚಂದ್ರಶೇಖರ ಹೊಳ್ಳ ನಿರೂಪಿಸಿದರು. ತಾರಾ ಪವೀಣ್ ಕೊನೆಯಲ್ಲಿ ವಂದಿಸಿದರು.
ಸಂಗೀತ ಕೇವಲ ಮನರಂಜನೆಗೆ ಸೀಮಿತವಾಗದೆ ಜ್ಞಾನಶಕ್ತಿ ಬೆಳೆಯುತ್ತದೆ- ಜಯಲಕ್ಷ್ಮಿ ಕಾರಂತ್
RELATED ARTICLES